ಬಿಸಿಲಿನ ಜಳಕ್ಕೆ ಐಸ್‌ಕ್ರೀಂ ಹಾಗೂ ಕೂಲ್ ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದೀರಾ? – ಡಾಕ್ಟರ್ ಕೊಟ್ಟಿದ್ದಾರೆ ಖಡಕ್ ಎಚ್ಚರಿಕೆ

ಬಿಸಿಲಿನ ಜಳಕ್ಕೆ ಐಸ್‌ಕ್ರೀಂ ಹಾಗೂ ಕೂಲ್ ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದೀರಾ? – ಡಾಕ್ಟರ್ ಕೊಟ್ಟಿದ್ದಾರೆ ಖಡಕ್ ಎಚ್ಚರಿಕೆ

ಬಿಸಿಲಿಗೆ ಜನ ಬೆಂದು ಹೋಗ್ತಿದ್ದಾರೆ. ತಂಪಾದ ವಸ್ತು ಏನ್ ಇದ್ರೂ ಅದ್ದನ್ನ ಕುಡಿದು ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ. ಆದ್ರೆ ಅದರ ಎಫೆಕ್ಟ್‌ ಆರೋಗ್ಯದ ಮೇಲೆ ತಟ್ಟುವ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮನೆಯಿಂದ ಹೊರಬಂದರೆ ಸಾಕು ಕೆಂಡದಂತಹ ವಾತಾವರಣ ಜನರನ್ನು ಹೈರಾಣಾಗಿಸುತ್ತಿದೆ. ಈ ಸುಡುವ ಬಿಸಿಲಿನಿಂದ ಪಾರಾಗಲು ಮತ್ತು ದೇಹವನ್ನು ತಂಪಾಗಿಸಿಕೊಳ್ಳಲು ಜನರು ಐಸ್‌ಕ್ರೀಂ ಹಾಗೂ ಕೂಲ್ ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಇವುಗಳ ಅತಿಯಾದ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ನಗರದ ಗರಿಷ್ಠ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ ಐಸ್‌ಕ್ರೀಂ ಪಾರ್ಲರ್‌ ಹಾಗೂ ತಂಪು ಪಾನೀಯಗಳ ಅಂಗಡಿಗಳ ಮುಂದೆ ಜನವೋ ಜನ. ದಣಿವು ಆರಿಸಿಕೊಳ್ಳಲು ಜನರು ಅತಿಯಾಗಿ ತಂಪು ಪಾನೀಯಗಳನ್ನು ಕುಡಿಯುತ್ತಿದ್ದಾರೆ. ಆದರೆ ಇದು ತಾತ್ಕಾಲಿಕವಾಗಿ ತಂಪು ನೀಡಿದರೂ, ದೇಹದ ಆಂತರಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಐಸ್‌ಕ್ರೀಂ ಹಾಗೂ ಕೂಲ್ ಡ್ರಿಂಕ್ಸ್‌ಗಳ ಸೇವನೆ ಬಗ್ಗೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ನಿಮಗೆ ಹಣದ ಸಮಸ್ಯೆ ಇದ್ಯಾ, ಪರಿಹಾರ ಬೇಕಾ? – ಶುಕ್ರವಾರ ಈ ಬಣ್ಣದ ಬಟ್ಟೆ ಧರಿಸಿ ಲಕ್ಷ್ಮಿ ದೇವಿಯನ್ನ ಪೂಜೆಸಿ

ಈ ಕುರಿತು ಮಾಹಿತಿ ನೀಡಿರುವ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಮುರಳೀಧರ್, ಹೊರಗಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದ್ದಾಗ ದೇಹಕ್ಕೆ ಅತಿ ತಣ್ಣನೆಯ ಆಹಾರ ಅಥವಾ ಪಾನೀಯ ಸೇರಿದರೆ ರೋಗನಿರೋಧಕ ಶಕ್ತಿ ಕುಂದಬಹುದು. ಇದರಿಂದ ಕೆಮ್ಮು, ನೆಗಡಿ, ಶೀತ ಮಾತ್ರವಲ್ಲದೆ ನ್ಯುಮೋನಿಯಾದಂತಹ ಗಂಭೀರ ಕಾಯಿಲೆಗಳಿಗೂ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಕೃತಕ ಪಾನೀಯಗಳಿಗಿಂತ ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳಿಗೆ ಆದ್ಯತೆ ನೀಡುವುದು ಉತ್ತಮ. ಐಸ್‌ಕ್ರೀಂ ಮತ್ತು ಕೂಲ್ ಡ್ರಿಂಕ್ಸ್‌ಗಳ ಸೇವನೆ ಮಿತವಾಗಿರಲಿ ಎಂಬುದು ವೈದ್ಯರ ಕಿವಿಮಾತು.

Kishor KV