ಕಿಂಗ್ ಕೊಹ್ಲಿ Vs ಪ್ರಿನ್ಸ್ ಗಿಲ್ – ಯಾರಿಗೆ ಸುಲಭದ ಬೇಟೆ?   

ಕಿಂಗ್ ಕೊಹ್ಲಿ Vs ಪ್ರಿನ್ಸ್ ಗಿಲ್ – ಯಾರಿಗೆ ಸುಲಭದ ಬೇಟೆ?   

ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಕ್ಸ್​ಟ್ ಟಾರ್ಗೆಟ್ ಗುಜರಾತ್ ಟೈಟಾನ್ಸ್.. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿರೋ ರೆಡ್ ಆರ್ಮಿ ನೆಕ್ಸ್​ಟ್ ಮ್ಯಾಚಲ್ಲಿ ಗೆದ್ದು ಕಂ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ. ಅತ್ತ ಮುಂಬೈ ವಿರುದ್ಧ ಹೀನಾಯವಾಗಿ ಸೋತಿರೋ ಗುಜರಾತ್​ ಕೂಡ ಕ್ರೂಶಿಯಲ್ ಸ್ಟೇಜ್​ನಲ್ಲಿದೆ.

ಇದನ್ನೂ ಓದಿ : T-20Iನಲ್ಲಿ ಸೂರ್ಯ ಮುಳುಗೋ ಟೈಂ – 4ನೇ ಸ್ಲಾಟ್.. ಶ್ರೇಯಸ್ ಗೆ ಪಟ್ಟಾಭಿಷೇಕ

ಆಡಿರೋ ಆರು ಮ್ಯಾಚಲ್ಲಿ 4ರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ 2ನಲ್ಲಿರೋ ಆರ್​ಸಿಬಿ. ಮತ್ತೊಂದೆಡೆ 6 ಪಂದ್ಯಗಳಲ್ಲಿ ಮೂರರಲ್ಲಿ ಸೋತು ಮೂರರಲ್ಲಿ ಗೆದ್ದು 6ನೇ ಸ್ಥಾನದಲ್ಲಿರೋ ಜಿಟಿ. ಉಭಯ ತಂಡಗಳು ಈಗ ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಎದುರು ಬದುರಾಗ್ತಿದ್ದಾರೆ. ಈ ಪಂದ್ಯ ಕಿಂಗ್ ವರ್ಸಸ್ ಪ್ರಿನ್ಸ್ ಅನ್ನೋ ಥರನೇ ಇರುತ್ತೆ. ಆರ್​ಸಿಬಿಯಲ್ಲಿ ಕಿಂಗ್ ಕೊಹ್ಲಿ ಇದ್ರೆ ಗುಜರಾತ್​ನಲ್ಲಿ ಪ್ರಿನ್ಸ್ ಶುಭ್​ಮನ್ ಗಿಲ್ ಇರ್ತಾರೆ. ಸೋ ಈ ಪಂದ್ಯ ತುಂಬಾನೇ ಇಂಟ್ರೆಸ್ಟಿಂಗ್ ಆಗಿರುತ್ತೆ.

ಕಳೆದ ಪಂದ್ಯಗಳಲ್ಲಿ ಸೋಲು.. ಯಾರಿಗೆ ಗೆಲುವಿನ ಟ್ರ್ಯಾಕ್?

ಅಷ್ಟಕ್ಕೂ ಈ ಪಂದ್ಯ ಎರಡೂ ತಂಡಗಳಿಗೂ ಮಸ್ಟ್ ವಿನ್ ಗೇಮ್ ಆಗುತ್ತೆ. ಯಾಕಂದ್ರೆ ಕಳೆದ ಪಂದ್ಯಗಳಲ್ಲಿ ಇಬ್ಬರೂ ಸೋಲು ಕಂಡಿದ್ದಾರೆ. ಅಂದ್ರೆ ಕಳೆದ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫಸ್ಟ್ ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 175 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.5 ಓವರ್​ಗಳಲ್ಲಿ 179 ರನ್ ಬಾರಿಸಿ 6 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಌಕ್ಚುಲಿ ಈ ಪಂದ್ಯ ತುಂಬಾನೇ ಕ್ಲೋಸ್ ಗೇಮ್ ಆಗಿ ಲಾಸ್ಟ್ ಓವರ್​ವರೆಗೂ ಆರ್​ಸಿಬಿಗೆ ಗೆಲ್ಲೋ ಹೋಪ್ಸ್ ಇತ್ತು. ಬಟ್ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ಲಿಲ್ಲ. ಆದ್ರೆ ಗುಜರಾತ್ ಹಾಗಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯಕವಾಗಿ ಸೋತಿದ್ದಾರೆ. ಫಸ್ಟ್ ಬ್ಯಾಟಿಂಗ್ ಮಾಡಿ ತಿಲಕ್ ವರ್ಮಾ ಅವ್ರ ಅದ್ಭುತ ಶತಕದಿಂದ 199 ರನ್ ಕಲೆ ಹಾಕಿದ್ದ ಮುಂಬೈ ತಂಡದ ಎದುರು ಗುಜರಾತ್ ಟೀಂ ಕೇವಲ 100 ರನ್​ಗಳಿಗೆ ಆಲೌಟ್ ಆಗಿತ್ತು. 99 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋತಿದ್ರು. ಹೀಗಾಗಿ ಈ ಪಂದ್ಯದಲ್ಲಿ ಆರ್​ಸಿಬಿ ಡಾಮಿನೇಷನ್ ಮಾಡಬಹುದು.

ಬೆಂಗಳೂರು & ಗುಜರಾತ್ ಜರ್ನಿ!

ಮಾದರಿ                            ಬೆಂಗಳೂರು                           ಗುಜರಾತ್

2026ರ ಗೆಲುವು                      4                                                3

ಟಾಪ್ ಸ್ಕೋರರ್                   ಕೊಹ್ಲಿ (247)                         ಗಿಲ್(265)

ಟಾಪ್ ಬೌಲರ್                   ಭುವನೇಶ್ವರ್(10)                    ಪ್ರಸಿದ್ಧ್ ಕೃಷ್ಣ (12)

ಹೈಯೆಸ್ಟ್ ರನ್ಸ್                       250                                             210

ಹೈಯೆಸ್ಟ್ ಸ್ಟ್ರೈಕ್ ರೇಟ್             ರಜತ್ (212.96)                  ಬಟ್ಲರ್ (156.06)

ಒಟ್ಟು ಪಂದ್ಯಗಳ ಗೆಲುವು (6)              3                                  3

ಬೆಂಗಳೂರು ವರ್ಸಸ್ ಜಿಟಿ ನಡುವಿನ ಸ್ಟಾಟ್ಸ್ ನೋಡಿದಾಗ ರನ್ಸ್ ಮತ್ತು ವಿಕೆಟ್ಸ್ ನಲ್ಲಿ ಗುಜರಾತ್ ತಂಡವೇ ಲೀಡ್​ನಲ್ಲಿದ್ದಾರೆ. ಆದ್ರೆ ವಿನ್ನಿಂಗ್ ಅಂತಾ ಬಂದಾಗ ಬೆಂಗಳೂರು ಡಾಮಿನೇಟ್ ಮಾಡ್ತಿದೆ. ಯಾಕಂದ್ರೆ ಆರ್​ಸಿಬಿ ಯಾರೋ ಒಬ್ರ ಮೇಲೆ ಡಿಪೆಂಡ್ ಆಗಿಲ್ಲ. ಒಂದೊಂದು ಪಂದ್ಯದಲ್ಲೂ ಒಬ್ಬೊಬ್ರು ಇನಿಶಿಯೇಟ್ ತಗೊಂಡು ಮ್ಯಾಚ್ ವಿನ್ ಮಾಡಿಸ್ತಿದ್ದಾರೆ. ಬಟ್ ಜಿಟಿಯಲ್ಲಿ ಕೆಲವರ ಮೇಲೆ ಡಿಪೆಂಡ್ ಆಗಿರೋದು ಗೊತ್ತಾಗ್ತಿದೆ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಮತ್ತೆ ಬೆಂಗಳೂರು ತಂಡವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ.

Shantha Kumari