ಪ್ರಾಕ್ಟೀಸ್‌ ವೇಳೆಯಲ್ಲೇ ಸಿಗರೇಟ್ ಸೈದ ಕಗಿಸೋ ರಬಾಡ – ವಿಡಿಯೋ ವೈರಲ್, ಮುಂದಿನ ಕ್ರಮವೇನು?

ಪ್ರಾಕ್ಟೀಸ್‌ ವೇಳೆಯಲ್ಲೇ ಸಿಗರೇಟ್ ಸೈದ ಕಗಿಸೋ ರಬಾಡ – ವಿಡಿಯೋ ವೈರಲ್, ಮುಂದಿನ ಕ್ರಮವೇನು?

ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೊ ರಬಾಡ  ಅಭ್ಯಾಸ ವೇಳೆ ಸಿಗರೇಟ್ ಸೇದುತ್ತಿದ್ದಾರೆ ಎನ್ನಲಾದ  ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು. ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವೈರಲ್‌ ಈ ದೃಶ್ಯದಲ್ಲಿ ರಬಾಡ ಮಾತ್ರವಲ್ಲದೆ ಗುಜರಾತ್ ಟೈಟಾನ್ಸ್‌ನ ಹಲವಾರು ಇತರ ವ್ಯಕ್ತಿಗಳು ಸಹ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಅವರ ಗುರುತುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದ್ರೆ ರಬಾಡ ಮಾತ್ರ ಧಮ್ ಎಳೆಯೋ ದೃಶ್ಯ ಸರಿಯಾಗಿ ಸೆರೆಯಾಗಿದೆ.

ದಕ್ಷಿಣ ಆಫ್ರಿಕಾದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ರಬಾಡ, ಈ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಆರು ಪಂದ್ಯಗಳಿಂದ 10 ವಿಕೆಟ್‌ಗಳನ್ನು ಕಬಳಿಸಿರುವ ಅವರು ಪ್ರಸ್ತುತ ಪರ್ಪಲ್ ಕ್ಯಾಪ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಬಲಗೈ ವೇಗಿ 9.73 ರ ಎಕಾನಮಿ ದರದೊಂದಿಗೆ ಸರಾಸರಿ 22.20 ಹೊಂದಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಅಬ್ಬರ.. ಮಾಲಿಂಗ ಆರ್ಭಟ – SRH ಸುನಾಮಿಗೆ ಪಲ್ಟಿ ಹೊಡೆದ ಡೆಲ್ಲಿ

ಹಿಂದಿನ ಐಪಿಎಲ್ ಋತುವಿನಲ್ಲಿ, ಅವರು ದಕ್ಷಿಣ ಆಫ್ರಿಕಾದ ಡ್ರಗ್ ಫ್ರೀ ಸ್ಪೋರ್ಟ್ಸ್ ಸಂಸ್ಥೆಯಿಂದ ವಿಧಿಸಲಾದ ಒಂದು ತಿಂಗಳ ನಿಷೇಧವನ್ನು ಪೂರೈಸಿದ್ದರು. ಅಮಾನತು ಅವಧಿಯನ್ನು ಪೂರೈಸುವ ಸಲುವಾಗಿ ಪಂದ್ಯಾವಳಿಯ ಮಧ್ಯದಲ್ಲಿ ಹೊರಬಂದಿದ್ದರು. ಪ್ರಸ್ತುತ, ಗುಜರಾತ್ ಟೈಟಾನ್ಸ್ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ ಮತ್ತು ಇದುವರೆಗೆ ಮೂರು ಗೆಲುವುಗಳೊಂದಿಗೆ ಪ್ಲೇಆಫ್ ಸ್ಥಾನದ ಹುಡುಕಾಟದಲ್ಲಿದೆ. ಏಪ್ರಿಲ್ 24 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವ ಮೂಲಕ ಅವರು ಮತ್ತೆ ಆಟಕ್ಕೆ ಇಳಿಯಲಿದ್ದಾರೆ.

.

ಈ ಋತುವಿನ ಆರಂಭದಲ್ಲಿ, ಯುಜ್ವೇಂದ್ರ ಚಾಹಲ್ ಧೂಮಪಾನ ಮಾಡಿ ವಾಹನ ಚಲಾಯಿಸುತ್ತಿರುವುದನ್ನು ವೈರಲ್ ಆದ ಕ್ಲಿಪ್‌ನಲ್ಲಿ ತೋರಿಸಿದಾಗ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು. ಅಭಿಮಾನಿಗಳು ನಡವಳಿಕೆಯನ್ನು ಟೀಕಿಸಿದರು ಮತ್ತು ಕಳವಳ ವ್ಯಕ್ತಪಡಿಸಿದ್ದರು. ರಬಾಡ ಅವರ ವಿಡಿಯೋ ಸದ್ಯಕ್ಕೆ ದೃಢಪಟ್ಟಿಲ್ಲ. ಜತೆಗೆ ಆಟಗಾರ ಅಥವಾ ಫ್ರಾಂಚೈಸಿಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟೀಕರಣವಿಲ್ಲ.

ಮುಂಬೈ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 99 ರನ್‌ಗಳ ಹೀನಾಯ ಸೋಲು ಕಂಡಿತ್ತು. ಸೋಮವಾರ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ತಿಲಕ್‌ ವರ್ಮ ಅವರ ಶತಕದ ನೆರವಿನಿಂದ 5 ವಿಕೆಟ್‌ಗೆ 199 ರನ್‌ ಬಾರಿಸಿತು. ದೊಡ್ಡ ಗುರಿ ಬೆನ್ನತ್ತಿದ ಗುಜರಾತ್‌ 15.5 ಓವರ್‌ಗಳಲ್ಲಿ 100 ರನ್‌ಗೆ ಸರ್ವಪತನ ಕಂಡು ಸೋಲಿಗೆ ತುತ್ತಾಗಿತ್ತು.

ಚೇಸಿಂಗ್‌ ವೇಳೆ ಗುಜರಾತ್‌ ತಂಡಕ್ಕೆ ಯಾರೂ ಆಸರೆಯಾಗಲಿಲ್ಲ. ಆರಂಭಿಕ ಸಾಯಿ ಸುದರ್ಶನ್‌ ಗೋಲ್ಡನ್‌ ಡಕ್‌ ಆದರೆ, ನಾಯಕ ಶುಭಮನ್‌ ಗಿಲ್‌ 15, ಆ ಬಳಿಕ ಬಂದ ಜಾಸ್‌ ಬಟ್ಲರ್‌(5), ಗ್ಲೆನ್‌ ಫಿಲಿಫ್ಸ್‌(6) ಮತ್ತು ರಾಹುಲ್‌ ತೆವಾಟಿಯ(8) ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫಲರಾದರು. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪರೇಡ್‌ ನಡೆಸಿದ್ದರು.

Kishor KV