RCB ಹಿಂದಿಕ್ಕಿದ RR – LSG ಬ್ಯಾಟರ್ ಗಳ ZERO ರೇಸ್
ಆಟ ಮರೆತ ಪಂತ್ ಪಡೆ

ಚೇಸಿಂಗ್ ಆಗ್ತಿಲ್ಲ.. ಡಿಫೆನ್ಸ್ ಮಾಡಿಕೊಳ್ತಿಲ್ಲ. ಹೋಗ್ಲಿ ಫೈಟ್ ಕೊಡೋಕೇ ರೆಡಿ ಇಲ್ಲ. ಲಕ್ನೋ ಸೂಪರ್ ಜೇಂಟ್ಸ್ ಅದ್ಯಾಕೋ ಏನೋ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಥರ ಪರ್ಫಾಮ್ ಮಾಡ್ತಿದ್ದಾರೆ. ಮಿಮಿಮಂ ಸ್ಕೋರ್ ನೂ ಚೇಸ್ ಮಾಡ್ತಿಲ್ಲ. ರಾಜಸ್ತಾನ್ ವಿರುದ್ಧದ ಮಾಚಲ್ಲಿ ಲಕ್ನೋ ಕಂಪ್ಲೀಟ್ ಸರೆಂಡರ್ ಆಗಿದೆ.
ಇದನ್ನೂ ಓದಿ : ಜಡೇಜಾ ಜಾದೂ.. ಲಕ್ನೋಗೆ ಸೋಲುಣಿಸಿದ ರಾಯಲ್ಸ್! – 40 ರನ್‌ಗಳಿಂದ ಗೆದ್ದ RR
ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ವರ್ಸಸ್ ಲಕ್ನೋ ನಡುವಿನ ಮ್ಯಾಚಲ್ಲಿ ಟಾಸ್ ಗೆದ್ದ ಲಕ್ನೋ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಒಳ್ಳೆ ಓಪನಿಂಗ್ ಸಿಗ್ಲಿಲ್ಲ. ಹಂಗೂ ಹಿಂಗೂ ಮಾಡಿ ರವೀಂದ್ರ ಜಡೇಜಾ 150ರ ಗಡಿ ದಾಟಿಸಿದ್ರು. 6 ವಿಕೆಟ್ ನಷ್ಟಕ್ಕೆ 159 ರನ್ಸ್ ಹೊಡೆದ್ರು. ಅಲ್ಲಿಗೆ 160 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಲಕ್ನೋ ಈಷ್ಟು ಈಸಿಯಾಗಿ ಸೋಲುತ್ತೆ ಅಂತಾ ಯಾರೂ ಊಹೆ ಮಾಡಿರಲಿಲ್ಲ.
ಲಕ್ನೋ ಸೋಲಿಗೆ ಕಾರಣಗಳು!
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನಕ್ಕೆ ನಿರೀಕ್ಷಿತ ಓಪನಿಂಗ್ ಸಿಗ್ಲಿಲ್ಲ
ಲಕ್ನೋ ಬೌಲರ್ ಗಳ ಅಟ್ಯಾಕ್ ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ಸ್
ಲಕ್ನೋ ಪರ ಮಯಾಂಕ್ ಯಾದವ್ ಮಾತ್ರನೇ ದುಬಾರಿ 56 ರನ್ಸ್
ರವೀಂದ್ರ ಜಡೇಜಾ 43 ರನ್ ಗಳಿಸಿದ್ದೆ ಮಿನಿಮಮ್ ಸ್ಕೋರ್ ದಾಖಲು
ಚೇಸಿಂಗ್ ಆರಂಭಿಸಿದ ಲಕ್ನೋ ಪರ ಬ್ಯಾಟರ್ಸ್ ಪೆವಿಲಿಯನ್ ಪರೇಡ್
ಬದೋನಿ, ಪಂತ್, ಏಡಂ ಮಾರ್ಕ್ರಂ ಖಾತೆ ತೆರೆಯದೇ ಔಟ್
ಮಿಚೆಲ್ ಮಾರ್ಷ್ 55, ಪೂರನ್ 22 ರನ್ ಗಳಿಸಿದ್ದೇ ಹೈಯೆಸ್ಟ್
ಅಂತಿಮವಾಗಿ 18 ಓವರ್ ಗಳಲ್ಲೇ ಆಲೌಟ್ ಆಗಿ 40 ರನ್ಸ್ ಸೋಲು
ರಾಜಸ್ಥಾನ ಪರ ಯಾರೂ ಕೂಡ 8ರ ಮೇಲೆ ರನ್ಸ್ ಕೊಟ್ಟಿಲ್ಲ
ಲಕ್ನೋ ತಂಡ ಕಂಪ್ಲೀಟ್ ಸರೆಂಡರ್ ಆಗಿತ್ತು. ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ತಂಡದ ಪರ್ಫಾಮೆನ್ಸ್ ನೋಡಿ ಸಂಜೀವ್ ಗೋಯೆಂಕಾ ಅಂತೂ ಫುಲ್ ಕನ್ಫ್ಯೂಸ್ ಆಗಿದ್ದಾರೆ. 7 ಪಂದ್ಯಗಳನ್ನ ಆಡಿರೋ ಎಲ್ಎಸ್ಜಿ 2ರಲ್ಲಿ ಗೆದ್ದು 9ನೇ ಸ್ಥಾನದಲ್ಲಿದೆ. ಪ್ಲೇಆಫ್ಗೆ ಸೆಲೆಕ್ಟ್ ಆಗ್ಬೇಕು ಅಂದ್ರೆ ಮುಂದಿನ ಪಂದ್ಯಗಳಲ್ಲಿ ಮಸ್ಟ್ ವಿನ್ ಆದ್ರೆ ಮಾತ್ರವೇ ಸಾಧ್ಯ ಇದೆ. ಇನ್ನು ರಾಜಸ್ಥಾನ 10 ಅಂಕಗಳೊಂದಿಗೆ ಈಗ ಎರಡನೇ ಸ್ಥಾನಕ್ಕೇರಿದೆ. ಆರ್ಸಿಬಿ 3ಕ್ಕೆ ಜಾರಿದೆ.

ನೋಡಿರಿ

