RCB ಆಟಗಾರ ಫಿಲ್ ಸಾಲ್ಟ್ ಇಂಜುರಿ, ಬೆಥೆಲ್‌ಗೆ ಚಾನ್ಸ್ – GT ಪರ ಸಾಯಿಸುದರ್ಶನ್ ಭರ್ಜರಿ ಶತಕ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಕಾದಾಟ ನಡೆಯುತ್ತಿದೆ. ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದ್ದಾದರೆ.
ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ TOSSದೇ ಚಿಂತೆ – ಚೇಸಿಂಗ್ ಮಾಡಿದ್ರಷ್ಟೇ ಗೆಲ್ಲೋದಾ?
ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇಂಜುರಿಗೊಂಡಿರುವ ಫಿಲ್ ಸಾಲ್ಟ್ ಬದಲಿಗೆ ಜೆಕೋಬ್ ಬೆಥಲ್ ಆಡಲಿದ್ದಾರೆ. ಜೆಕೋಬ್ ಬೆಥಲ್‌ಗೆ ಅವಕಾಶ ಸಿಗುತ್ತಿಲ್ಲ ಅಂತಾ ಚರ್ಚೆ ನಡೆಯುತ್ತಿರುವಾಗಲೇ ಬೆಥಲ್‌ಗೆ ಚಾನ್ಸ್ ಸಿಕ್ಕಿದೆ.
ಟಾಸ್ ಗೆದ್ದ ಆರ್‌ಸಿಬಿ ಮೊದಲು ಗುಜರಾತ್ ತಂಡಕ್ಕೆ ಬ್ಯಾಟಿಂಗ್ ನೀಡಿದೆ. ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ಜಿಟಿ ಪಡೆ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಭರ್ಜರಿ ಶತಕ ಸಿಡಿಸಿದ್ದಾರೆ. ಸಾಯಿ ಸುದರ್ಶನ್‌ಗೆ ಇದು ಮೂರನೇ ಶತಕ. ಈ ಅಮೋಘ ಇನಿಂಗ್ಸ್ ಮೂಲಕ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಮತ್ತೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಇವರು ಐಪಿಎಲ್‌ನ 47ನೇ ಇನಿಂಗ್ಸ್‌ನಲ್ಲಿ 2000ಕ್ಕೂ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ನೋಡಿರಿ

