ದತ್ತುಪುತ್ರ Vs ಮನೆಮಗ – ರಿಟರ್ನ್ ಗಿಫ್ಟ್ ಕೊಡ್ತಾರಾ KING?
ಡೆಲ್ಲಿಯಲ್ಲೇ ಬೇಟೆಯಾಡುತ್ತಾ RCB?

2026ರ ಐಪಿಎಲ್ ಸೀಸನ್ ಈಗ ರೋಚಕ ಘಟ್ಟಕ್ಕೆ ಬಂದಿದೆ. ಟೂರ್ನಿಯ ಫಸ್ಟ್ ಆಫ್ ಕಂಪ್ಲೀಟ್ ಮಾಡಿರೋ ತಂಡಗಳು ಇನ್ಮುಂದೆ ಪ್ಲೇ ಆಫ್ ರೇಸ್ಗಾಗಿ ಪೈಪೋಟಿ ನಡೆಸಲಿವೆ. ಒಂದೊಂದು ಮ್ಯಾಚ್ಗಳೂ ಕ್ರೂಶಿಯಲ್ ಆಗ್ತಾ ಹೋಗುತ್ತೆ. ಸದ್ಯ 7 ಪಂದ್ಯಗಳನ್ನ ಆಡಿರೋ ಆರ್ಸಿಬಿಗೆ ನಾಳೆ ಫಸ್ಟ್ ರಿವೇಂಜ್ ಮ್ಯಾಚ್ ಇದೆ. ಅದೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ. ಕಳೆದ ವಾರ ಚಿನ್ನಸ್ವಾಮಿ ಮೈದಾನದಲ್ಲೇ ಆರ್ಸಿಬಿಯನ್ನ ಸೋಲಿಸಿರೋ ಡೆಲ್ಲಿಗೆ ಅವ್ರದ್ದೇ ಪಿಚ್ನಲ್ಲೇ ಸೋಲಿಸಿ ರಿವೇಂಜ್ ತಗೊಳ್ಳೋಕೆ ರೆಡಿಯಾಗಿದ್ದಾರೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ TOSSದೇ ಚಿಂತೆ – ಚೇಸಿಂಗ್ ಮಾಡಿದ್ರಷ್ಟೇ ಗೆಲ್ಲೋದಾ?
ಸೇಮ್ ಮಂತ್.. ಸೇಮ್ ಡೇಟ್.. ಸೇಮ್ ವೆನ್ಯೂ.. ಸೇಮ್ ಟೀಮ್ಸ್.. ಸೇಮ್ ಸಿಚುಯೇಷನ್. ಬಟ್ ವರ್ಷ ಚೇಂಜ್ ಅಷ್ಟೇ. ಅಂದ್ರೆ 2025ರ ಏಪ್ರಿಲ್ 27ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ಬೆಂಗಳೂರು ವರ್ಸಸ್ ಡೆಲ್ಲಿ ತಂಡಗಳು ಮುಖಾಮುಖಿ ಆಗಿದ್ವು. ಌಂಡ್ ಇದು ಆರ್ಸಿಬಿಗೆ ರಿವೇಂಜ್ ಮ್ಯಾಚ್ ಆಗಿತ್ತು. ಈಗ 2026ಕ್ಕೂ ಸೇಮ್ ಡೇಟ್ನಲ್ಲೇ ಅದೇ ಡೆಲ್ಲಿ ವಿರುದ್ಧ ಆರ್ಸಿಬಿ ರಿವೇಂಜ್ ಮ್ಯಾಚ್ಗೆ ರೆಡಿಯಾಗಿದೆ. ನಾಳೆ ಅರುಣ್ ಜೇಟ್ಲಿ ಮೈದಾನದಲ್ಲಿ ಆರ್ಸಿಬಿ ವರ್ಸಸ್ ಡೆಲ್ಲಿ ಫೈಟ್ ಇದೆ. ಮಸ್ಟ್ ಌಂಡ್ ಶುಡ್ ಬೆಂಗಳೂರು ತಂಡ ಈ ಪಂದ್ಯ ಗೆಲ್ಲಲೇಬೇಕು. ಯಾಕಂದ್ರೆ ಇದು ಕಿಂಗ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ಹೋಂ ಗ್ರೌಂಡ್ ಡಾಮಿನೇಷನ್ ಪ್ರಶ್ನೆ.
ಬೆಂಗಳೂರಲ್ಲಿ ರಾಹುಲ್ ಅಬ್ಬರ.. ಡೆಲ್ಲಿಯಲ್ಲಿ ಸೇಡು ತೀರಿಸಿಕೊಳ್ತಾರಾ ಕೊಹ್ಲಿ?
ಡೆಲ್ಲಿ ಮೂಲದವರಾದ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡ್ತಾರೆ. ಕನ್ನಡಿಗರ ಪಾಲಿಗೆ ಇವ್ರು ದತ್ತುಪುತ್ರ. ಇನ್ನು ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡ್ತಾರೆ ಇವ್ರು ಕನ್ನಡಿಗರಿಗೆ ಮನೆ ಮಗ. ಇಬ್ಬರೂ ಕನ್ನಡಿಗರ ಪ್ರೀತಿ ಪಾತ್ರರೇ. ಆದ್ರೆ ಐಪಿಎಲ್ ಅಂತಾ ಬಂದಾಗ ಆಪೋನೆಂಟ್ಸ್ ಆಗಿ ಆಡೋದ್ರಿಂದ ರಿಸಲ್ಟ್ ಕೂಡ ಸ್ಪೆಷಲ್ ಆಗುತ್ತೆ. ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆದಿದ್ದ ಆರ್ಸಿಬಿ ವರ್ಸಸ್ ಡಿಸಿ ನಡುವಿನ ಮ್ಯಾಚಲ್ಲಿ ಡೆಲ್ಲಿ ತಂಡ ಗೆದ್ದು ಬೀಗಿತ್ತು. ಗೋ ಗ್ರೀನ್ ಕಾನ್ಸೆಪ್ಟ್ನಲ್ಲಿ ಗ್ರೀನ್ ಜೆರ್ಸಿಯಲ್ಲಿ ಆಡಿದ್ದ ಬೆಂಗಳೂರು ಬಾಯ್ಸ್ ಫಸ್ಟ್ ಬ್ಯಾಟಿಂಗ್ ಮಾಡಿ 175 ರನ್ಗಳನ್ನ ಕಲೆ ಹಾಕಿದ್ರು. ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಪರ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿದ್ರು. ಡೆಲ್ಲಿ ಚೇಸಿಂಗ್ಗೆ ಬಿಗ್ ಸಾಥ್ ನೀಡಿದ್ರು. ಅಂತಿಮವಾಗಿ ಡೆಲ್ಲಿ ಇನ್ನು ಒಂದು ಬಾಲ್ ಇರುವಾಗ ಗೆದ್ದು ಬೀಗಿತ್ತು. ಈಗ ಸೀನ್ ಕಟ್ ಮಾಡಿದ್ರೆ ಡೆಲ್ಲಿಯಲ್ಲಿ ರಿವೇಂಜ್ ಮ್ಯಾಚ್. ವಿರಾಟ್ ಕೊಹ್ಲಿಗೆ ಅರುಣ್ ಜೇಟ್ಲಿ ಮೈದಾನ ಸ್ಪೆಷಲ್. ಯಾಕಂದ್ರೆ ಅವ್ರಿಗೆ ಅದು ಹೋಂ ಗ್ರೌಂಡ್. ಸೋ ಡೆಲ್ಲಿಯಲ್ಲಿ ಅಬ್ಬರಿಸಿ ಆರ್ಸಿಬಿಗೆ ಗೆಲುವು ತಂದುಕೊಡಬೇಕಿದೆ. ಲಾಸ್ಟ್ ಸೀಸನ್ ರಿಸಲ್ಟ್ನೇ ಇಲ್ಲಿ ರಿಪೀಟ್ ಮಾಡ್ಬೇಕಿದೆ.
ಆರ್ ಸಿಬಿಗೆ ರಿವೇಂಜ್ ಫೈಟ್!
2025ರ ಏಪ್ರಿಲ್ 25ರಂದು ಬೆಂಗಳೂರಲ್ಲಿ ಗೆದ್ದಿದ್ದ ಡೆಲ್ಲಿ
163/7 ರನ್ಸ್.. ರಾಹುಲ್ ಭರ್ಜರಿ ಬ್ಯಾಟಿಂಗ್ 93*(53)
17.5 ಓವರ್ ನಲ್ಲೇ 4 ವಿಕೆಟ್ ನಷ್ಟಕ್ಕೆ ಗೆದ್ದಿದ್ದ ಡೆಲ್ಲಿ ತಂಡ
ಏಪ್ರಿಲ್ 27ಕ್ಕೆ ಡೆಲ್ಲಿಯಲ್ಲಿ ರಿವೇಂಜ್ ಮ್ಯಾಚ್ ಗೆದ್ದ ಆರ್ ಸಿಬಿ
ಡೆಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿ 162/8 ರನ್ಸ್ ಕಲೆ ಹಾಕಿತ್ತು
18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಪಂದ್ಯ ಗೆದ್ದ ಆರ್ ಸಿಬಿ
ಡೆಲ್ಲಿ ಪರ ಕೊಹ್ಲಿ ಅರ್ಧಶತಕ, ಕೃನಾಲ್ 73*(47) ರನ್ಸ್ ಕಲೆ, 1 ವಿಕೆಟ್
ಬೆಂಗಳೂರಲ್ಲಿ ಮ್ಯಾಚ್ ಸೋತ್ರೂ ಡೆಲ್ಲಿಯಲ್ಲಿ ಗೆದ್ದು ಬೆಂಗಳೂರು ಟೀಂ ರಿವೇಂಜ್ ತೀರಿಸಿಕೊಂಡಿತ್ತು. ಈಗ ಸಿಚುಯೇಷನ್ ಹಂಗೇ ಇದೆ. ಯಾಕಂದ್ರೆ ಆಲ್ರೆಡಿ ಡೆಲ್ಲಿ ಟೀಂ ಬೆಂಗಳೂರಲ್ಲಿ ಗೆದ್ದು ಹೋಗಿದ್ದಾರೆ. ಸೋ ಡೆಲ್ಲಿಯಲ್ಲಿ ಈಗ ಅವ್ರ ವಿರುದ್ಧ ಗೆದ್ದು ಬೀಗಬೇಕು.

ನೋಡಿರಿ

