ನೀರು ಕುಡಿಯಲು ಹೋದ ಗಜರಾಜ ದುರಂತ ಅಂತ್ಯ! – ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ನಂತ್ರ ಸಾವು!

ರಾಜ್ಯಾದ್ಯಂತ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಮಿತಿಮೀರಿ ಹೋಗುತ್ತಿದೆ. ಕರಾವಳಿ ಕರ್ನಾಟಕ ಭಾಗದಲ್ಲಿಯೂ ಬಿಸಿಲ ಧಗೆಗೆ ಜನತೆ ಕಂಗಾಲಾಗಿ ಹೋಗಿದ್ದಾರೆ. ಅತಿಯಾದ ಬಿಸಿಗಾಳಿ ಹಾಗೂ ಉಷ್ಣತಾಪಮಾನದಿಂದ ಜನತೆ ಕಂಗಾಲಾಗಿ ಹೋಗಿದ್ದಾರೆ. ಇದೀಗ ಬಿಸಿಲಿನ ಎಫೆಕ್ಟ್ ಪ್ರಾಣಿಗಳ ಮೇಲೂ ಬಿದ್ದಿದೆ. ಇದೀಗ ನೀರು ಕುಡಿಯಲು ಹೋಗಿದ್ದ ಕಾಡಾನೆಯೊಂದು ಜೀವ ಕಳೆದುಕೊಂಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತದಾನದ ಹೊತ್ತಲ್ಲೇ ಕಚ್ಚಾಬಾಂಬ್ ದಾಳಿ! – ಹಲವರಿಗೆ ಗಾಯ!
ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ಮೂರು ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಉಡುತೊರೆಹಳ್ಳದ ಜಲಾಶಯದ ಬಳಿ ನಡೆದಿದೆ.
ಬಿಸಿಲಿನ ಬೇಗೆ ತಣಿಸಿಕೊಳ್ಳಲು ಉಡುತೊರೆಹಳ್ಳ ಜಲಾಶಯಕ್ಕೆ ನೀರು ಕುಡಿಯಲು ಬಂದಿದ್ದ ಕಾಡಾನೆ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಅರಣ್ಯ ಸಿಬ್ಬಂದಿ ಆನೆಯನ್ನ ರಕ್ಷಣೆ ಮಾಡಿ ಹೊರತಂದಿದ್ದರು. ಆದರೂ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದ ಆನೆಗೆ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೇ ಆನೆ ಸಾವನ್ನಪ್ಪಿದೆ.
ಬೇಸಿಗೆ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಎದುರಾಗಬಹುದಾದ ಕುಡಿವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಈ ಮಧ್ಯೆ ಮನಕಲುಕುವ ಘಟನೆಯೊಂದು ನಡೆದುಹೋಗಿದೆ.

ನೋಡಿರಿ

