ತಿರುಪತಿ ದೇಗುಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ! – ಇನ್ಮುಂದೆ ತಿಮ್ಮಪ್ಪನ ದರ್ಶನ ಸುಲಭ!

ತಿರುಪತಿ ದೇಗುಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ! – ಇನ್ಮುಂದೆ ತಿಮ್ಮಪ್ಪನ ದರ್ಶನ ಸುಲಭ!

ತಿರುಪತಿ ಹಿಂದೂಗಳ ಪವಿತ್ರ ಕ್ಷೇತ್ರ. ವೈಕುಂಟದಲ್ಲಿ ನೆಲೆಸಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ತಿಮ್ಮಪ್ಪ ದರುಶನ ಪಡೆದು ಪುನೀತರಾಗುತ್ತಾರೆ. ಇದೀಗ ಮಕ್ಕಳಿಗೆ ಬೇಸಿಗೆ ರಜೆ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಲಕ್ಷಾಂತರ ಮಂದಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಿದ್ದಾರೆ. ಇದೀಗ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ತಿರುಪತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನ ಬಳಸಿಕೊಳ್ಳಲಾಗ್ತಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಆರೆಂಜ್‌ ಲೈನ್‌ನ ಭೂಸ್ವಾಧೀನ ಶುರು!

ವೈಕುಂಠದಲ್ಲಿ ನೆಲೆಸಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ನಿತ್ಯ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸುತ್ತಾರೆ. ಹಾಗೆ ಬರುವ ಭಕ್ತರು, ರಸ್ತೆ ಮತ್ತು ಪಾದಚಾರಿ ಮಾರ್ಗದ ಮೂಲಕ ತಿರುಪತಿ ತಲುಪಿ ಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ಬರುವ ಭಕ್ತರು ಕೂಡ ಹೆಚ್ಚಾಗಿದ್ದಾರೆ. ದಿನ ಹೋದಂತೆ ಭಕ್ತರ ಸಂಖ್ಯೆ ದೇವಾಲಯದಲ್ಲಿ ಹೆಚ್ಚಾಗುತ್ತಲೇ ಇದೆ. ತಿರುಮಲ ಶ್ರೀವಾರಿ ದರ್ಶನಕ್ಕೆ ಸಾಮಾನ್ಯ ಭಕ್ತರಿಗಾಗಿ ಟಿಟಿಡಿ ಇತ್ತೀಚೆಗೆ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿರುತ್ತದೆ. ಇದೀಗ ಟಿಟಿಡಿ ಭಕ್ತರ ಅನುಕೂಲಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನ ಪರಿಚಯಿಸಿದೆ. ಇನ್ಮುಂದೆ ಸುಲಭವಾಗಿ ತಿಮ್ಮಪ್ಪನ ದರ್ಶನ ಪಡೆಯಬಹುದು.

ಅಲಿಪಿರಿ ಮಾರ್ಗದಲ್ಲಿ ಭಕ್ತರ ರಕ್ಷಣೆಗೆ ಎಐ ನಿಗಾ!

ತಿರುಮಲಕ್ಕೆ ಅಲಿಪಿರಿ ಮಾರ್ಗದ ಮೂಲಕ ನಡೆದುಕೊಂಡು ಬರುವ ಭಕ್ತರ ಭದ್ರತೆಗಾಗಿ ಟಿಟಿಡಿ ಎಐ ನಿಗಾವನ್ನು ಟಿಟಿಡಿ ಜಾರಿ ಮಾಡಿದೆ. ಅಲಿಪಿರಿ ಮಾರ್ಗದಲ್ಲಿ ಎಐ ಸೋಲಾರ್ ಕ್ಯಾಮೆರಾ, 360 ಡಿಗ್ರಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇವು ಕಾಡು ಪ್ರಾಣಿಗಳು 400 ಮೀಟರ್ ದೂರದಲ್ಲಿ ಇರುವ ಸಮಯದಲ್ಲೇ ಗುರುತಿಸುತ್ತದೆ. ಇಷ್ಟೇ ಅಲ್ಲದೇ, ಅತ್ಯಾಧುನಿಕ ಡ್ರೋಣ್ ಗಳನ್ನು ನಿಗಾಗಾಗಿ ಬಳಕೆ ಮಾಡ್ತಿದೆ. ಒಂದೊಮ್ಮೆ ಚಿರತೆ ಅಥವಾ ಕರಡಿಯಂತಹ ಕಾಡು ಪ್ರಾಣಿಗಳು ಬಂದರ ಕೂಡಲೇ ಸಿಸ್ಟಮ್ ಮೂಲಕ ಕಮಾಂಡ್ ಕಂಟ್ರೋಲ್ ಗೆ ಮಾಹಿತಿ ನೀಡುತ್ತದೆ. ಇದರಿಂದ ಕಾಡು ಪ್ರಾಣಿಗಳಿಂದ ಭಕ್ತರಿಗೆ ಭದ್ರತೆಯ ಭರವಸೆಯನ್ನು ನೀಡುತ್ತಿದೆ.‌

ಪಾದರಕ್ಷೆ ಕೌಂಟರ್‌ನಲ್ಲಿ ಕ್ಯೂಆರ್‌ ಕೋಡ್‌ ಸಿಸ್ಟಮ್!

ತಿರುಮಲಕ್ಕೆ ಆಗಮಿಸುವ ಭಕ್ತರ ಪಾದರಕ್ಷೆಗಳಿಗೆ ಭದ್ರತೆ ನೀಡುವುದು ದೊಡ್ಡ ಸಮಸ್ಯೆಯಾಗಿತ್ತು. ಇದಕ್ಕೆ ಇತಿಶ್ರೀ ಹಾಡಲು ಟಿಟಿಡಿ ಕ್ಯೂ ಆರ್ ಕೋಡ್ ಆಧಾರಿತ ಸ್ಮಾರ್ಟ್ ಶೂ ಕೀಪಿಂಗ್ ವಿಧಾನವನ್ನು ಜಾರಿ ಮಾಡಿದೆ. ಭಕ್ತರು ತಮ್ಮ ಪಾದರಕ್ಷೆಗಳನ್ನ ಕೌಂಟರ್ ನಲ್ಲಿ ನೀಡಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು. ದರ್ಶನ ಮುಗಿಸಿಕೊಂಡು ವಾಪಸ್ ಆಗುವ ವೇಳೆ ವೇಗವಾಗಿ ಮತ್ತೆ ಪಾದರಕ್ಷೆಗಳನ್ನು ಪಡೆದುಕೊಳ್ಳಬಹುದು. ಕೋರಮಂಡಲ್ ಇಂಟರ್ ನ್ಯಾಷನಲ್ ಸಹಕಾರೊಂದಿಗೆ ಈ ವ್ಯವಸ್ಥೆಯನ್ನು ಆರಂಭ ಮಾಡಲಾಗಿದೆ. ಭಕ್ತರು ಎದುರಿಸುತ್ತಿದ್ದ ಅತೀ ದೊಡ್ಡ ಸಮಸ್ಯೆ ದೂರವಾಗಿದೆ.

ಕಮಾಂಡ್ ಕಂಟ್ರೋಲ್ ಸೆಂಟರ್-ಎಐ ಕಣ್ಗಾವಲು ವ್ಯವಸ್ಥೆ

ತಿರುಮಲದಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ಅನ್ನು ಸಿಎಂ ಚಂದ್ರಬಾಬು ನಾಯ್ಡು ಅವರು ಉದ್ಘಾಟನೆ ಮಾಡಿದ್ದರು. ಟಿಟಿಡಿ ಇತಿಹಾಸದಲ್ಲಿಯೇ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಒಂದು ಮೈಲುಗಲ್ಲಾಗಿದೆ. ಎನ್​​ಆರ್​ಐ ಸಹಕಾರದೊಂದಿಗೆ ಸುಮಾರು 20 ಕೋಟಿ ರೂಪಾಯಿ ಖರ್ಚು ಮಾಡಿ ಸೆಂಟರ್ ಅನ್ನು ತೆರೆಯಲಾಗಿತ್ತು. ಅಲ್ಲದೇ ವೈಕುಂಠ ಕ್ಯೂ ಕಾಂಪ್ಲೆಕ್ಸ್ ನಲ್ಲಿ ಭಕ್ತರ ಕಣ್ಗಾವಲು ವ್ಯವಸ್ಥೆಯೂ ಭಕ್ತರ ಚಾಲನೆಯನ್ನು ಕ್ಷಣ ಕ್ಷಣವೂ ಪರಿಶೀಲನೆ ನಡೆಸಲಾಗುತ್ತಿದೆ. ಫೇಸ್ ರೆಕಗ್ನಿಷನ್ ಟೆಕ್ನಾಲಜಿ ಮೂಲಕ ಭಕ್ತ ಸಂಖ್ಯೆಗೆ ಅನುಗುಣವಾಗಿ ದರ್ಶನದ ಅವಧಿಯನ್ನು ಅಂದಾಜು ಮಾಡುವ ಕೆಲಸವನ್ನು ಎಐ ಮಾಡುತ್ತದೆ. 3ಡಿ ಮ್ಯಾಪ್ ಮೂಲಕ ಕ್ಯೂ ಲೈನ್ ನಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳ್ನು ವಿಶ್ಲೇಷಣೆ ಮಾಡಿ, ಕೂಡಲೇ ಪರಿಷ್ಕಾರವನ್ನು ನೀಡುತ್ತದೆ.

ಪ್ರಸಾದ ಗುಣಮಟ್ಟ ಕಾಪಾಡಲು ಫುಡ್‌ ಸೇಫ್ಟಿ ಲ್ಯಾಬ್!‌

ಶ್ರೀವಾರಿ ಲಡ್ಡು ಇಡೀ ಜಗತ್ತಿಗೆ ಫೇಮಸ್. ಲಡ್ಡು ರುಚಿ, ಗುಣಮಟ್ಟವನ್ನು ಕಾಪಾಡಿಕೊಳ್ಳಲು ಟಿಟಿಡಿ ಬರೋಬ್ಬರಿ 20 ಕೋಟಿ ರೂಪಾಯಿಗಳೊಂದಿಗೆ ಫುಡ್ ಸೆಫ್ಟಿ ಲ್ಯಾಬ್ ಆರಂಭ ಮಾಡಿದೆ. ಇದು ತಿರುಮಲಕ್ಕೆ ಬರುವ ತುಪ್ಪದ ಗುಣಮಟ್ಟವನ್ನು ಫ್ರಾನ್ಸ್ ಟೆಕ್ನಾಲಜಿ ಹೊಂದಿರುವ ಈ-ನೋಸ್, ಈ-ಟಂಗ್, ನಂತರ ಸಾಧನೆಗಳನ್ನು ಬಳಸಿ ಪರೀಕ್ಷೆ ಮಾಡಿ ಫಲಿತಾಂಶವನ್ನು ನೀಡುತ್ತದೆ. ಇವು ಪರೀಕ್ಷೆಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಅತೀ ಸೂಕ್ಷ್ಮ ಕಲಬೆರಕೆಯನ್ನು ಕೂಡ ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ಸುಮಾರು 200ಕ್ಕೂ ಹೆಚ್ಚು ಅಂಶಗಳನ್ನು ಗುರುತಿಸುತ್ತದೆ. ತುಪ್ಪ ಮಾತ್ರ ಅಲ್ಲ, ಹಾಲು, ಎಣ್ಣೆ, ನೀರನ್ನು ಕೂಡ ಇಲ್ಲಿ ಕಾಲ ಕಾಲಕ್ಕೆ ಪರೀಕ್ಷೆ ಮಾಡಲಾಗುತ್ತದೆ.

ವರ್ಷಕ್ಕೆ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ಲಡ್ಡು ತಯಾರಿಕೆ ಬೇಕಾಗಿರುವ ವಸ್ತುಗಳನ್ನು ಟಿಟಿಡಿ ಖರೀದಿ ಮಾಡುತ್ತದೆ. ಈ ಹಿಂದೆ ಇವುಗಳನ್ನು ಎಲ್ಲಿಂದ ಖರೀದಿ ಮಾಡಲಾಗುತ್ತದೆ ಎಂಬುವುದು ಸೀಕ್ರೆಟ್ ಆಗಿದೆಯೇ ಇರ್ತಿತ್ತು. ಆದರೆ ಇದನ್ನು ಈಗ ಸಂಪೂರ್ಣವಾಗಿ ಡಿಜಿಟಲಿಕರಣ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಸಂರ್ಪೂಣವಾಗಿ ಆನ್ ಲೈನ್ ನಲ್ಲಿಯೇ ನಡೆಯುತ್ತದೆ. ಇದು ಟಿಟಿಡಿ ಖಜಾನೆಗೆ ಹಣವನ್ನು ಉಳಿಸುವುದಲ್ಲದೆ, ಭಕ್ತರಿಗೆ ಗುಣಮಟ್ಟದ ಪ್ರಸಾದವನ್ನು ಒದಗಿಸಲು ಸಹಾಯ ಮಾಡುತ್ತದೆ.

Shwetha M