ಗೃಹ ಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಸುದ್ದಿ! – ಉಚಿತ ವಿದ್ಯುತ್ ಯೋಜನೆ ಬಗ್ಗೆ ಬೆಸ್ಕಾಂ ಮಹತ್ವದ ಪ್ರಕಟಣೆ!

ಗೃಹ ಜ್ಯೋತಿ ಫಲಾನುಭವಿಗಳಿಗೆ ಮಹತ್ವದ ಸುದ್ದಿ! – ಉಚಿತ ವಿದ್ಯುತ್ ಯೋಜನೆ ಬಗ್ಗೆ ಬೆಸ್ಕಾಂ ಮಹತ್ವದ ಪ್ರಕಟಣೆ!

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಕೂಡ ಒಂದು. ರಾಜ್ಯದ ಹಲವು ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ.  ಆದರೆ ಇದೀಗ ಹೊಸದಾಗಿ ಮನೆ ಕಟ್ಟಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಈ ಲಾಭ ಸಿಗುತ್ತಿಲ್ಲ. ಅಂತವರಿಗಾಗಿ ಈ ಸುದ್ದಿ. ಇದೀಗ ಇದೇ ವಿಚಾರವಾಗಿ ಬೆಸ್ಕಾಂ ಒಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.

ಇದನ್ನೂ ಓದಿ: ಸೋಲಿನಿಂದ ಕಂಗೆಟ್ಟ ಸಿಎಸ್‌ಕೆಗೆ ಬಿಗ್‌ಶಾಕ್!‌ – ಸ್ಟಾರ್‌ ಪ್ಲೇಯರ್‌ ಟೂರ್ನಿಯಿಂದಲೇ ಔಟ್!

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆಯಿಂದ ಹಲವು ಕುಟುಂಬಗಳು ವಂಚಿತವಾಗಿದೆ. ಮುಖ್ಯವಾಗಿ ನಗರ ಪ್ರದೇಶದಲ್ಲಿ ಜನರು ಪದೇ ಪದೇ ಬಾಡಿಗೆ ಮನೆ ಬದಲಾಯಿಸಿದಾಗ ಈ ಸಮಸ್ಯೆ ತಲೆದೂರತ್ತಿರುತ್ತದೆ. ಇದೀಗ ಇದೇ ವಿಚಾರವಾಗಿ ಬೆಸ್ಕಾಂ ಒಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಇನ್ನು ಮುಂದೆ ಮನೆ ಬದಲಾಯಿಸಿದರೂ ಸಹ ಹಳೆಯ ಮನೆಯ ಗೃಹ ಜ್ಯೋತಿ ಸೌಲಭ್ಯವನ್ನು ಹೊಸ ಮನೆಗೆ ವರ್ಗಾಯಿಸಿಕೊಳ್ಳಲು ‘ಡಿ-ಲಿಂಕ್’ (De-link) ವ್ಯವಸ್ಥೆಯನ್ನು ಕಲ್ಪಿಸಿದ್ದು ಮಾತ್ರವಲ್ಲದೇ ಸುಲಭವಾಗಿ ಸಹ ಮಾಡಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಬಾಡಿಗೆದಾರರು ಅಥವಾ ಮನೆ ಬದಲಿಸುವವರು ಸರ್ಕಾರದ ಉಚಿತ ವಿದ್ಯುತ್ ಯೋಜನೆಯಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ.

ಹೌದು, ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆಯನ್ನು ಬೆಸ್ಕಾಂ ಇದೀಗ ಸುಲಭ ಮಾಡಿದೆ. ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ. ಸೇವಾಸಿಂಧು ಗ್ಯಾರಂಟಿ ಸ್ಕೀಮ್ ಪೋರ್ಟಲ್, ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಸೇವಾ ಸಿಂಧು ಪೋರ್ಟಲ್ನ ಅಧಿಕೃತ ಲಿಂಕ್ ಇದಾಗಿರುತ್ತದೆ.

1) https://sevasindhugs.karnataka.gov.in/

2) https://sevasindhu.karnataka.gov.in/GruhaJyothi_Delink/GetAadhaarData.aspx ಗೆ ಭೇಟಿ ನೀಡುವ ಮೂಲಕ ಹೊಸ ಮನೆಯಲ್ಲಿಯೂ ಗೃಹ ಜ್ಯೋತಿ ಲಾಭವನ್ನು ಪಡೆಯಬಹುದಾಗಿದೆ.

ಡಿ ಲಿಂಕ್ ಮಾಡುವ ವಿಧಾನಗಳು

  • ಈ ಮೇಲೆ ನೀಡಲಾಗಿರುವ ಅಧಿಕೃತ ಲಿಂಕ್ ಗೆ ಭೇಟಿ ನೀಡಬೇಕು
  • ಹಳೆಯ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಿ
  • ಹಾಲಿ ಇರುವ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಬೇಕು.

ಇನ್ನು, ಲವಾರು ಮನೆಗಳಲ್ಲಿ ವಿದ್ಯುತ್ ಮೀಟರ್ ಇನ್ನೂ ಮೃತ ವ್ಯಕ್ತಿಗಳ ಹೆಸರಿನಲ್ಲಿ ಅಥವಾ ಹಳೆಯ ಮಾಲೀಕರ ಹೆಸರಿನಲ್ಲೇ ಇರುವುದರಿಂದ ಯೋಜನೆಯ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ವಿದ್ಯುತ್ ಬಿಲ್‌ನಲ್ಲಿನ ಹೆಸರು ಬದಲಾಯಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೆಸರು ತಿದ್ದುಪಡಿ ಪ್ರಕ್ರಿಯೆ ಹೇಗೆ?

  • ಅರ್ಜಿ ಸಲ್ಲಿಕೆ: ನಿಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಯ (BESCOM, HESCOM, ಇತ್ಯಾದಿ) ಉಪವಿಭಾಗದ ಕಚೇರಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
  • ಅಲ್ಲಿ ಕೇಳಿದ ಎಲ್ಲಾ ಅಧಿಕೃತ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಅಧಿಕಾರಿಗಳಿಗೆ ನೀಡಿ.
  • ಹೆಸರು ವರ್ಗಾವಣೆಗಾಗಿ ನಿಗದಿಪಡಿಸಿದ ಅಲ್ಪ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ದಾಖಲೆಗಳ ಪರಿಶೀಲನೆಯ ನಂತರ ಇಲಾಖೆಯ ಸಿಬ್ಬಂದಿ ನಿಮ್ಮ ಹೆಸರಿಗೆ ಮೀಟರ್ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ.

Shwetha M