ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ವೇಳೆ ಪ್ರವಾಸಿಗರ ಮೇಲೆ ಕಾಡಾನೆ ಅಟ್ಯಾಕ್!‌ – ಆಮೇಲೆ ಏನಾಯ್ತು?

ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ವೇಳೆ ಪ್ರವಾಸಿಗರ ಮೇಲೆ ಕಾಡಾನೆ ಅಟ್ಯಾಕ್!‌ – ಆಮೇಲೆ ಏನಾಯ್ತು?

ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆ ಅನೇಕರು ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದಾರೆ. ಇದೀಗ ರಾಮನಗರದ ಪ್ರವಾಸಿ ತಾಣ ಸಂಗಮಕ್ಕೆ ಬಂದ ಪ್ರವಾಸಿಗರಿಗೆ ಶಾಕ್‌ ಎದುರಾಗಿದೆ. ಕಾವೇರಿ ನದಿ ನೀರಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ಅಟ್ಯಾಕ್‌ ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಈ ದಿನ ಮುಂಜಾನೆ 3 ಗಂಟೆಯಿಂದಲೇ ಮೆಟ್ರೋ ಸೇವೆ!

ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿ ಈ ಘಟನೆ ನಡೆದಿದೆ. ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ನೀರು ಕುಡಿಯಲು ನದಿಗೆ ಬಂದಿದೆ. ಈ ವೇಳೆ ಕಾಡಾನೆ  ಪ್ರವಾಸಿಗರ ಮೇಲೆ ಎರಗಿದೆ. ಈ ವೇಳೆ ಪ್ರವಾಸಿಗರು ಸ್ಥಳದಿಂದ ಎದ್ನೋಬಿದ್ನೋ ಎಂದು ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅಲ್ಲಿಂದ ಕಾಡಿನೊಳಗೆ ಕಾಲ್ಕಿತ್ತಿದೆ.

ಕಾಡಾನೆ ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಟಿಸಲಗ ಪ್ರವಾಸಿಗರ ಮೇಲೆ ದಾಳಿ ಮಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Shwetha M