ದೇಶ ವಿರೋಧಿ ಸಂಚು ರೂಪಿಸಿದ್ದ ಶಂಕಿತ ಉ*ಗ್ರರ ಹೆಡೆಮುರಿ ಕಟ್ಟಿದ ಭಯೋತ್ಪಾದನಾ ನಿಗ್ರಹ ದಳ

ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಮತ್ತು ದೇಶದ ಮೇಲೆ ದಾಳಿ ಮಾಡಲು ಯೋಜಿಸಿದ್ದ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಇಬ್ಬರು ಆರೋಪಿಗಳನ್ನು ಬಂಧಿಸಿದೆ. ʼʼಆರೋಪಿಗಳು ಘಜ್ವಾ-ಎ-ಹಿಂದ್ ಸ್ಥಾಪಿಸುವ ಗುರಿಯನ್ನು ಹೊಂದಿರುವ ಭಯೋತ್ಪಾದಕ ಜಾಲವನ್ನು ರಚಿಸಲು, ಆರ್‌ಡಿಎಕ್ಸ್ ಸ್ಫೋಟಕಗಳನ್ನು ಬಳಸಿ ದೇಶದ ವಿರುದ್ಧ ಯುದ್ಧ ಮಾಡಲು ಯೋಜಿಸಿದ್ದರು. ಅಲ್ಲದೆ, ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ರಾಜಕೀಯ ನಾಯಕರನ್ನು ಗುರಿಯಾಗಿಸಲು ಮತ್ತು ತಮ್ಮ ಉದ್ದೇಶಗಳನ್ನು ಪೂರೈಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದರುʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಎಟಿಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದಂತೆ, ತಾಂತ್ರಿಕ ಹಾಗೂ ಮಾನವ ಗುಪ್ತಚರ ಮಾಹಿತಿಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ರಾಷ್ಟ್ರವಿರೋಧಿ ಚಟುವಟಿಕೆಗಳ ಮೇಲೆ ನಿಕಟ ನಿಗಾವಹಿಸಲಾಗುತ್ತಿದೆ. ಈ ಪ್ರಕ್ರಿಯೆಯ ವೇಳೆ ಪಠಾಣ್ ಜಿಲ್ಲೆಯ ಸಿದ್ಧಾಪುರದ ನಿವಾಸಿ ಇರ್ಫಾನ್ ಕಲೇಖಾನ್ ಪಠಾಣ್ (22) ಬಗ್ಗೆ ನಿರ್ದಿಷ್ಟ ಮಾಹಿತಿ ಗೊತ್ತಾಯಿತು. ಈತ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತದಿಂದ ಪ್ರಭಾವಿತನಾಗಿದ್ದನೆಂದು ಹೇಳಲಾಗಿದೆ.
ಇದನ್ನೂ ಓದಿ: ಚುರುಮುರಿ ಅಂಗಡಿ ಮಾಲೀಕನಿಗೆ ಖುಲಾಯಿಸಿದ ಅದೃಷ್ಟ ಲಕ್ಷ್ಮೀ! – ಮೋದಿ ಕೊಟ್ಟ 10ರೂ. ನೋಟಿಗೆ ಫುಲ್ ಡಿಮ್ಯಾಂಡ್!
ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಟಿಎಸ್ ಅಧಿಕಾರಿಗಳು ಪಠಾಣ್‌ನನ್ನು ವಿಚಾರಣೆಗೆ ಒಳಪಡಿಸಿದರು. ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳ ಮೂಲಕ ಐಸಿಸ್ ಮತ್ತು ಇತರ ಮೂಲಭೂತವಾದಿ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾನೆಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆ ಪಠಾಣ್ ಜಿಹಾದಿ ಪ್ರಚಾರವನ್ನು ಹರಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಮತ್ತು ದೇಶಾದ್ಯಂತ ಸಮಾನ ಮನಸ್ಕ ಮೂಲಭೂತವಾದಿಗಳ ಜಾಲವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದೆ. ಪಠಾಣ್, ತನ್ನ ಸಹಚರರೊಂದಿಗೆ ಭಾರತದ ವಿರುದ್ಧ ಯುದ್ಧ ಹೂಡಲು ಮತ್ತು ಘಜ್ವಾ-ಎ-ಹಿಂದ್ ಸ್ಥಾಪಿಸುವ ಗುರಿಯನ್ನು ಹೊಂದಿರುವ ಭಯೋತ್ಪಾದಕ ಜಾಲವನ್ನು ರಚಿಸಲು ಸಂಚು ರೂಪಿಸಿದ್ದ ಎಂದು ಎಟಿಎಸ್ ಆರೋಪಿಸಿದೆ. ವಿವಿಧ ರಾಜ್ಯಗಳಿಂದ ಮುಜಾಹಿದ್ದೀನ್‌ಗಳನ್ನು ನೇಮಿಸಿಕೊಳ್ಳಲು, ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವಲ್ಲಿ ಮತ್ತು ಆರ್‌ಡಿಎಕ್ಸ್ ಬಾಂಬ್ ಸೇರಿದಂತೆ ಸ್ಫೋಟಕಗಳನ್ನು ತಯಾರಿಸುವ ತರಬೇತಿ ನೀಡಲು ಮತ್ತು ಅಂತಹ ಚಟುವಟಿಕೆಗಳಿಗಾಗಿ ಶಿಬಿರಗಳನ್ನು ಆಯೋಜಿಸಲು ಅವನು ಯೋಜಿಸುತ್ತಿದ್ದನೆಂದು ಆರೋಪಿಸಲಾಗಿ

ನೋಡಿರಿ

