ಸೋಲಿನಿಂದ ಕಂಗೆಟ್ಟ ಸಿಎಸ್‌ಕೆಗೆ ಬಿಗ್‌ಶಾಕ್! – ಸ್ಟಾರ್ ಪ್ಲೇಯರ್ ಟೂರ್ನಿಯಿಂದಲೇ ಔಟ್!

ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶಾಕ್ ಎದುರಾಗಿದೆ. ತಂಡ ಯಂಗ್ ಪ್ಲೇಯರ್ ಟೂರ್ನಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ಸೋಲಿನಿಂದ ಕಂಗೆಟ್ಟಿರುವ ಸಿಎಸ್‌ಕೆಗೆ ಈಗ ದೊಡ್ಡ ತಲೆನೋವು ಶುರುವಾಗಿದೆ.
ಇದನ್ನೂ ಓದಿ: ಹೆಣ್ಣು ನೋಡಲು ಹೊರಟವರು ವಿಧಿಯಾಟಕ್ಕೆ ಬಲಿ! – ಜವರಾಯನ ಅಟ್ಟಹಾಸಕ್ಕೆ ವರ, ಆತನ ಅಪ್ಪ – ಅಮ್ಮ ಸಾವು!
ಸಿಎಸ್‌ಕೆ ತಂಡದ ಯುವ ಸ್ಫೋಟಕ ದಾಂಡಿಗ ಆಯುಷ್ ಮ್ಹಾತ್ರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್ ಓಡುವಾಗ ಆಯುಷ್ ಮ್ಹಾತ್ರೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದಾದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಆಯುಷ್ ಗಾಯವು ಗಂಭೀರವಾಗಿದೆ. ವೈದ್ಯಕೀಯ ವರದಿಯ ಪ್ರಕಾರ, ಅವರು ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ 6 ರಿಂದ 12 ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಮ್ಯಾಚ್ಗಳಿಗೆ ಆಯುಷ್ ಲಭ್ಯರಿರುವುದಿಲ್ಲ. ಅಲ್ಲದೇ ಅವರ ಬದಲಿಗೆ ಮತ್ತೋರ್ವ ಆಟಗಾರನನ್ನು ಆಯ್ಕೆ ಮಾಡಲು ಸಿಎಸ್‌ಕೆ ಚಿಂತಿಸಿದೆ.
ಅಂದ್ಹಾಗೆ ಆಯುಷ್ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಋು. 6 ಪಂದ್ಯಗಳಲ್ಲಿ 177.88 ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಅವರ ಅಲಭ್ಯತೆಯು ಸಿಎಸ್‌ಕೆ ಪಾಲಿಗೆ ದೊಡ್ಡ ಹಿನ್ನಡೆಯಾಗಲಿದೆ. ಆಯುಷ್ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಲಿದೆ ಸಿಎಸ್‌ಕೆ ಫ್ರಾಂಚೈಸಿ ಅನ್ನೋ ಕುತೂಹಲ ಮೂಡಿದೆ.

ನೋಡಿರಿ

