ರಾಜ್ಯದಲ್ಲಿ ಹೀಟ್‌ಸ್ಟ್ರೋಕ್‌ಗೆ ಯಾರೂ ಬಲಿಯಾಗಿಲ್ಲ! – ಇಬ್ಬರ ಸಾವಿಗೆ ಇದೇ ಕಾರಣ ಎಂದ ಡಿಹೆಚ್‌ಒ!

ರಾಜ್ಯದಲ್ಲಿ ಹೀಟ್‌ಸ್ಟ್ರೋಕ್‌ಗೆ ಯಾರೂ ಬಲಿಯಾಗಿಲ್ಲ! – ಇಬ್ಬರ ಸಾವಿಗೆ ಇದೇ ಕಾರಣ ಎಂದ ಡಿಹೆಚ್‌ಒ!

ಈ ಬಾರಿ ಬೇಸಿಗೆಯು ಸಿಕ್ಕಾಪಟ್ಟೆ ಸುಡುತ್ತಿದೆ. ಭಾರತದಲ್ಲಿ ತಾಪಮಾನ ಹೆಚ್ಚಾದಂತೆ, ಹೀಟ್ ಸ್ಟ್ರೋಕ್   ಪ್ರಕರಣಗಳು ಹೆಚ್ಚಾಗುತ್ತಿದೆ. ಬಿಸಿಗಾಳಿಯು ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲದೆ ಹೀಟ್ ಸ್ಟ್ರೋಕ್‌ನಿಂದಾಗಿ ಜನರ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಹೀಟ್‌ಸ್ಟೋಕ್‌ಗೆ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಅದ್ರೀಗ ಈ ಸಾವಿಗೆ ಹೀಟ್‌ಸ್ಟ್ರೋಕ್‌ ಕಾರಣವಲ್ಲ ಎಂದು ಬಹಿರಂಗವಾಗಿದೆ.

ಇದನ್ನೂ ಓದಿ: ಈತನೇ ಬೇಕು ಎಂದು ಹಠ ಮಾಡಿ ಆಟೋ ಡ್ರೈವರ್‌ನ ಮದುವೆಯಾದ್ಲು.. ಈಗ ಗಂಡನ ಫ್ರೆಂಡ್ ಜೊತೆ ಮಹಿಳೆ ಎಸ್ಕೇಪ್!

ನಿನ್ನೆ ಬೀದರ್‌ನಲ್ಲಿ 20 ವರ್ಷದ ಯುವಕ ಸಾವನ್ನಪ್ಪಿದ್ದರು. ಮನೆಗೆ ತರಕಾರಿ ತರಲು ಹೋಗಿದ್ದಾಗ ಯುವಕ ಅಸ್ವಸ್ಥಗೊಂಡಿದ್ದು, ಕೆಲವೇ ಹೊತ್ತಲ್ಲಿ ಮೃತಪಟ್ಟಿದ್ದಾರೆ. ಈ ಯುವಕ ಸಾವಿಗೆ ಹೀಟ್‌ಸ್ಟ್ರೋಕ್‌ ಕಾರಣ ಎನ್ನಲಾಗಿತ್ತು. ಇದೀಗ ಸಮೀರ್ ಬಿಸಿಲಿನಿಂದ ಮೃತಪಟ್ಟಿಲ್ಲ, ಅವರು ಮದ್ಯ ಸೇವಿಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಬೆಳಗಾವಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ವೆಂಕಟೇಶ್ ಸಾವಿಗೂ ಬಿಸಿಲೇ ಕಾರಣ ಎನ್ನಲಾಗಿತ್ತು. ಆದ್ರೀಗ ವೆಂಕಟೇಶ್ ಅವರು ಕೂಡ ಬಿಸಿಲಿನಿಂದ ನಿಧನರಾಗಿಲ್ಲ. ಅವರಿಗೆ ಹೃದಯಾಘಾತ ಸಂಭವಿಸಿತ್ತು, ಅದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ಡಿಹೆಚ್‌ಒ ತಿಳಿಸಿದ್ದಾರೆ.

Shwetha M