ಬೆಂಗಳೂರಿನ ಫಾಕ್ಸ್‌ಕಾನ್‌ನಲ್ಲಿ ತಲೆತಗ್ಗಿಸುವ ಘಟನೆ – ನವಜಾತ ಶಿಶುವಿಗೆ ಜನ್ಮ ನೀಡಿ, ಶೌಚಾಲಯಕ್ಕೆ ತುಂಬಿದ ತಾಯಿ

ಬೆಂಗಳೂರಿನ ಫಾಕ್ಸ್‌ಕಾನ್‌ನಲ್ಲಿ ತಲೆತಗ್ಗಿಸುವ ಘಟನೆ – ನವಜಾತ ಶಿಶುವಿಗೆ ಜನ್ಮ ನೀಡಿ,  ಶೌಚಾಲಯಕ್ಕೆ ತುಂಬಿದ ತಾಯಿ

ಸಿಲಿಕಾನ್ ಸಿಟಿಯ ಹೊಸೂರು ರಸ್ತೆಯಲ್ಲಿರುವ ಪ್ರಸಿದ್ಧ ಆಪಲ್ ಫೋನ್ ಉತ್ಪಾದನಾ ಘಟಕದಲ್ಲಿ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ.  ಫಾಕ್ಸ್‌ಕಾನ್  ಆವರಣದಲ್ಲಿ ಭ್ರೂಣವೊಂದು ಪತ್ತೆಯಾಗಿದ್ದು, ಎಲ್ಲರು ಶಾಕ್ ಆಗಿದ್ದಾರೆ.  ಈ ಸಂಬಂಧ ಘಟಕದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಖಾನೆಯ ಶೌಚಾಲಯದ ಬ್ಲಾಕ್‌ನಲ್ಲಿ ಶುಚಿಗೊಳಿಸುವ ಸಿಬ್ಬಂದಿಗೆ ಭ್ರೂಣವೊಂದು ಪತ್ತೆಯಾಗಿತ್ತು. ಕೂಡಲೇ ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರಿಗೆ ದೂರು ನೀಡಲಾಯಿತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳನ್ನು ಬಂಧನ ಮಾಡಲಾಗಿದೆ. ಘಟನೆ ನಡೆದ ಸಮಯದಲ್ಲಿ ಶೌಚಾಲಯದ ಕಡೆಗೆ ಹೋದವರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಅಲ್ಲಿನ ಸಿಬ್ಬಂದಿಯೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರಿಗೆ ಅಚ್ಚರಿಯ ವಿಚಾರವೊಂದು ತಿಳಿಯಿತು. 19 ವರ್ಷದ ಯುವತಿಯು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಮುಂಬೈನ ಚೆಂಡಾಡಿದ ಚೆನ್ನೈ ಕಿಂಗ್ಸ್ – ಪಾಂಡ್ಯ ಪಡೆಗೆ 5ನೇ ಸೋಲು!

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭ್ರೂಣವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯು ಗರ್ಭಪಾತ ಮಾಡಿಕೊಂಡಿದ್ದಾಳೆಯೇ ಅಥವಾ ಅಕ್ರಮ ಗರ್ಭಧಾರಣೆಯನ್ನು ಮುಚ್ಚಿಡಲು ಈ ಕೃತ್ಯ ಎಸಗಿದ್ದಾಳೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಆಗಿದ್ದೇನು?

19 ವರ್ಷದ ಯುವತಿಯೊಬ್ಬಳು ಶೌಚಾಲಯದಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿದ್ದಾಳೆ. ನಂತ್ರ ಅತ್ಯಂತ ಕ್ರೂರವಾಗಿ ಮಗುವಿನ ಕತ್ತು ಸೀಳಿ, ದೇಹವನ್ನು ಶೌಚಾಲಯದ ಗುಂಡಿಯಲ್ಲಿ ಫ್ಲಶ್ ಮಾಡಲು ಯತ್ನಿಸಿದ್ದಾಳೆ. ಆದ್ರೆ  ಶೌಚಾಲಯದ ಪೈಪ್ ಬ್ಲಾಕ್ ಆಗಿದ್ದರಿಂದ ಶುಚಿಗೊಳಿಸುವ ಸಿಬ್ಬಂದಿ ಪರೀಕ್ಷಿಸಿದಾಗ ಮಗುವಿನ ದೇಹ ಪತ್ತೆಯಾಗಿದೆ. ಇದನ್ನು ಕಂಡು ಬೆಚ್ಚಿಬಿದ್ದ ಸಿಬ್ಬಂದಿ ಕೂಡಲೇ ಆಡಳಿತ ಮಂಡಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ 19 ವರ್ಷದ ಯುವತಿಯ ಮೇಲೆ ಅನುಮಾನ ವ್ಯಕ್ತವಾಗಿದೆ.

Kishor KV