CSK, KKRಗೆ ನಾಯಕರೇ ಹೊರೆ – ಪರಾಗ್ ಗೆ ಸೂರ್ಯವಂಶಿ ಆಡಿದ್ರೆ ಸಾಕಾ?
ಕ್ಯಾಪ್ಟನ್ಸಿ ಚೇಂಜ್ ಲಿಸ್ಟ್ ನಲ್ಲಿ ಯಾರೆಲ್ಲಾ?

CSK, KKRಗೆ ನಾಯಕರೇ ಹೊರೆ – ಪರಾಗ್ ಗೆ ಸೂರ್ಯವಂಶಿ ಆಡಿದ್ರೆ ಸಾಕಾ?ಕ್ಯಾಪ್ಟನ್ಸಿ ಚೇಂಜ್ ಲಿಸ್ಟ್ ನಲ್ಲಿ ಯಾರೆಲ್ಲಾ?

ಲೆಕ್ಕಾಚಾರಗಳು ಉಲ್ಟಾ ಆಗ್ತಿವೆ. ಪ್ರೆಡಿಕ್ಷನ್​ಗಳು ರಾಂಗ್ ಅನ್ನಿಸ್ತಿವೆ. ಯಾಕಂದ್ರೆ 2026ರ ಐಪಿಎಲ್ ಪಂದ್ಯಗಳಲ್ಲಿ ನಿರೀಕ್ಷೆಗೂ ಮೀರಿದ ರಿಸಲ್ಟ್​ ಬರ್ತಿದೆ. ಸೂಪರ್ ಸ್ಟಾರ್ಸ್ ಎನಿಸಿಕೊಂಡವ್ರು ಮುಗ್ಗರಿಸುತ್ತಿದ್ರೆ ಯಂಗ್​ಸ್ಟರ್ಸ್ ಬಿರುಗಾಳಿ ಎಬ್ಬಿಸಿದ್ದಾರೆ. ಹೀಗಿದ್ರೂ ಈ ಸೀಸನ್​ನಲ್ಲಿ ಒಂದಷ್ಟು ತಂಡಗಳಿಗೆ ಕ್ಯಾಪ್ಟನ್​ಗಳೇ ಹೊರೆಯಾಗಿದ್ದಾರೆ. ತಾವೂ ಆಡ್ತಿಲ್ಲ.. ಡಿಸಿಷನ್ಸ್ ಮೇಕಿಂಗ್​ನಲ್ಲೂ ಎಫೆಕ್ಟೀವ್ ಇಲ್ಲ.

ಇದನ್ನೂ ಓದಿ : ಮುಂಬೈಗೆ ವಿಜಯದ ತಿಲಕ! – GT ವಿರುದ್ದ 99 ರನ್‌ಗಳ ಭರ್ಜರಿ ಜಯ ಸಾಧಿಸಿದ MI

ಐಪಿಎಲ್​ ಅಖಾಡ ದಿನೇದಿನೇ ರಂಗೇರ್ತಿದೆ. ಆಲ್ಮೋಸ್ಟ್ ಅರ್ಧ ಲೀಗ್ ಕಂಪ್ಲೀಟ್ ಆಗೋ ಟೈಮ್​ನಲ್ಲಿದ್ದೇವೆ. ಈಗಾಗ್ಲೇ ಈ ಸೀಸನ್​ನಲ್ಲೇ ಸಾಕಷ್ಟು ಪಂದ್ಯಗಳು ಕ್ಲೋಸ್ ಗೇಮ್ ಆಗಿವೆ. ಲಾಸ್ಟ್ ಬಾಲ್​ನಲ್ಲೂ ಮ್ಯಾಚ್ ವಿನ್ನರ್ಸ್ ಡಿಸೈಡ್ ಆಗಿದ್ದಾರೆ. ಬಟ್ ಕ್ರಿಕೆಟ್​ ಅಂತಾ ಬಂದಾಗ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎಷ್ಟು ಸ್ಟ್ರಾಂಗ್ ಇದ್ದೇವೆ ಅನ್ನೋದಕ್ಕಿಂತ ಕ್ಯಾಪ್ಟನ್ ತೆಗೆದುಕೊಳ್ಳೋ ನಿರ್ಧಾರಗಳು ಇಂಪಾರ್ಟೆಂಟ್ ಆಗುತ್ತೆ. ಟಾರ್ಗೆಟ್ ಇರ್ಲಿ ಚೇಸಿಂಗ್ ಇರ್ಲಿ ನಾಯಕನ ಡಿಸಿಷನ್ಸ್ ಸೋಲು ಗೆಲುವಿಗೆ ನೇರ ಪರಿಣಾಮ ಬೀರುತ್ತೆ.

ಚೆನ್ನೈ ತಂಡದಲ್ಲಿ ಇದ್ದೂ ಇಲ್ಲದಂತಾದ ರುತುರಾಜ್ ಗಾಯಕ್ವಾಡ್!

ಐಪಿಎಲ್​ ಇತಿಹಾಸದಲ್ಲಿ ಫೈವ್ ಟೈಮ್ಸ್ ಚಾಂಪಿಯನ್ ಟೀಂ ಆಗಿರೋ ಚೆನ್ನೈ ಸೂಪರ್ ಕಿಂಗ್ಸ್ ಈ ಸಲನೂ ಡಲ್ ಅನ್ನಿಸ್ತಿದೆ. ಪಂದ್ಯಗಳ ಸೋಲು ಒಂದ್ಕಡೆಯಾದ್ರೆ ನಾಯಕನೇ ಫಾರ್ಮ್​ನಲ್ಲಿ ಇಲ್ಲದೆ ಇರೋದೇ ಫ್ರಾಂಚೈಸಿಗೆ ದೊಡ್ಡ ತಲೆ ನೋವಾಗಿದೆ. ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಅಷ್ಟೇನು ಇಂಪ್ರೆಸ್ಸಿವ್ ಆಗಿಲ್ಲ. ಮಹೇಂದ್ರ ಸಿಂಗ್ ಧೋನಿ ಬಳಿಕ ರುತುರಾಜ್​ಗೆ ನಾಯಕನ ಸ್ಥಾನ ನೀಡಲಾಗಿದೆ. ಆದ್ರೆ ಕ್ಯಾಪ್ಟನ್ ಆದ ಮೇಲೆ ರುತುರಾಜ್ ಮಂಕಾಗಿದ್ದಾರೆ. ಈ ಸೀಸನ್​ನಲ್ಲೂ ಅದೇ ಸ್ಟ್ರಗಲ್ಸ್ ಕಾಣ್ತಿದೆ. ಅವ್ರ ಬ್ಯಾಟಿಂಗ್​ನಿಂದಲೂ ವಿನ್ನಿಂಗ್ ಸ್ಕೋರ್ ಬರ್ತಿಲ್ಲ. ಆನ್ ಫೀಲ್ಡ್ ಡಿಸಿಷನ್ಸ್ ಕೂಡ ಇಂಪ್ಯಾಕ್ಟ್ ಮಾಡ್ತಿಲ್ಲ.

ಇಂಪ್ಯಾಕ್ಟ್ ಮಾಡ್ತಿಲ್ಲ ರುತುರಾಜ್!

ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ ಎಕಾನಮಿ ರೇಟ್ 8.5ಕ್ಕಿಂತ ಕಡಿಮೆ

ರುತುರಾಜ್ ಕೇವಲ 19 ರನ್, 6 ಇನ್ನಿಂಗ್ಸ್ ​ಗಳಲ್ಲಿ ಕೇವಲ 82 ರನ್

28 ರನ್ ಗಳಿಸಿರೋದೇ ಹೈಯೆಸ್ಟ್ ಸ್ಕೋರ್, 112.33 ಸ್ಟ್ರೈಕ್ ರೇಟ್

ಒಂದು ಸಿಕ್ಸ್, ಮೂರು ಫೋರ್, ತಂಡವನ್ನೂ ಸಮರ್ಥವಾಗಿ ನಿಭಾಯಿಸ್ತಿಲ್ಲ

6 ಪಂದ್ಯಗಳ ಪೈಕಿ 4ರಲ್ಲಿ ಸೋಲು ಕಂಡಿದ್ರೆ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ

ರುತುರಾಜ್ ಗಾಯಕ್ವಾಡ್​ಗೆ ಇನ್​ಎಕ್ಸ್​ಪೀರಿಯನ್ಸ್ ಜೊತೆಗೆ ಧೋನಿ ಆಬ್ಸೆನ್ಸ್ ಕೂಡ ಕಾಡ್ತಿದೆ. ಹೀಗಾಗಿ ಸಂಜು ಸ್ಯಾಮ್ಸನ್​ಗೆ ಕ್ಯಾಪ್ಟನ್ಸಿ ನೀಡಿ ಅನ್ನೋ ಕೂಗು ಎದ್ದಿದೆ. ಆರ್.ಅಶ್ವಿನ್ ಸೇರಿದಂತೆ ಮಾಜಿ ಕ್ರಿಕೆಟಿಗರು ಇದೇ ಸಜೇಷನ್ಸ್ ಕೊಟ್ಟಿದ್ದಾರೆ. ಯಾಕಂದ್ರೆ ರುತುರಾಜ್​ಗಿಂತ ಸಂಜು ಕೇಪೆಬಲ್ ಇದ್ದಾರೆ. ಯಾವಾಗ್ಲೂ ನಾಯಕತ್ವ ಕೊಡೋ ಬದ್ಲು ಈಗ್ಲೇ ಕೊಡಿ ಅಂತಿದ್ದಾರೆ.

ಕೆಕೆಆರ್ ನಲ್ಲೂ ಅಜಿಂಕ್ಯ ರಹಾನೆ ಸೈಲೆಂಟ್ ಗೇಮ್!

ಇನ್ನು 2024ರ ಚಾಂಪಿಯನ್ ಕೆಕೆಆರ್ ತಂಡ ಕೂಡ ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ಕಂಪ್ಲೀಟ್ ಹಳ್ಳ ಹಿಡಿದಿದೆ. ಈ ಸೀಸನ್​ನಲ್ಲಿ ಮೊದಲ ಗೆಲುವು ದಾಖಲಿಸೋಕೆ 7 ಮ್ಯಾಚ್​ಗಳೇ ಬೇಕಾಯ್ತು. ಌಂಡ್ ಬ್ಯಾಟಿಂಗ್​ನಲ್ಲಿ ಬ್ಯಾಕ್ ಟು ಬ್ಯಾಕ್ ಡಕ್ ಔಟ್ ಆಗಿರೋ ರಹಾನೆ ನಾಯಕತ್ವ ನಿಭಾಯಿಸುವಲ್ಲಿಯೂ ಫೇಲ್ಯೂರ್ ಆಗ್ತಿದ್ದಾರೆ.

ರಹಾನೆ ಕ್ಯಾಪ್ಟನ್ಸಿ ಮಂಕು!

ಓಪನರ್ ಆಗಿ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಲ ಡಕ್ ಔಟ್

12 ಬಾರಿ ಓಪನರ್ ಆಗಿ ಡಕ್ ಔಟ್ ಆಗಿ ಅನ್ ​ವಾಂಟೆಂಡ್ ದಾಖಲೆ

ಕೆಕೆಆರ್ ಪರ 7 ಇನ್ನಿಂಗ್ಸ್​ಗಳಲ್ಲಿ 152 ರನ್ಸ್, 25ಪ್ಲಸ್ ಆವರೇಜ್

ಡಿಸಿಷನ್ ಮೇಕಿಂಗ್ ​ನಲ್ಲೂ ಫೇಲ್ಯೂರ್, ಕೆಕೆಆರ್ ತಂಡ ಸ್ಟ್ರಗಲ್

ಹೀಗೆ ರಹಾನೆ ನಾಯಕತ್ವದಲ್ಲಿ ಅಷ್ಟಕ್ಕಷ್ಟೇ ಇದೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಅಂದ್​ರೆ ಕೆಕೆಆರ್​ನಲ್ಲಿ ಸ್ಟ್ಯಾಂಡಿಂಗ್ ಕ್ಯಾಪ್ಟನ್ ಆಪ್ಶನ್ಸ್ ಕೂಡ ಇಲ್ಲ. ರಿಂಕುಗೆ ಕೊಟ್ರೂ ಕೂಡ ಇನ್ ಎಕ್ಸ್​ಪೀರಿಯನ್ಸ್ ಹೊಡೆತ ಕೊಡ್ಬೋದು.

ವೈಭವ್ ಮತ್ತು ಜೈಸ್ವಾಲ್ ನೇ ನಂಬಿ ಕೂತ ಪರಾಗ್!

ಇನ್ನು ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಕಥೆಯೂ ಭಿನ್ನವಾಗಿಲ್ಲ. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್​ನಿಂದಾಗಿ ರಾಜಸ್ಥಾನ ರಾಯಲ್ಸ್ ಡೇಂಜರಸ್ ಆಗಿ ಕಾಣ್ತಿದೆಯಾದ್ರೂ ನಾಯಕನಾಗಿ ರಿಯಾನ್ ಪರಾಗ್ ಇಂಪ್ಯಾಕ್ಟ್ ಮಾಡ್ತಿಲ್ಲ. ಡಿಸಿಷನ್ಸ್ ಮೇಕಿಂಗ್ ಎಫೆಕ್ಟಿವ್ ಆಗಿಲ್ಲ. ಜೊತೆಗೆ ಬ್ಯಾಟಿಂಗ್​ನಲ್ಲಂತೂ ನಂಬಿಕೆನೇ ಇಡುವಂತಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರಲ್ಲ ಹಂಗಾಗಿದೆ ಪರಾಗ್ ಪರಿಸ್ಥಿತಿ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಪರಾಗ್!

6 ಪಂದ್ಯಗಳನ್ನ ಆಡಿರೋ ಪರಾಗ್ ಕೇವಲ 61 ರನ್ ಗಳಿಸಿದ್ದಾರೆ

ಚೆನ್ನೈ ವಿರುದ್ಧ 14, ಜಿಟಿ ವಿರುದ್ಧ 8, ಆರ್ ಸಿಬಿ ವಿರುದ್ಧ 3, ಹೈದ್ರಾಬಾದ್ ವಿರುದ್ಧ 4

ಹಾಗೇ ಕೆಕೆಆರ್ ವಿರುದ್ಧ 12 ರನ್ಸ್ ಅಷ್ಟೇ ಕಲೆ ಹಾಕಿದ್ದಾರೆ ರಿಯಾನ್ ಪರಾಗ್

ರವೀಂದ್ರ ಜಡೇಜಾರನ್ನ ಕಂಪ್ಲೀಟ್ ಇಗ್ನೋರ್ ಮಾಡ್ತಿರೋದು ಗೊತ್ತಾಗ್ತಿದೆ

ಕೆಕೆಆರ್ ವಿರುದ್ಧ ಕೂಡ ಜಡ್ಡುಗೆ ಬೌಲಿಂಗ್ ​ಗೆ ಅವಕಾಶ ಇದ್ರೂ ಕೊಡದೆ ಸೋಲು

ಹೀಗೆ ರಿಯಾನ್ ಪರಾಗ್ ತಾವು ಬ್ಯಾಟಿಂಗ್​ನಲ್ಲಿ ಇಂಪ್ರೆಸ್ ಮಾಡದೇ ಇದ್ರೂ ಅವ್ರು ತೆಗೆದುಕೊಳ್ಳೋ ಕೆಲ ನಿರ್ಧಾರಗಳೂ ಸೋಲಿಗೆ ಕಾರಣ ಆಗ್ತಿದೆ. ರಾಜಸ್ಥಾನ ತಂಡದಲ್ಲಿ ಜೈಸ್ವಾಲ್ ಮತ್ತು ಸೂರ್ಯವಂಶಿ ಇದ್ರೆ ಮಾತ್ರನೇ ಅವ್ರು ಗೆಲ್ಲೋದು. ಅವ್ರೇನಾದ್ರೂ ಬೇಗ ವಿಕೆಟ್ ಒಪ್ಪಿಸಿದ್ರೆ ನೆಕ್ಸ್​ಟ್ ಬ್ಯಾಟಿಂಗ್ ಲೈನಪ್ ಕಂಪ್ಲೀಟ್ ಹಲ್ಳ ಹಿಡಿದಿರೋದು ಗೊತ್ತಾಗ್ತಿದೆ.

ಕ್ಯಾಪ್ಟನ್ಸಿಗೂ ಸೈ.. ಬ್ಯಾಟಿಂಗ್ ಗೂ ಜೈ ಶ್ರೇಯಸ್ ಮತ್ತು ಪಾಟಿದಾರ್!

ಇನ್ನು ಈ ಸೀಸನ್​ನಲ್ಲಿ ಕ್ಯಾಪ್ಟನ್ಸಿ ಜೊತೆ ಇಂಡಿವಿಶ್ಯುಯಲ್ ಪರ್ಫಾಮೆನ್ಸ್​ನಲ್ಲೂ ಸದ್ದು ಮಾಡ್ತಿರೋದು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್. ಪಂಜಾಬ್ ಕ್ಯಾಪ್ಟನ್ ಆಗಿ ಈ ಸೀಸನ್​ನಲ್ಲಿ 6 ಪಂದ್ಯಗಳನ್ನ ಆಡಿರೋ ಶ್ರೇಯಸ್ ಅಯ್ಯರ್ ಒಂದು ಪಂದ್ಯ ಮಳೆಗೆ ರದ್ದಾಗಿದ್ದ ಉಳಿದ ಐದೂ ಪಂದ್ಯಗಳಲ್ಲೂ ವಿನ್ ಆಗಿದ್ದಾರೆ. 11 ಅಂಕಗಳೊಂಡದಿಗೆ ತಂಡ ನಂಬರ್ 1 ಸ್ಥಾನದಲ್ಲಿದೆ. ಹಾಗೇ ಬ್ಯಾಟಿಂಗ್ ವೈಸ್ ನೋಡೋದಾದ್ರೆ 6 ಪಂದ್ಯಗಳಲ್ಲಿ 208 ರನ್ಸ್ ಕಲೆ ಹಾಕಿದ್ದಾರೆ. ಅದೂ ಕೂಡ 182.46ರ ಸ್ಟ್ರೈಕ್​ರೇಟ್​ನಲ್ಲಿ. ಇನ್ನು ರಜತ್ ಪಾಟಿದಾರ್ 6 ಪಂದ್ಯಗಳಿಂದ 230 ರನ್ಸ್ ಕಲೆ ಹಾಕಿದ್ದಾರೆ. ಆರೆಂಜ್ ಕ್ಯಾಪ್ ರೇಸಲ್ಲಿ ಟಾಪ್ -5ನಲ್ಲಿ ಸ್ಥಾನ ಪಡೆದಿದ್ದಾರೆ. 212.96ರ ಸ್ಟ್ರೈಕ್​ರೇಟ್​ನಲ್ಲಿ ಅಬ್ಬಿರಿಸಿರೋ ಪಾಟಿದಾರ್ 12 ಫೋರ್ 22 ಸಿಕ್ಸಸ್ ಸಿಡಿಸಿದ್ದಾರೆ. ಹೀಗೆ ಶ್ರೇಯಸ್ ಮತ್ತು ಪಾಟಿದಾರ್ ಕ್ಯಾಪ್ಟನ್ಸಿ ಜೊತೆಗೆ ಆಟದಲ್ಲೂ ಮುಂದಿದ್ದಾರೆ. ಇನ್ನು ಹೈದ್ರಾಬಾದ್ ತಂಡದ ಹಂಗಾಮಿ ನಾಯಕನಾಗಿ ಇಶಾನ್ ಕಿಶನ್ ಕೂಡ ಬೆಸ್ಟ್ ಪರ್ಫಾಮೆನ್ಸ್ ತೋರಿಸಿದ್ದಾರೆ. ಈ ಸೀಸನ್​ನಲ್ಲಿ 6 ಪಂದ್ಯಗಳಿಂದ 213 ರನ್ಸ್ ಸ್ಕೋರ್ ಮಾಡಿದ್ದಾರೆ. ರಾಜಸ್ತಾನ ವಿರುದ್ಧದ ಮ್ಯಾಚಲ್ಲಿ 91 ರನ್ಸ್ ಗಳಿಸಿದ್ರು. ಗುಜರಾತ್ ಕ್ಯಾಪ್ಟನ್ ಶುಭ್​ಮನ್ ಗಿಲ್ ಕೂಡ ಉತ್ತಮವಾಗಿ ಪರ್ಫಾಮ್ ಮಾಡಿದ್ದಾರೆ. ಉಳಿದಂತೆ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಲಕ್ನೋ ಕ್ಯಾಪ್ಟನ್ ರಿಷಭ್ ಪಂತ್, ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್ ಸಾಕಷ್ಟು ಅಪ್ಸ್ ಌಂಡ್ ಡೌನ್ಸ್ ನೋಡ್ತಿದ್ದಾರೆ. ಜೊತೆಗೆ ಪರ್ಫಾಮೆನ್ಸ್​ನಲ್ಲೂ ಸ್ಟ್ರಗಲ್ಸ್, ಕಂ ಬ್ಯಾಕ್ ಅಂತಾ ವೇರಿಯೇಷನ್ಸ್ ಇದೆ. ಒಟ್ನಲ್ಲಿ ಐಪಿಎಲ್​ನಲ್ಲಿ ಆಲ್ರೆಡಿ ಪ್ಲೇಆಫ್ ಲೆಕ್ಕಾಚಾರಗಳು ಸ್ಟಾರ್ಟ್ ಆಗ್ತಿದ್ರೆ ಮತ್ತೊಂದೆಡೆ ಕೆಲ ಫ್ರಾಂಚೈಸಿಗಳಿಗೇ ನಾಯಕರೇ ಹೊರೆಯಾಗಿದ್ದು ವಿಪರ್ಯಾಸ.

Shantha Kumari