ಆದಿ ಮನೆಯಲ್ಲಿ ಭಾಗ್ಯಗೆ ಟಾರ್ಚರ್..‌ 2ನೇ ಮದ್ವೆಯಲ್ಲೂ ನರಕ ದರ್ಶನ! – ಕುಸುಮಾ ಸೊಸೆಗೆ ಇದೆಲ್ಲಾ ಬೇಕಿತ್ತಾ?

ಆದಿ ಮನೆಯಲ್ಲಿ ಭಾಗ್ಯಗೆ ಟಾರ್ಚರ್..‌ 2ನೇ ಮದ್ವೆಯಲ್ಲೂ ನರಕ ದರ್ಶನ! – ಕುಸುಮಾ ಸೊಸೆಗೆ ಇದೆಲ್ಲಾ ಬೇಕಿತ್ತಾ?

ತಾಂಡವ್‌ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಬಂದ ಭಾಗ್ಯ ಈಗ ಆದಿನಾ ಮದುವೆಯಾಗಿದ್ದಾಳೆ. 2ನೇ ಮದ್ವೆಯಾದ್ಮೇಲಾದ್ರೂ ಭಾಗ್ಯ ಜೀವನ ಚೆನ್ನಾಗಿರುತ್ತೆ.. ಸಂತೋಷವಾಗಿರುತ್ತೆ ಅಂತ ಅಂದ್ಕೊಂಡಿದ್ಲು.. ಆದ್ರೆ ಆದಿ ಮನೆಗೆ ಕಾಲಿಡ್ತಿದ್ದಂತೆ ಆಕೆಗೆ ನರಕ ದರ್ಶನವಾಗಿದೆ. ಇದೀಗ ಭಾಗ್ಯಗೆ ಮತ್ತೆ ಕಣ್ಣೀರೇ ಗತಿಯಾಗಿದೆ. ಇದೀಗ ರೂಮ್‌ನಲ್ಲಿ ಕುಳಿತು ಕುಸುಮಾ ಸೊಸೆ ಕಣ್ಣೀರು ಹಾಕಿದ್ದಾಳೆ. ಮತ್ತೊಂದ್ಕಡೆ ಭಾಗ್ಯ ಮಕ್ಕಳು ಕೂಡ ಆಕೆಯಿಂದ ದೂರ ಆಗ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಇದನ್ನೂ ಓದಿ:  ರಾಜ್ಯ ಸರ್ಕಾರಕ್ಕೆ ಮತ್ತೆ ಶಾಕ್!‌ – SSLC ತೃತೀಯ ಭಾಷೆಗೆ ಗ್ರೇಡ್‌ ಬೇಡ.. ಅಂಕವನ್ನೇ ನೀಡಿ ಎಂದು ಹೈಕೋರ್ಟ್ ಆದೇಶ!

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಈಗ ಆದಿಯನ್ನ ಮದುವೆಯಾಗಿದ್ದು, ಹೊಸ ಜೀವನ ಶುರುಮಾಡಿದ್ದಾಳೆ. ಇದೀಗ ಭಾಗ್ಯ  ಕುಸುಮಾ ಮನೆಯಿಂದ ಆದಿ ಮನೆಗೆ ಬಂದಿದ್ದಾಳೆ. ಆದಿಯನ್ನ ಮದುವೆಯಾದ ಭಾಗ್ಯ ಇನ್ನಾದ್ರೂ ಖುಷಿಯಿಂದ ಜೀವನ ಮಾಡ್ತಾಳೆ ಅಂತ ವೀಕ್ಷಕರು ಕೂಡ ಅಂದ್ಕೊಂಡಿದ್ರು. ಆದ್ರೆ ವೀಕ್ಷಕರ ಊಹೆ ತಪ್ಪಾಗಿದೆ. ಭಾಗ್ಯ ಆದಿ ಮನೆಗೆ ಕಾಲಿಡ್ತಿದ್ದಂತೆ ನರಕ ದರ್ಶನವಾಗಿದೆ.

ಎಲ್ಲಾ ಸವಾಲುಗಳನ್ನ ಫೇಸ್‌ ಮಾಡಿ ಭಾಗ್ಯ ಈಗ ಆದಿಯನ್ನ ಮದುವೆಯಾಗಿ ಕಾಮತ್‌ ಕುಟುಂಬಕ್ಕೆ ಸೇರಿಕೊಂಡಿದ್ದಾಳೆ. ಆದ್ರೆ ಕಾಮತ್‌ ಮನೆಯಲ್ಲೂ ಭಾಗ್ಯ ನೆಮ್ಮದಿಯಾಗಿಲ್ಲ.. ಇಲ್ಲೂ ಕೂಡ ಆಕೆಗೆ ಟಾರ್ಚರ್‌ ಶುರುವಾಗಿದೆ. ಯಾಕಂದ್ರೆ ಗಂಡ ಒಳ್ಳೆಯವನಾಗಿದ್ರೆ ಸಾಲದು.. ಗಂಡನ ಮನೆಯಲ್ಲಿರುವವರು ಕೂಡ ಒಳ್ಳೆಯವರಾಗಿ ಇರಬೇಕಲ್ವಾ? ಭಾಗ್ಯ ವಿಚಾರದಲ್ಲೂ ಹೀಗೆ ಆಗಿದೆ. ಇದೀಗ ಕನ್ನಿಕಾ ಹಾಗೂ ಆಕೆಯ ಅತ್ತೆ ತಮ್ಮ ವರಸೆ ಶುರುಮಾಡಿದ್ದಾರೆ. ಭಾಗ್ಯ ವಿರುದ್ದ ಒಂದೊಂದೇ ಕುತಂತ್ರ ಮಾಡ್ತಿದ್ದಾರೆ. ಇದೀಗ ಭಾಗ್ಯಳ ಗೋಳಿನ 2.0 ಈಗ ಆರಂಭವಾಗಿದೆ.

ಹೌದು.. ಭಾಗ್ಯಗೆ ಮನೆಗೆ ಬರ್ತಿದ್ದಂತೆ ಕನ್ನಿಕಾ ಅವರ ಫ್ರೆಂಡ್ಸ್‌ ಕರೆಸಿ ಅವಮಾನ ಮಾಡಿಸಿದ್ಲು. ಈ ವೇಳೆ ಆದಿ ಭಾಗ್ಯ ಪರ ವಹಿಸಿದ. ಅವರಿಗೆ ಸರಿಯಾಗೆ ಕ್ಲಾಸ್‌ ತೆಗೆದುಕೊಂಡ. ಅದಾದ ಬಳಿಕ ಮೀನಾಕ್ಷಿ ಭಾಗ್ಯ ಬಳಿ ನೀನು ಹಳೆಯದ್ದನ್ನೆಲ್ಲಾ ಮರಿಬೇಕು.. ಮಕ್ಕಳ ಜೊತೆಗೂ ಕೂಡ ಇನ್ಮುಂದೆ ಇರ್ಬಾರ್ದು. ಇನ್ನೇನಿದ್ರು ಆದಿ ಜೊತೆ ಮಾತ್ರ ನೀನು ಇರ್ಬೇಕು. ಮಕ್ಕಳ ಸುದ್ದಿಗೆ ಹೋಗಲ್ಲ ಅಂತ ಮಾತು ಕೊಡು ಅಂತ ಹೇಳಿದ್ರು. ಭಾಗ್ಯ ಕೂಡ ಮೀನಾಕ್ಷಿಗೆ ಮಾತು ಕೊಟ್ಟಿದ್ಲು. ಆದ್ರೆ ಆದಿಗೆ ಈ ವಿಚಾರ ಗೊತ್ತಾಗಿದೆ. ಆದಿ ಮಕ್ಕಳ ಬಳಿ ಕರೆದುಕೊಂಡು ಹೋಗಿದ್ದಾನೆ. ಅದಾದ ಬಳಿಕ ಆದಿ ತಂದೆ ಭಾಗ್ಯಗೆ ಹೊಸ ಸೀರೆ ಕೊಟ್ಟಿದ್ರು. ಪೂಜೆಗೆ ಆ ಸೀರೆಯನ್ನೇ ಉಡಬೇಕು ಅಂತ ಹೇಳಿದ್ದರು. ಆದ್ರೆ ಕನ್ನಿಕಾ ಅದ್ರ ಮೇಲೆ ಬೇಕಂತ್ಲೇ ಜ್ಯೂಸ್‌ ಚೆಲ್ಲಿ ಸೀರೆ ಹಾಳಾಗುವಂತೆ ಮಾಡಿದ್ಲು. ಇದ್ರಿಂದಾಗಿ ಭಾಗ್ಯ ಬೇಜಾರು ಮಾಡಿಕೊಂಡಿದ್ಲು. ಅಷ್ಟೊತ್ತಿಗೆ ಪೂಜಾ ಆ ಸೀರೆಯನ್ನ ಡ್ರೈ ಕ್ಲೀನ್‌ಗೆ ಕೊಟ್ಟು ರೆಡಿ ಮಾಡಿಸಿದ್ಲು. ಆದ್ರೆ ಭಾಗ್ಯ ಪೂಜೆಗೆ ರೆಡಿಯಾಗಲು ಹೊರಟಾಗ ಮತ್ತೆ ಶಾಕ್‌ ಎದುರಾಗಿದೆ. ಚೆನ್ನಾಗಿದ್ದ ಸೀರೆಯನ್ನ ಯಾರೋ ಹಾಳು ಮಾಡಿದ್ದಾರೆ. ಸೀರೆಯಲ್ಲಿ ದೊಡ್ಡ ಹೋಲ್‌ ಮಾಡಿ ಇಟ್ಟಿದ್ದಾರೆ. ಇದನ್ನ ನೋಡಿ ಭಾಗ್ಯ ಕಣ್ಣೀರು ಹಾಕಿದ್ದಾಳೆ. ಇದು ಕನ್ನಿಕಾ ಹಾಗೂ ಮೀನಾಕ್ಷಿಯದ್ದೇ ಕಿತಾಪತಿ ಆಗಿರರುತ್ತೆ. ಭಾಗ್ಯ ಪೂಜೆಗೆ ಕೂರಬಾರದು ಎಂದು ಹೀಗೆ ಮಾಡಿರ್ತಾರೆ. ಇದೀಗ ಆದಿಯನ್ನ ಮದುವೆಯಾದ ಭಾಗ್ಯಗೆ ಹೊಸ ಹೊಸ ಸವಾಲು ಎದುರಾಗಲಿದೆ. ಆದಿ ಭಾಗ್ಯರನ್ನ ದೂರ ಮಾಡ್ಬೇಕು ಅಂತ ಕನ್ನಿಕಾ ಹಾಗೂ ಮೀನಾಕ್ಷಿ ಬೇರೆ ಏನಾದ್ರೂ ಕಿತಾಪತಿ ಮಾಡೋದು ಫಿಕ್ಸ್‌ ಆಗಿದೆ. ಇನ್ನೊಂದೆಡೆ, ತಾಂಡವ್​ ಕೂಡ ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯ್ತಿದ್ದು, ಆತನಿಗೆ ಕನ್ನಿಕಾ ಸಾಥ್​ ಕೊಡೋ ಸಾಧ್ಯತೆ ಇದೆ.

ಇದೀಗ ಈ ಸೀರಿಯಲ್‌ ವಿರುದ್ದ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ.   ಭಾಗ್ಯ ಒಂದು ಕಡೆ ಹಿಂಸೆ ಪಟ್ಟಿದ್ದು ಸಾಲದು ಎನ್ನುವಂತೆ ಇದೀಗ ಮತ್ತೊಂದು ಮನೆಯಲ್ಲಿಯೂ ನರಕ ಶುರುವಾಗಿದೆ. ಮತ್ತೊಂದಿಷ್ಟು ವರ್ಷ ಈಕೆಯ ಇನ್ನೊಂದು ಗೋಳಾಟ ನೋಡಬೇಕಾ? ಭಾಗ್ಯ ಗೋಳಾಟ ನೋಡೋದಿಕ್ಕೆ ನಮಗೆ ಆಗ್ತಿಲ್ಲ. ಸೀರಿಯಲ್‌ ಆದಷ್ಟು ಬೇಕಾ ಮುಗಿಸಿ ಅಂತ ಕಮೆಂಟ್‌ ಮಾಡ್ತಿದ್ದಾರೆ.

Shwetha M