ನಿಮಗೆ ಹಣದ ಸಮಸ್ಯೆ ಇದ್ಯಾ, ಪರಿಹಾರ ಬೇಕಾ? – ಶುಕ್ರವಾರ ಈ ಬಣ್ಣದ ಬಟ್ಟೆ ಧರಿಸಿ ಲಕ್ಷ್ಮಿ ದೇವಿಯನ್ನ ಪೂಜೆಸಿ

ಲಕ್ಷ್ಮಿ ದೇವಿಯು ವಿಷ್ಣುವಿನ ಅರ್ಧಾಂಗಿ. ದಾಂಪತ್ಯ ಮತ್ತು ಸಂಪತ್ತಿನ ಸಮೃದ್ಧಿಗಾಗಿ ಲಕ್ಷ್ಮಿ ಮತ್ತು ನಾರಾಯಣರನ್ನು (ವಿಷ್ಣು) ಒಟ್ಟಿಗೆ ಪೂಜಿಸುವುದು ಅತ್ಯಂತ ಶುಭಕರ. ವಿಶೇಷವಾಗಿ ಶುಕ್ರವಾರದಂದು ಲಕ್ಷ್ಮಿ ದೇವಿಗೆ ಪ್ರಿಯವಾದ ಸಿಹಿಯಾದ ಪಾಯಸವನ್ನು ನೈವೇದ್ಯ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಿ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ.
ಏಕಾಕ್ಷಿ ತೆಂಗಿನಕಾಯಿ ಸಮರ್ಪಣೆ
ಏಕಾಕ್ಷಿ ತೆಂಗಿನಕಾಯಿ ಎಂದರೆ ಒಂದು ಕಣ್ಣನ್ನು ಮಾತ್ರ ಹೊಂದಿರುವ ತೆಂಗಿನಕಾಯಿ. ಇದು ಲಕ್ಷ್ಮಿ ದೇವಿಯ ರೂಪವಾಗಿಯೇ ಪೂಜಿಸಲ್ಪಡುತ್ತದೆ ಮತ್ತು ದೇವಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಒಂದಾಗಿದೆ. ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ, ಭಕ್ತಿಯಿಂದ ಈ ಏಕಾಕ್ಷಿ ತೆಂಗಿನಕಾಯಿಯನ್ನು ಅರ್ಪಿಸಿದರೆ, ಭಕ್ತರು ಬಯಸಿದ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ಕಮಲದ ಹೂವುಗಳಿಂದ ಆರಾಧನೆ
ಧಾರ್ಮಿಕ ಗ್ರಂಥಗಳ ಪ್ರಕಾರ, ಲಕ್ಷ್ಮಿ ದೇವಿಗೆ ಕಮಲದ ಹೂವುಗಳು ಎಂದರೆ ಅಚ್ಚುಮೆಚ್ಚು. ಲಕ್ಷ್ಮಿಯನ್ನು ‘ಕಮಲವಾಸಿನಿ’ (ಕಮಲದ ಮೇಲೆ ವಾಸಿಸುವವಳು) ಎಂದೇ ಕರೆಯಲಾಗುತ್ತದೆ. ಆದ್ದರಿಂದ, ಶುಕ್ರವಾರದಂದು ಶುದ್ಧವಾದ ಕಮಲದ ಹೂವುಗಳನ್ನು ತಂದು ದೇವಿಗೆ ಅರ್ಪಿಸಿ ಪೂಜೆ ಮಾಡುವುದರಿಂದ, ಆಕೆಯು ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ. ಈ ಆರಾಧನೆಯು ಸಂಪತ್ತು ಮತ್ತು ಸಮೃದ್ಧಿಯನ್ನು ನಿಮ್ಮತ್ತ ಆಕರ್ಷಿಸುತ್ತದೆ.
ಶುಕ್ರವಾರದಂದು ಸಂಪೂರ್ಣವಾಗಿ ಶಾಸ್ತ್ರೋಕ್ತ ವಿಧಿ-ವಿಧಾನಗಳ ಪ್ರಕಾರ ಲಕ್ಷ್ಮಿ ಪೂಜೆಯನ್ನು ಮಾಡಬೇಕು. ಅನೇಕ ಭಕ್ತರು ಈ ದಿನ ಉಪವಾಸ ವ್ರತವನ್ನೂ ಆಚರಿಸುತ್ತಾರೆ. ನಿಷ್ಠೆಯಿಂದ ವ್ರತ ಅಥವಾ ಪೂಜೆ ಮಾಡುವುದರಿಂದ ಹಣಕಾಸಿನ ತೊಂದರೆಗಳು ಮತ್ತು ಸಾಲದ ಸಮಸ್ಯೆಗಳು ಬೇಗನೆ ಪರಿಹಾರವಾಗುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಸ್ಥಿರವಾಗಿ ಸುಧಾರಿಸುತ್ತದೆ.
ಶುಕ್ರ ಗ್ರಹದ ಬಲ ವೃದ್ಧಿ
ಶುಕ್ರವಾರದಂದು, ಬಿಳಿ ಬಟ್ಟೆ ಧರಿಸಿ ಲಕ್ಷ್ಮಿ ಪೂಜೆ ಮಾಡುವುದರಿಂದ ಶುಕ್ರ ಗ್ರಹದ ಬಲ ಹೆಚ್ಚುತ್ತದೆ. ದೇವಿಯ ಪೂಜೆಯಲ್ಲಿ ಅಕ್ಷತೆಯನ್ನು ಬಳಸಬಾರದು. ಇದರಿಂದ ದೇವಿಯು ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ.

ನೋಡಿರಿ

