ಚಿನ್ನಸ್ವಾಮಿಯಲ್ಲಿ TOSSದೇ ಚಿಂತೆ – ಚೇಸಿಂಗ್ ಮಾಡಿದ್ರಷ್ಟೇ ಗೆಲ್ಲೋದಾ?
4 ಮ್ಯಾಚ್.. RCBಗಿದ್ಯಾ ಅದೃಷ್ಟ? 

ಚಿನ್ನಸ್ವಾಮಿಯಲ್ಲಿ TOSSದೇ ಚಿಂತೆ – ಚೇಸಿಂಗ್ ಮಾಡಿದ್ರಷ್ಟೇ ಗೆಲ್ಲೋದಾ?4 ಮ್ಯಾಚ್.. RCBಗಿದ್ಯಾ ಅದೃಷ್ಟ? 

ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಆರ್​ಸಿಬಿ ವರ್ಸಸ್ ಜಿಟಿ ಮ್ಯಾಚ್ ಇದೆ. ಈ ಪಂದ್ಯ ಇಬ್ಬರಿಗೂ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಕಳೆದ ಪಂದ್ಯಗಳಲ್ಲಿ ಸೋತಿರೋದ್ರಿಂದ ಕಂ ಬ್ಯಾಕ್ ಮಾಡೋಕೆ ಕಾಯ್ತಾ ಇರ್ತಾರೆ. ಌಂಡ್ ಈ ಪಂದ್ಯದ ಸೋಲು ಗೆಲುವಿಗೆ ಟಾಸ್ ಕೂಡ ಬಿಗ್ ಟರ್ನಿಂಗ್ ಪಾಯಿಂಟ್ ಆಗುತ್ತೆ.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಶುರುವಾಯ್ತು ಕುರ್ಚಿ ಕದನ! – ದೆಹಲಿಗೆ ತೆರಳಿದ ಡಿಸಿಎಂ ಡಿಕೆ ಶಿವಕುಮಾರ್‌!  

ಬೆಂಗಳೂರು ವರ್ಸಸ್ ಗುಜರಾತ್ ಮ್ಯಾಚ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಇದು ಕೊನೇ ಪಂದ್ಯ. ಆಲ್ರೆಡಿ ಹೋಂ ಗ್ರೌಂಡ್​ನಲ್ಲಿ ಡಾಮಿನೇಟ್ ಮಾಡಿ ಗೆದ್ದಿರೋ ಬೆಂಗಳೂರು ಗುಜರಾತ್ ವಿರುದ್ಧವೂ ಗೆಲ್ಲೋ ಟಾರ್ಗೆಟ್​ನಲ್ಲಿದೆ. ಌಂಡ್ ಈ ಪಂದ್ಯಕ್ಕೆ ಟಾಸ್ ಗೆಲ್ಲೋದು ಅಷ್ಟೇ ಮುಖ್ಯ ಆಗುತ್ತೆ. ಯಾಕಂದ್ರೆ ಟಾಸ್ ಗೆದ್ದವ್ರು ಆಬಿಯಸ್ಲಿ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಯಾಕಂದ್ರೆ ಚೇಸಿಂಗ್ ಮಾಡಿದವ್ರಿಗೆ ಅಡ್ವಾಂಟೇಜಸ್ ಕೂಡ ಇದೆ.

ಟಾಸ್ ಗೆದ್ರೆ ಮ್ಯಾಚ್ ಗೆಲ್ತಾರಾ?

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದವ್ರು ಬೌಲಿಂಗ್ ಆಯ್ಕೆ ಮಾಡಿಕೊಳ್ತಾರೆ

ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ವಿನ್

ಈ ಸೀಸನ್ ನಲ್ಲೇ 4 ಪಂದ್ಯಗಳಲ್ಲಿ 3 ತಂಡಗಳು ಚೇಸಿಂಗ್ ನಲ್ಲಿ ಗೆಲುವು

ಚೆನ್ನೈ ವಿರುದ್ಧದ ಪಂದ್ಯದಲ್ಲಿ 250 ರನ್ಸ್ ಹೊಡೆದು ಗೆದ್ದಿದ್ದ ಆರ್ ಸಿಬಿ

ಟಾರ್ಗೆಟ್ ಫಿಕ್ಸ್ ಆದ್ರೆ ಲಾಸ್ಟ್ ಓವರ್ ವರೆಗೂ ಚಾನ್ಸ್ ತಗೊಂಡು ವಿನ್

ಬಿಗ್ ಟಾರ್ಗೆಟ್ ಸೆಟ್ ಮಾಡಿದ್ರೆ ಮಾತ್ರ ಡಿಫೆನ್ಸ್ ಮಾಡಿಕೊಳ್ಳಬಹುದು

ಇದನ್ನೆಲ್ಲಾ ನೋಡ್ದಾಗ ಫಸ್ಟ್ ಬೌಲಿಂಗ್ ಮಾಡೋದು ಸ್ವಲ್ಪ ಅಡ್ವಾಂಟೇಜ್ ಆಗ್ಬೋದು. ಹಾಗಂತ ಇದು ಚಿನ್ನಸ್ವಾಮಿ ಮೈದಾನಕ್ಕಷ್ಟೇ ಅಲ್ಲ ಈ ಸೀಸನ್ ಐಪಿಎಲ್​ನಲ್ಲೂ ಚೇಸಿಂಗ್ ಮಾಡಿರುವಂಥ ತಂಡಗಳೇ ಹೆಚ್ಚು ಬಾರಿ ವಿನ್ ಆಗಿರೋದು. ಌಂಡ್ ಕ್ಯಾಪ್ಟನ್ಸ್ ಕೂಡ ಟಾಸ್ ಗೆದ್ದಾಗ ಫಸ್ಟ್ ಬೌಲಿಂಗ್​ನೇ ಚೂಸ್ ಮಾಡಿಕೊಳ್ತಾರೆ. ಆದ್ರೆ ಕಳೆದ ಐದು ಪಂದ್ಯಗಳ ರಿಸಲ್ಟ್ ನೋಡಿದಾಗ ಐದಕ್ಕೆ ಐದೂ ತಂಡಗಳು ಫಸ್ಟ್ ಬ್ಯಾಟಿಂಗ್ ಮಾಡಿದ್ದವ್ರೇ ಡಿಫೆನ್ಸ್ ಮಾಡಿಕೊಂಡಿದ್ದಾರೆ. ಚೇಸಿಂಗ್ ಮಾಡಿದ್ದವ್ರು ಸೋಲು ಕಂಡಿದ್ದಾರೆ. ಹೀಗಾಗಿ ಫಸ್ಟ್ ಇನ್ನಿಂಗ್ಸ್, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಪಿಚ್ ಹೇಗೆ ಬಿಹೇವ್ ಮಾಡುತ್ತೆ ಅನ್ನೋ ದು ಕೂಡ ಮುಖ್ಯ ಆಗುತ್ತೆ.

Shantha Kumari