ಸಂಜು ಸುನಾಮಿಗೆ ಕೊಚ್ಚಿ ಹೋದ MI – 99 ರನ್ ಗೆದ್ದು 103 ರನ್ ಸೋಲು
HITಮ್ಯಾನ್ ಇಲ್ಲದ ಮುಂಬೈ ಡಮ್ಮಿನಾ?

ಐಪಿಎಲ್ನಲ್ಲಿ ಐದೈದು ಬಾರಿ ಚಾಂಪಿಯನ್ಸ್ ಆಗಿರೋ ಮುಂಬೈ ಮತ್ತು ಚೆನ್ನೈ ನಡುವಿನ ಮ್ಯಾಚ್ ಹೈವೋಲ್ಟೇಜ್ ಆಗಿರುತ್ತೆ ಅನ್ಕೊಂಡ್ರೆ ಮುಂಬೈ ಟೀಂ ಕಂಪ್ಲೀಟ್ ಸರೆಂಡರ್ ಆಗಿತ್ತು. ಚೆನ್ನೈ ಆಟಗಾರರು ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ಡಾಮಿನೇಟ್ ಮಾಡಿ ಒನ್ ಸೈಡೆಡ್ ಆಗಿ ವಿನ್ ಆದ್ರು. ಅದ್ರಲ್ಲೂ ಸಂಜು ಸ್ಯಾಮ್ಸನ್ ಸೆಂಚುರಿ ಅಂತೂ ಎಕ್ಸ್ಟ್ರಾರ್ಡಿನರಿ. ಗುಜರಾತ್ ವಿರುದ್ಧ 99 ರನ್ಗಳ ಅಂತದಲ್ಲಿ ಗೆದ್ದಿದ್ದ ಮುಂಬೈ ತಂಡ ಚೆನ್ನೈ ವಿರುದ್ಧ 103 ರನ್ಗಳ ಅಂತರದಲ್ಲಿ ಸೋತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಸಿಎಸ್ಕೆ ಒನ್ಸ್ ಅಗೇನ್ ನಾಯಕ ರುತುರಾಜ್ ಗಾಯಕ್ವಾಡ್ ಕೈಕೊಟ್ರು. ಒಂದರ ಹಿಂದೆ ಒಂದರಂತೆ ವಿಕೆಟ್ಸ್ ಬೀಳ್ತಾನೇ ಹೋಯ್ತು. ಆದ್ರೆ ಒಂದು ಕಡೆ ಕ್ರಿಸ್ ಕಚ್ಚಿ ನಿಂತಿದ್ದ ಸಂಜು ಸ್ಯಾಮ್ಸನ್ ಚೆನ್ನೈ ತಂಡದ ಪರ 2ನೇ ಶತಕ ಬಾರಿಸಿ 200ರ ಗಡಿ ದಾಟಿಸಿದ್ರು. ಸಿಎಸ್ಕೆ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಬ್ಯಾಟಿಂಗ್ ಕಂಪ್ಲೀಟ್ ಢಮಾರ್. ಕೇವಲ 104 ರನ್ ಕಲೆಹಾಕಲಷ್ಟೇ ಶಕ್ತವಾಗಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೋಲು ದಾಖಲಿಸಿತು.
ಚೆನ್ನೈ ಆಲ್ ರೌಂಡ್ ಪ್ರದರ್ಶನ!
ಒಂದ್ಕಡೆ ವಿಕೆಟ್ಸ್ ಬೀಳ್ತಿದ್ರೂ ಸಂಜು ಕಡೆಯಿಂದ ಶತಕದ ಆಟ 101*(54)
ಬಿಗ್ ಪಾರ್ಟ್ನರ್ ಶಿಪ್ ಬರದೇ ಇದ್ರೂ 208 ರನ್ ಗಳ ಟಾರ್ಗೆಟ್
ಬೌಲಿಂಗ್ ನಲ್ಲಿ ಸಂಜು ವಿಕೆಟ್ ತೆಗೆಯುವಲ್ಲಿ ಫೇಲ್ಯೂರ್ ಆದ ಮುಂಬೈ
ಪಾಂಡ್ಯ, ಕ್ರಿಶ್, ಸ್ಯಾಂಟ್ನರ್ ಮುಂಬೈ ಪರ ಬೌಲಿಂಗ್ ಸ್ವಲ್ಪ ದುಬಾರಿ
ಚೇಸಿಂಗ್ ಗೆ ಬಂದ ಮುಂಬೈ ಪರ ಬ್ಯಾಟರ್ ಗಳ ಪೆವಿಲಿಯನ್ ಪರೇಡ್
ತಿಲಕ್ 37, ಸೂರ್ಯ 36 ರನ್ ಗಳಿಸಿದ್ರೆ ಉಳಿದವ್ರೆಲ್ಲಾ ಸಿಂಗಲ್ ಡಿಜಿಟ್
ಚೆನ್ನೈ ಪರ ಬೌಲರ್ಸ್ ಅದ್ಭುತ ಆಟ, 8ರ ಎಕಾನಮಿ ಒಳಗೆ ಎಲ್ರೂ ಬೌಲಿಂಗ್
ಹೀಗೆ ಆಲ್ರೌಂಡ್ ಪ್ರದರ್ಶನದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಒನ್ ಸೈಡೆಡ್ ಆಗಿ ಪಂದ್ಯ ಗೆದ್ರು. ಈ ಆವೃತ್ತಿಯಲ್ಲಿ ಮುಂಬೈ ತಂಡದ 5ನೇ ಸೋಲು ಇದಾದರೆ, ಸಿಎಸ್ಕೆ ತಂಡದ ಮೂರನೇ ಗೆಲುವಾಗಿದೆ. 6 ಅಂಕಗಳೊಂದಿಗೆ ಚೆನ್ನೈ 5ನೇ ಸ್ಥಾನಕ್ಕೆ ಜಿಗಿದ್ರೆ 4 ಅಂಕಗಳೊಂದಿಗೆ ಮುಂಬೈ 8ನೇ ಸ್ಥಾನದಲ್ಲಿದೆ. ಮುಂಬೈ ತಂಡದ ಪರ್ಫಾಮೆನ್ಸ್ ನೋಡ್ತಿದ್ರೆ ಹಿಟ್ಮ್ಯಾನ್ ರೋಹಿತ್ ಶರ್ಮಾರನ್ನ ಕಂಪ್ಲೀಟ್ ಮಿಸ್ ಮಾಡಿಕೊಳ್ತಿದ್ದಾರೆ ಅನ್ಸುತ್ತೆ. ಹಾಗಂತ ಅವ್ರ ಬ್ಯಾಟಿಂಗ್ ಅನ್ನೋದಕ್ಕಿಂತ ಅವ್ರ ಕ್ಯಾಪ್ಟನ್ಸಿ, ಎಕ್ಸ್ಪೀರಿಯನ್ಸ್ ಹಾಗೇ ಆನ್ ಫೀಲ್ಡ್ ನಿರ್ಧಾರಗಳನ್ನ ಮಿಸ್ ಮಾಡಿಕೊಳ್ತಿದೆ.

ನೋಡಿರಿ

