SSLC ಫಲಿತಾಂಶ ಪ್ರಕಟ! – ದಕ್ಷಿಣ ಕನ್ನಡ ಪ್ರಥಮ.. ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ!

2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ರಿಸಲ್ಟ್ ಪ್ರಕಟವಾಗಿದೆ. ಈ ಬಾರಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡಿದ್ರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ನೀರು ಕುಡಿಯಲು ಹೋದ ಗಜರಾಜ ದುರಂತ ಅಂತ್ಯ! – ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ನಂತ್ರ ಸಾವು!
ಎಸ್ಎಸ್ಎಲ್ಸಿ ಪರೀಕ್ಷೆ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು. ಈ ಬಾರಿ 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಎಸ್ಎಸ್ಎಲ್ಸಿಯಲ್ಲಿ ಶೇ.94.1 ಮಂದಿ ಪಾಸ್ ಆಗಿದ್ದಾರೆ.
ಇನ್ನು ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
SSLC ಪರೀಕ್ಷೆಯಲ್ಲಿ ಬರೋಬ್ಬರಿ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ, ರಾಯಚೂರಿನ ವಿದ್ಯಾರ್ಥಿ ಸುಖದೇವ್ಗೆ ಸಂಪೂರ್ಣ ಅಂಕ ದೊರೆತಿದೆ.
ಜಿಲ್ಲಾವಾರು ಫಲಿತಾಂಶ
- ದಕ್ಷಿಣ ಕನ್ನಡ ಜಿಲ್ಲೆ- 98.40%
- ಉಡುಪಿ – 98.18%
- ಉತ್ತರ ಕನ್ನಡ- 98.09%
- ಹಾಸನ- 97.51%
- ಮಂಡ್ಯ- 97.45%
- ಶಿರಸಿ- 97.21%
- ಹಾವೇರಿ- 96.87%
- ಕೊಡಗು- 96.70%
- ಶಿವಮೊಗ್ಗ- 96.56%
- ವಿಜಯನಗರ- 96.39%
- ಬೆಂಗಳೂರು ಗ್ರಾಮಾಂತರ – 95.84%
- ಧಾರವಾಡ – 95.59%
- ಕೋಲಾರ- 95.50%
- ಬಾಗಲಕೋಟೆ- 95.42%
- ಬೆಂಗಳೂರು ಉತ್ತರ- 95.34%
- ಗದಗ- 95.24%
- ಚಿಕ್ಕಮಗಳೂರು- 94.99%
- ಬೆಳಗಾವಿ – 94.75%
- ದಾವಣಗೆರೆ- 94.64%
- ಮೈಸೂರು- 94.50%
- ರಾಯಚೂರು- 94.41%
- ವಿಜಯಪುರ- 94.17%
- ಚಿಕ್ಕೋಡಿ- 94.09%
- ಬಳ್ಳಾರಿ- 93.36%
- ಕೊಪ್ಪಳ- 93.10%
- ರಾಮನಗರ- 92.83%
- ಚಿತ್ರದುರ್ಗ- 92.25%
- ಬೀದರ್- 92.18%
- ತುಮಕೂರು- 92.04%
- ಚಾಮರಾಜನಗರ- 91.89%
- ಯಾದಗಿರಿ- 91.89%
- ಬೆಂಗಳೂರು ದಕ್ಷಿಣ- 91.65%
- ಚಿಕ್ಕಬಳ್ಳಾಪುರ- 90.88%
- ಮಧುಗಿರಿ- 90.26%
- ಕಲಬುರಗಿ-85.06%
- 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ನೋಡಿರಿ

