ಪ್ಲೇ ಆಫ್ ರೇಸ್ ಸ್ಟಾರ್ಟ್ – KKR, LSG, MIಗಿಲ್ವಾ ಚಾನ್ಸ್?
RCB ಇನ್ನೆಷ್ಟು ಗೆಲ್ಬೇಕು?

ಪ್ಲೇ ಆಫ್ ರೇಸ್ ಸ್ಟಾರ್ಟ್ – KKR, LSG, MIಗಿಲ್ವಾ ಚಾನ್ಸ್?RCB ಇನ್ನೆಷ್ಟು ಗೆಲ್ಬೇಕು?

ಐಪಿಎಲ್​ನಲ್ಲಿ ಇಷ್ಟು ಪಂದ್ಯಗಳದ್ದೇ ಒಂದು ಲೆಕ್ಕ.. ಇನ್ಮುಂದಿನ ಪಂದ್ಯಗಳದ್ದೇ ಮತ್ತೊಂದು ಲೆಕ್ಕ. ಯಾಕಂದ್ರೆ ಆಲ್ರೆಡಿ ಈಗ ಮಿಡಲ್ ಆಫ್ ದಿ ಟೂರ್ನಮೆಂಟ್​ನಲ್ಲಿ ಇದ್ದೀವಿ. ಆಲ್ಮೋಸ್ಟ್ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಏಳೇಳು ಪಂದ್ಯಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಮುಂದಿನ ಒಂದೊಂದು ಪಂದ್ಯಗಳೂ ಪ್ಲೇ ಆಫ್ ರೇಸ್​ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡ್ತಾ ಇರುತ್ತೆ. ಫಸ್ಟ್ ಆಫ್​ನಲ್ಲೇ ಆಲ್ರೆಡಿ ಕೆಲವ್ರು ಡಾಮಿನೇಟ್ ಮಾಡಿ ಟಾಪಲ್ಲಿದ್ರೆ ಇನ್ನೂ ಕೆಲವ್ರು ಬಾಟಮ್​ನಲ್ಲಿದ್ದಾರೆ. ಹಾಗಾದ್ರೆ ಈ ಸೀಸನ್​ನಲ್ಲಿ ಯಾರೆಲ್ಲಾ ಪ್ಲೇಆಫ್​ಗೆ ಹತ್ತಿರ ಇದ್ದಾರೆ.

ಇದನ್ನೂ ಓದಿ : RCBಯಲ್ಲಿ ಬೆಥೆಲ್ ಟೈಂ ವೇಸ್ಟ್? – ಲೀಗ್ ಅರ್ಧದಲ್ಲೇ ಬಿಟ್ಟು ಹೋಗ್ತಾರಾ?

2026ರ ಐಪಿಎಲ್​ ಸೀಸನ್​ನಲ್ಲಿ ಈವರೆಗೂ ಒಂದೂ ಪಂದ್ಯವನ್ನ ಸೋಲದೇ ಇರೋ ಏಕೈಕ ತಂಡ ಅಂದ್ರೆ ಅದು ಪಂಜಾಬ್ ಕಿಂಗ್ಸ್.. ಕೆಕೆಆರ್ ವಿರುದ್ಧದ ಮ್ಯಾಚ್ ಮಳೆಗೆ ರದ್ದಾಗಿದ್ದು ಬಿಟ್ರೆ ಉಳಿದೆಲ್ಲಾ ಪಂದ್ಯಗಳಲ್ಲೂ ವಿನ್ ಆಗಿ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಪ್ಲೇಸ್​ನಲ್ಲಿದ್ದಾರೆ. ಌಂಡ್ ಪ್ಲೇ ಆಫ್​ಗೆ ಹತ್ತಿರದಲ್ಲೇ ಇದ್ದಾರೆ. ಹಾಗೇ ಈ ಸೀಸನ್​ನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿರೋ ತಂಡ ಅಂದ್ರೆ ಅದು ಕೊಲ್ಕತ್ತಾ ನೈಟ್ ರೈಡರ್ಸ್. 7 ಪಂದ್ಯಗಳ ಪೈಕಿ ಗೆದ್ದಿರೋದೇ ಒಂದು ಪಂದ್ಯ. ಹೀಗಿದ್ರೂ ಸದ್ಯಕ್ಕಂತೂ ಎಲ್ಲಾ ತಂಡಗಳಿಗೂ ಪ್ಲೇಆಫ್​ ದಾರಿಒ ಇದೆ. ಬಟ್ ಕೆಲವ್ರು ಹತ್ತಿರದಲ್ಲೇ ಇದ್ರೆ ಇನ್ನೂ ಕೆಲವ್ರ ಹಾದಿ ಕಷ್ಟವಾಗಿದೆ.

20 ಅಂಕ ಪಡೆದ್ರೆ ಟಾಪ್ 2.. 16 ಅಂಕ ಪಡೆದ್ರೆ ಪ್ಲೇ ಆಫ್ ಫಿಕ್ಸ್!

ಟಾಪ್ 4ನಲ್ಲಿ ಸ್ಥಾನ ಪಡೆಯೋದು ತಂಡಗಳಿಗೆ ಎಷ್ಟು ಮುಖ್ಯನೋ.. ಟಾಪ್ 1 ಹಾಗೇ 2 ನಲ್ಲಿ ಸ್ಥಾನ ಪಡೆಯೋದು ತುಂಬಾನೇ ಮುಖ್ಯ. ಯಾಕಂದ್ರೆ ಟಾಪ್-2ನಲ್ಲಿ ಇದ್ದವ್ರಿಗೆ ಅಡ್ವಾಂಟೇಜ್ ಇರುತ್ತೆ. ಗೆದ್ದವ್ರಿಗೆ ಡೈರೆಕ್ಟ್ ಫೈನಲ್ ಟಿಕೆಟ್ ಸಿಗುತ್ತೆ. ಸೋತ್ರೆ ಮತ್ತೊಂದು ಅವಕಾಶ ಇರುತ್ತೆ. ಆದ್ರೆ 3 ಮತ್ತು 4ನೇ ಸ್ಥಾನದಲ್ಲಿದ್ದವ್ರಿಗೆ ಗೆದ್ರೆ ಮತ್ತೆ ಕ್ವಾಲಿಫೈಯರ್ 2 ಆಡಿ ಆಮೇಲೆ ಫೈನಲ್​ಗೆ ಹೋಗ್ಬೇಕು. ಅಕಸ್ಮಾತ್ ಸೋತ್ರೆ ಸೀದಾ ಮನೆಗೆ. ಹೀಗಾಗಿ ಬೆಸ್ಟ್ ಆಪ್ಶನ್ ಅಂದ್ರೆ ಟಾಪ್ 2ನಲ್ಲಿ ಅವಕಾಶ ಪಡೆಯೋದು. ಸೋ ನಂಬರ್ 1 ಅಥವಾ 2ನಲ್ಲಿ ಇರ್ಬೇಕು ಅಂದ್ರೆ 18 ಅಥವಾ 20 ಅಂಕಗಳನ್ನ ಪಡೆದ್ರೆ ಪಕ್ಕಾ ಕ್ವಾಲಿಫೈಯರ್ 1ನಲ್ಲಿ ಅವಕಾಶ ಇರುತ್ತೆ. ಅಥವಾ 16 ಅಂಕ ಪಡೆದ್ರೆ ಪ್ಲೇ ಆಫ್ ಅಂತೂ ಇರುತ್ತೆ. ಬಟ್ ಬೇರೆ ತಂಡಗಳು ಈಕ್ವಲ್ ಇದ್ರೆ ನೆಟ್ ರನ್ ರೇಟ್ ಮ್ಯಾಟ್ರ್ ಆಗುತ್ತೆ. 14 ಅಂಕ ಇದ್ರೆ ಸೆಲೆಕ್ಟ್ ಆಗೋದು ತೀರಾ ಕಷ್ಟ. ಉಳಿದ ತಂಡಗಳ ನೆಟ್ ರೇಟ್ ಮೇಲೆ ಡಿಪೆಂಡ್ ಆಗ್ಬೇಕಿರುತ್ತೆ. ಬಟ್ ಅದೂ ಕನ್ಫರ್ಮ್ ಇರಲ್ಲ. ಕಳೆದ ನಾಲ್ಕು ವರ್ಷಗಳ ರೆಕಾರ್ಡ್ಸ್ ನೋಡಿದ್ರೇನೆ ಇದು ಗೊತ್ತಾಗುತ್ತೆ. 2022ರ ಆವೃತ್ತಿಯಲ್ಲಿ 16, 18, 18, 20 ಅಂಕ ಪಡೆದಿದ್ದ ನಾಲ್ಕು ತಂಡಗಳು ಪ್ಲೇಆಫ್​ಗೆ ಎಂಟ್ರಿ ಕೊಟ್ಟಿದ್ವು. ಹಾಗೇ 2023ರಲ್ಲಿ 16, 17, 17, ಹಾಗೇ 20 ಅಂಕ ಪಡೆದಿದ್ದ ತಂಡಗಳಿಗೆ ಅವಕಾಶ ಇತ್ತು. 2024ರಲ್ಲಿ 14, 17, 17, 20 ಅಂಕ ಪಡೆದ ತಂಡಗಳು ಪ್ಲೇಆಫ್​ಗೇರಿದ್ವು. 2024ರ ಇನ್ನೊಂದು ಸ್ಪೆಷಾಲಿಟಿ ಅಂದ್ರೆ 4 ತಂಡಗಳು 14 ಅಂಕ ಪಡೆದಿದ್ವು. ಆದ್ರೆ ನೆಟ್ ರನ್ ರೇಟ್ ಆಧಾರದಲ್ಲಿ ಆರ್​ಸಿಬಿ ತಂಡ 4ನೇ ತಂಡವಾಗಿ ಅವಕಾಶ ಪಡೆದಿತ್ತು. ಇನ್ನು 2025 ಅಂದ್ರೆ ಕಳೆದ ವರ್ಷ ಪಂಜಾಬ್ ಮತ್ತು ಬೆಂಗಳೂರು ತಲಾ 19 ಅಂಕಗಳೊಂದಿಗೆ ಟಾಪ್ 2ನಲ್ಲಿ ಸ್ಥಾನ ಪಡೆದಿದ್ವು. ಌಂಡ್ ಜಿಟಿ 18 ಮತ್ತು ಎಂಐ 16 ಅಂಕಗಳೊಂದಿಗೆ ಅರ್ಹತೆ ಪಡೆದಿತ್ತು. ಸೋ ಅಲ್ಲಿಗೆ 16 ಅಂಕ ಬಂದ್ರೆ ಒಂಥರಾ ಸೇಫ್ ಅನ್ನೋ ಥರನೇ ಇದೆ. ಕಳೆದ ನಾಲ್ಕು ಸೀಸನ್​ನಲ್ಲಿ 16 ಅಂಕ ಪಡೆದ ಪ್ರತೀ ತಂಡವೂ ಪ್ಲೇಆಪ್​ಗೆ ಬಂದಿದೆ. 2024ರಲ್ಲಿ ಮಾತ್ರ ಆರ್​ಸಿಬಿ 14 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ರವೇಶ ಪಡೆದಿತ್ತು. ಹಾಗಾದ್ರೆ ಈ ಸೀಸನ್​ನಲ್ಲಿ ಯಾರ್ಯಾರು ಯಾವ ಸ್ಥಾನದಲ್ಲಿ ಇದ್ದಾರೆ..? 16 ಅಂಕ ಪಡೆಯೋಕೆ ಎಷ್ಟು ಪಂದ್ಯಗಳನ್ನ ಗೆಲ್ಬೇಕು ಅನ್ನೋದನ್ನ ನೋಡ್ತಾ ಹೋಗೋಣ.

ಪ್ಲೇ ಆಫ್ ಲೆಕ್ಕಾಚಾರ ಶುರು!

ತಂಡ                                 ಗೆಲುವು              ಅಂಕ                  ಇನ್ನೆಷ್ಟು ಗೆಲ್ಬೇಕು?

  1. ಪಂಜಾಬ್                       5(6)                   11                         3 ಪಂದ್ಯ
  2. ರಾಜಸ್ಥಾನ                      5(7)                   10                          3 ಪಂದ್ಯ
  3. ಬೆಂಗಳೂರು                    4 (6)                 8                           4 ಪಂದ್ಯ
  4. ಹೈದ್ರಾಬಾದ್                   4 (7)                8                         4 ಪಂದ್ಯ
  5. ಚೆನ್ನೈ                              3 (7)                 6                         5 ಪಂದ್ಯ
  6. ಡೆಲ್ಲಿ                                 3(6)                 6                         5 ಪಂದ್ಯ
  7. ಗುಜರಾತ್                         3(6)                6                         5 ಪಂದ್ಯ
  8. ಮುಂಬೈ                           2(7)               4                          6 ಪಂದ್ಯ
  9. ಲಕ್ನೋ                             2(7)               4                          6 ಪಂದ್ಯ
  10. ಕೊಲ್ಕತ್ತಾ                          1(7)               3                          7 ಪಂದ್ಯ

Shantha Kumari