ಪ್ರಿಯಾ ಆಟಕ್ಕೆ ನಂದಕುಮಾರ್ ಬ್ರೇಕ್.. ಮೀನಾಗೆ ಸಿಕ್ತು ಬೆಸ್ಟ್ ಸೊಸೆ ಪಟ್ಟ! – ಚಿಕ್ಕ ಸೊಸೆ ರಾಕ್.. ದೊಡ್ಡ ಸೊಸೆ ಶಾಕ್!

ಮಾಧವನ ಮಡದಿಯಾಗಿ ನಂದಗೋಕುಲಕ್ಕೆ ಬಂದ ಪ್ರಿಯಾ ಮನೆಯನ್ನೇ ಮೂರು ಭಾಗ ಮಾಡಲು ಹೊರಟಿದ್ದಾಳೆ. ಮೀನಾ, ಅಮ್ಮು ಬಗ್ಗೆ ಇಲ್ಲಸಲ್ಲದ ಚಾಡಿ ಹೇಳಿ ಎಲ್ಲರ ನೆಮ್ಮದಿ ಕೆಡಿಸುತ್ತಿದ್ದಾಳೆ. ಅದೂ ಕೂಡ ಅತ್ತೆ, ಮಾವ ಮುಂದೆ ತಾನು ಬೆಸ್ಟ್ ಸೊಸೆ ಅನ್ನಿಸಿಕೊಳ್ಳಲು. ಪ್ರಿಯಾ ಖತರ್ನಾಕ್ ಬುದ್ದಿಯಿಂದಾಗಿ ಇಡೀ ಮನೆಯ ನೆಮ್ಮದಿ ಹಾಳಾಗಿದೆ. ತಮ್ಮ ತಪ್ಪಿಲ್ಲ ಅಂದ್ರೂ ವಲ್ಲಭ, ಅಮ್ಮು, ಮೀನಾ ಕೇಶವ ನಂದಕುಮಾರ್‌ನಿಂದ ಬೈಸಿಕೊಳ್ಳುತ್ತಿದ್ದಾರೆ. ಇದೀಗ ಕೇಶವ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾನೆ. ಇವೆಲ್ಲದ್ರ ಮಧ್ಯೆ ಈಗ ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ನಂದ ಕುಮಾರ್‌ಗೆ ತನ್ನ ತಪ್ಪಿನ ಅರಿವಾಗಿದ್ದು, ಮೀನಾ, ಅಮ್ಮು ಬಳಿ ಕ್ಷಮೆ ಕೇಳಿದ್ದಾನೆ.
ಇದನ್ನೂ ಓದಿ: ರಾಜ್ಯದಲ್ಲಿ ಹೀಟ್‌ಸ್ಟ್ರೋಕ್‌ಗೆ ಯಾರೂ ಬಲಿಯಾಗಿಲ್ಲ! – ಇಬ್ಬರ ಸಾವಿಗೆ ಇದೇ ಕಾರಣ ಎಂದ ಡಿಹೆಚ್‌ಒ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರೋ ನಂದಗೋಕುಲ ಸೀರಿಯಲ್ ವೀಕ್ಷಕರಿಗೆ ಅಚ್ಚುಮೆಚ್ಚಾಗಿದೆ. ಮೂವರು ಗಂಡು ಮಕ್ಕಳಿಗೆ ಶಿಸ್ತಿನ ಸಿಪಾಯಿ ಅಪ್ಪ ನಂದಕುಮಾರ್.. ಅಮ್ಮನಂತಿರುವ ಅತ್ತೆ ಗಿರಿಜಾ.. ಅವರ ಜೊತೆ ಮುದ್ದು ಸೊಸೆಯಂದಿರು. ಈ ಸುಂದರ ಕುಟುಂಬ ವೀಕ್ಷಕರಿಗೆ ತುಂಬಾ ಇಷ್ಟ.. ಆದ್ರೆ ಈ ಸುಂದರ ಕುಟುಂಬದಲ್ಲಿ ಈಗ ಹುಳಿ ಹಿಂಡಲು ಶೂರ್ಪನಕಿ ಎಂಟ್ರಿಯಾಗಿದೆ. ಮಾಧವನ ಹೆಂಡತಿ ಪ್ರಿಯಾ ಈಗ ಮನೆ ನೆಮ್ಮದಿ ಹಾಳು ಮಾಡ್ತಿದ್ದಾಳೆ. ವಲ್ಲಭ, ಅಮ್ಮು, ಮೀನಾ, ಕೇಶವನ ಬಗ್ಗೆ ನಂದಕುಮಾರ್ ಬಳಿ ಇಲ್ಲ ಸಲ್ಲದ ಚಾಡಿ ಹೇಳಿ ಅವರ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾಳೆ. ಇದ್ರಿಂದಾಗಿ ಎಲ್ಲರೂ ನಂದಕುಮಾರ್‌ನಿಂದ ಬೈಸಿಕೊಳ್ಳುವುದೇ ಆಗಿದೆ. ನಂದಕುಮಾರ್ ವರ್ತನೆಯಿಂದ ಮನೆಯವರೆಲ್ಲರೂ ಬೇಜಾರು ಮಾಡಿಕೊಂಡಿದ್ದಾರೆ. ಕೇಶವ ಅಂತೂ ತಾನು ಬೇರೆ ಮನೆ ಮಾಡುವುದಾಗಿ ನಿರ್ಧರಿಸಿದ್ದಾನೆ. ಇನ್ನೇನು ನಂದಗೋಕುಲದಲ್ಲಿ ಮಹಾ ಸ್ಫೋಟವಾಗುತ್ತೆ ಅಂತ ವೀಕ್ಷಕರು ಅಂದ್ಕೊಂಡಿದ್ರು. ಆದ್ರೆ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
ಹೌದು, ಪ್ರಿಯಾ ಬಂದ್ಮೇಲೆ ನಂದಗೋಕುಲದಲ್ಲಿ ಎಲ್ಲವೂ ಬದಲಾಗಿದೆ. ಮೀನಾ ದೊಡ್ಡ ಸೊಸೆ ಅಂತಿದ್ದ ನಂದ ಕುಮಾರ್, ಪ್ರಿಯಾ ನಾಟಕವನ್ನ ನೋಡಿ ಆಕೆ ಮಾತನ್ನು ಕಣ್ಮುಚ್ಚಿ ನಂಬಲು ಶುರುಮಾಡಿದ್ದ. ಇದ್ರಿಂದಾಗಿ ಮುದ್ದಿನ ಸೊಸೆ ಮೀನಾಳನ್ನು ತಪ್ಪಾಗಿ ತಿಳಿದುಕೊಂಡಿದ್ದ. ಮೀನಾ ಹಾಗೂ ಅಮೂಲ್ಯಾಗೆ ಬೈದಿದ್ದ. ಅಷ್ಟೇ ಅಲ್ಲ… ಅಂಗಡಿಯಲ್ಲೂ ಮೀನಾ ಬದಲಾಗಿದ್ದಾಳೆ ಅಂತ ಹೇಳಿದ್ದ.ಆದ್ರೆ ಇದು ಕೇಶವನಿಗೆ ಇಷ್ಟವಾಗಿರಲಿಲ್ಲ. ತಾಳ್ಮೆ ಕಳೆದುಕೊಂಡು ಅಪ್ಪನ ಮುಂದೆ ಕೂಗಾಡಿದ್ದ. ಅಲ್ದೆ ಬೇರೆ ಮನೆ ಮಾಡುವ ಆಲೋಚನೆ ಮಾಡಿದ್ದ. ಇದನ್ನು ನೋಡಿದ ವೀಕ್ಷಕರು, ನಂದನಿಗೆ ಬುದ್ಧಿ ಬರುತ್ತೆ, ಆತನ ಮನೆ ಒಡೆದು ಹೋಳಾಗುತ್ತೆ, ಪಾಪ ಏನೂ ಮಾಡದ ಮೀನಾ ಶಿಕ್ಷೆ ಅನುಭವಿಸ್ತಿದ್ದಾಳೆ ಅಂತ ನಂದನಿಗೆ ಹಿಡಿಶಾಪ ಹಾಕಿದ್ದರು. ಆದ್ರೀಗ ನಂದಕುಮಾರ್ ಮೀನಾ ಹಾಗೂ ಅಮ್ಮು ಬಳಿ ಕ್ಷಮೆ ಕೇಳಿದ್ದಾನೆ.
ನಂದ, ಸೊಸೆ ಮೀನಾ ಹಾಗೂ ಅಮೂಲ್ಯಗೆ ಕ್ಷಮೆ ಕೇಳಿದ್ದಾನೆ. ನನ್ನನ್ನು ಕ್ಷಮಿಸಿ, ನಾನು ನಿಮಗೆ ಆ ರೀತಿ ಬೈಬಾರದಿತ್ತು ಎಂದಿದ್ದಾನೆ. ಇದನ್ನು ಕೇಳಿದ ಮೀನಾ ತಮಾಷೆಯಾಗಿ ಉತ್ತರ ನೀಡಿದ್ದಾಳೆ. ನಾನು ಬೈದಿದ್ದು ಬೇಜಾರಾಯ್ತಾ ಅಂತ ಮಾವ ಕೇಳಿದ್ರೆ, ಬಿಡಿ ಮಾವ, ನೀವು ಬಯ್ಯೋದು ದಿನ ಬೆಳಿಗ್ಗೆ ಎದ್ದು ಸುಪ್ರಭಾತ ಕೇಳ್ದಂಗೆ. ಮತ್ತೆ ಸುಪ್ರಭಾತ ಯಾವಾಗ ಕೇಳ್ತೀವೋ ಅಂತ ಯೋಚ್ನೆ ಮಾಡ್ತಾ ಇದ್ವಿ ಅಂತ ಮೀನಾ ಹೇಳಿದ್ದಾಳೆ. ಆಕೆ ಮಾತು ಕೇಳಿ ನಂದ ಮನಸ್ಪೂರ್ವಕವಾಗಿ ನಕ್ಕಿದ್ದಾನೆ. ಇನ್ನು ಅಮೂಲ್ಯ, ಮಾವನಿಗೆ ಅಪ್ಪನ ಸ್ಥಾನ ನೀಡಿದ್ದಾಳೆ. ಮನೆಯಲ್ಲಿ ಅಪ್ಪ ಬೈಯ್ಯೋದು ಸಾಮಾನ್ಯ. ತಪ್ಪು ಮಾಡಿದೋರಿಗೆ ಅಪ್ಪ ಬೈದು ಬುದ್ಧಿ ಹೇಳ್ತಾರೆ. ನೀವೂ ನಮಗೆ ಅಪ್ಪನಂತೆ ಅಂತ ಅಮೂಲ್ಯ ಹೇಳ್ತಿದ್ದಂತೆ ನಂದ ಭಾವುಕನಾಗಿದ್ದಾನೆ. ಇತ್ತ ಮೀನಾ ಮಾವ ಕ್ಷಮೆ ಕೇಳಿದ್ದನ್ನ ಕೇಶವನಿಗೆ ಹೇಳಿದ್ದಾಳೆ. ಇದನ್ನ ಆತ ನಂಬಲು ರೆಡಿ ಇಲ್ಲ.. ಇತ್ತ ಬೇರೆ ಮನೆ ಮಾಡುವ ವಿಚಾರ ಗಿರಿಜಾ ಕಿವಿಗೆ ಬಿದ್ದಿದೆ. ಗಿರಿಜಾ ಈಗ ಕೇಶವನ ಮನವೊಲಿಸ್ತಾಳಾ ಅಂತಾ ಕಾದುನೋಡ್ಬೇಕು.
ಒಟ್ಟಾರೆ ನಂದನ ಈ ಬದಲಾವಣೆ ವೀಕ್ಷಕರಿಗೆ ಇಷ್ಟವಾಗಿದೆ. ಇದೀಗ ಮಾವ- ಸೊಸೆಯಂದಿರ ಸುಂದರ ಕ್ಷಣವನ್ನು ವೀಕ್ಷಕರು ಆನಂದಿಸಿದ್ದಾರೆ. ನಂದ ಹೀಗೆ ಬದಲಾದ್ರೆ ಒಳ್ಳೆಯದು. ಮೀನಾ, ಅಮ್ಮು ಬೆಸ್ಟ್ ಸೊಸೆಯಂದಿರು. ಮನೆಹಾಳಿ ಪ್ರಿಯಾ ಮಾತು ಕೇಳಿದ್ರೆ ಇಡೀ ಮನೆಯೇ ಸರ್ವನಾಶ ಆಗುತ್ತೆ. ಒಂದಲ್ಲ ಒಂದು ದಿನ ಪ್ರೀಯಾ ಇನ್ನೊಂದು ಮುಖ ಎಲ್ಲರ ಮುಂದೆ ಬಯಲಾಗುತ್ತೆ ಅಂತಾ ವೀಕ್ಷಕರು ಕಮೆಂಟ್ ಮಾಡಿದ್ದಾರೆ.

ನೋಡಿರಿ

