ಬಲೂಚಿಸ್ತಾನ್ ದ ಗಣಿಯಲ್ಲಿ ಉ*ಗ್ರರದಾಳಿ – 10ಕ್ಕೂ ಹೆಚ್ಚು ಜನ ಸಾ*ವು!

ಬಲೂಚಿಸ್ತಾನ್ ದ ಗಣಿಯಲ್ಲಿ  ಉ*ಗ್ರರದಾಳಿ – 10ಕ್ಕೂ ಹೆಚ್ಚು ಜನ ಸಾ*ವು!

ಪಾಕಿಸ್ತಾನದ ಬಲೂಚಿಸ್ತಾನ್ ದಲ್ಲಿ ತಾಮ್ರ ಮತ್ತು ಚಿನ್ನದ ಗಣಿಗಾರಿಕೆ ಸ್ಥಳದಲ್ಲಿ ಭಯೋತ್ಪಾದಕರು ಗುರಿಯಿಟ್ಟು ದಾಳಿ ನಡೆಸಿದ ನಂತರ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ.  ಈ ಘಟನೆಯು ಈ ಪ್ರದೇಶದ ದುರ್ಬಲ ಭದ್ರತಾ ಪರಿಸ್ಥಿತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ನ್ಯಾಷನಲ್ ರಿಸೋರ್ಸಸ್ ಲಿಮಿಟೆಡ್ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸುವ ಚಾಗೈ ಜಿಲ್ಲೆಯ ದರಿಗ್ವಾನ್ ಸ್ಥಳದಲ್ಲಿ ಈ ದಾಳಿ ನಡೆದಿದೆ.

ಇದನ್ನೂ ಓದಿ: ಪ್ರೀತಿಸಿ ಕೈ ಕೊಟ್ಟ ಲವರ್‌ – ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲೇ ವಿಷ ಸೇವಿಸಿದ ಯುವಕ

“ಘಟನೆಯಲ್ಲಿ ಟರ್ಕಿಶ್ ಪ್ರಜೆ, 6 ಕಾರ್ಮಿಕರು ಮತ್ತು ಮೂವರು ಕಾವಲುಗಾರರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ” ಎಂದು ಸ್ಥಳೀಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರು ತಮ್ಮ ಪಾಳಿಯನ್ನು ಮುಗಿಸುವ ಸಂದರ್ಭದಲ್ಲೇ ಈ ದಾಳಿಯನ್ನು ನಡೆಸಲಾಗಿದೆ. ಇದು ಟಾರ್ಗೆಟ್ ಮಾಡಿ ನಡೆಸಲಾದ ದಾಳಿಯಾಗಿದ್ದು, ಕಾರ್ಮಿಕರು ತಮ್ಮ ಪಾಳಿಯನ್ನು ಮುಕ್ತಾಯಗೊಳಿಸುತ್ತಿದ್ದ ಸಮಯದಲ್ಲಿ ಇದನ್ನು ನಡೆಸಲಾಯಿತು” ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತರ ಶವಗಳನ್ನು ದಲ್ಬಂದಿನ್‌ನ ಪ್ರಿನ್ಸ್ ಫಹಾದ್ ಆಸ್ಪತ್ರೆಗೆ ಸಾಗಿಸಲಾಯಿತು. ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲಿ ತಾಮ್ರ, ಚಿನ್ನ, ಸೀಸ ಮತ್ತು ಸತುವಿನ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಇತ್ತೀಚೆಗೆ ವರದಿ ಮಾಡಲಾಗಿತ್ತು. ಅದರ ಬೆನ್ನಲ್ಲೇ ಈ ದಾಳಿ ನಡೆದಿದೆ.

Kishor KV