ಬೆಂಗಳೂರಲ್ಲಿ ಆರ್‌ಸಿಬಿಗೆ 50ನೇ ಗೆಲುವು – ಸುದರ್ಶನ್ ಶತಕ ವ್ಯರ್ಥ, ಸೋತು ಶರಣಾದ ಗಿಲ್ ಪಡೆ

ಬೆಂಗಳೂರಲ್ಲಿ ಆರ್‌ಸಿಬಿಗೆ 50ನೇ ಗೆಲುವು – ಸುದರ್ಶನ್ ಶತಕ ವ್ಯರ್ಥ, ಸೋತು ಶರಣಾದ ಗಿಲ್ ಪಡೆ

ಆರ್‌ಸಿಬಿ ಗೆಲುವಿನ ಓಟ ಮುಂದುವರೆಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಸಿಕ್ಕ 50ನೇ ಐತಿಹಾಸಿಕ ಗೆಲುವು.

ಇದನ್ನೂ ಓದಿ:ಪ್ಲೇ ಆಫ್ ರೇಸ್ ಸ್ಟಾರ್ಟ್ – KKR, LSG, MIಗಿಲ್ವಾ ಚಾನ್ಸ್?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಸೀಸನ್‌ನ ಕೊನೆಯ ಲೀಗ್ ಪಂದ್ಯವನ್ನು ಆಡಿದ ಆರ್​ಸಿಬಿ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಎರಡನೇ ಸ್ಥಾನವನ್ನು ಅಲಂಕರಿಸಿತು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 206 ರನ್ ಕಲೆಹಾಕಿತು. ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಶತಕ ಬಾರಿಸಿದರು. 57 ಎಸೆತಗಳಲ್ಲಿ ಶತಕ ಪೂರೈಸಿದ ಸುದರ್ಶನ್​ಗೆ ಇದು ಮೂರನೇ ಐಪಿಎಲ್ ಶತಕವಾಗಿದೆ. ಅಂತಿಮವಾಗಿ ಸುದರ್ಶನ್ 58 ಎಸೆತಗಳಲ್ಲಿ 100 ರನ್ ಗಳಿಸಿ ಔಟಾದರು. ನಾಯಕ ಶುಭ್​ಮನ್ ಗಿಲ್ ಅವರೊಂದಿಗೆ ಮೊದಲ ವಿಕೆಟ್​ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಇವರಿಬ್ಬರು ಆಡುವಾಗ ಗುಜರಾತ್ ಬೃಹತ್ ಮೊತ್ತ ಕಲೆಹಾಕುವಂತೆ ತೋರುತ್ತಿತ್ತು. ಆದರೆ ನಾಯಕ ಶುಭಮನ್ ಗಿಲ್ 32 ರನ್ ಗಳಿಸಿ ಔಟಾಗುವುರೊಂದಿಗೆ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಆ ಬಳಿಕ ಬಂದ ಜೋಸ್ ಬಟ್ಲರ್ ಕೂಡ 25 ರನ್ ಗಳಿಸಿ ಔಟಾದರು. ಇಲ್ಲಿಂದ ಗುಜರಾತ್ ಇನ್ನಿಂಗ್ಸ್ ಕುಸಿಯಿತು. ವಿಶೇಷವೆಂದರೆ, ಗುಜರಾತ್ ಗಳಿಸಿದ 205 ರನ್‌ಗಳಲ್ಲಿ ಸುದರ್ಶನ್ ಅವರದ್ದೇ 100 ರನ್ ಗಳಿದ್ದವು. ಇನ್ನು ಸೆಂಚುರಿ ಸಿಡಿಸಿದ, ಸಾಯಿ ಸುದರ್ಶನ್ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ಐಪಿಎಲ್ ರನ್‌ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು.

ಗುಜರಾತ್ ನೀಡಿದ 206 ರನ್‌ಗಳ ಗುರಿ ಬೆನ್ನತ್ತಿದ ಆರ್​ಸಿಬಿ 19ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ಈ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನು ಆಡುತ್ತಿದ್ದ ಜಾಕೋಬ್ ಬೆಥೆಲ್ ಅವರನ್ನು ಸಿರಾಜ್ 14 ರನ್‌ಗಳಿಗೆ ಔಟ್ ಮಾಡಿದರು. ಆದರೆ ಅದಕ್ಕೂ ಮುನ್ನ ಮೊದಲ ಓವರ್​ನಲ್ಲಿಯೇ ವಿರಾಟ್ ಕೊಹ್ಲಿಗೆ ಜೀವದಾನ ನೀಡಲಾಯಿತು. ಸಿರಾಜ್ ಬೌಲಿಂಗ್‌ನಲ್ಲಿ, ಸುಂದರ್ ಸುಲಭವಾದ ಕ್ಯಾಚ್ ಕೈಬಿಟ್ಟರು. ವಿರಾಟ್‌ಗೆ ಜೀವದಾನ ನೀಡಿದ ಬಳಿಕ, ಗುಜರಾತ್ ಸಂಕಷ್ಟಕ್ಕೆ ಸಿಲುಕಿತು. ವಿರಾಟ್ ಕೊಹ್ಲಿ, ಪಡಿಕ್ಕಲ್ ಜೊತೆ ಸೇರಿ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರು ಕೇವಲ 26 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಹೀಗಾಗಿ ಆರ್‌ಸಿಬಿ ಒಂಬತ್ತು ಓವರ್‌ಗಳಲ್ಲಿ 100 ರನ್​ಗಳ ಗಡಿ ದಾಟಿತು.

Sulekha