ದಳಪತಿ ವಿಜಯ್‌ಗೆ ಮತ್ತೊಂದು ಸಂಕಷ್ಟ! – ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ..  ನಾಮಪತ್ರ ತಿರಸ್ಕಾರವಾಗುತ್ತಾ?

ದಳಪತಿ ವಿಜಯ್‌ಗೆ ಮತ್ತೊಂದು ಸಂಕಷ್ಟ! – ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ..  ನಾಮಪತ್ರ ತಿರಸ್ಕಾರವಾಗುತ್ತಾ?

ನಟ ದಳಪತಿ ವಿಜಯ್‌ಗೆ ಅದ್ಯಾಕೋ ಟೈಮೇ ಸರಿಯಿಲ್ಲ. ವೈಯಕ್ತಿಕ ಜೀವನ, ಸಿನಿಮಾ ಕ್ಷೇತ್ರ ಮಾತ್ರವಲ್ಲ ಈಗ ರಾಜಕೀಯ ಕ್ಷೇತ್ರದಲ್ಲೂ ಹಿನ್ನಡೆಯಾಗುತ್ತಿದೆ. ತಮಿಳುನಾಡು ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗುತ್ತಿದ್ದಂತೆ  ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್‌ಗೆ ತಮ್ಮ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: ಮುಂಬೈಗೆ ವಿಜಯದ ತಿಲಕ! – GT ವಿರುದ್ದ 99 ರನ್‌ಗಳ ಭರ್ಜರಿ ಜಯ ಸಾಧಿಸಿದ MI

ರಾಜಕೀಯಕ್ಕೆ ಧುಮುಕಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟ ದಳಪತಿ ವಿಜಯ್‌ಗೆ ಈಗ ಸಂಕಷ್ಟ ಎದುರಾಗಿದೆ. ವಿಜಯ್ ಅವರು ಪೆರಂಬೂರ್ ಮತ್ತು ತಿರುಚ್ಚಿ ಪೂರ್ವದಲ್ಲಿ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಸುಮಾರು 105 ಕೋಟಿ ರೂಪಾಯಿಗಳ ವ್ಯತ್ಯಾಸ ಇರುವುದನ್ನುಮದ್ರಾಸ್‌ ಹೈಕೋರ್ಟ್‌ ಅಕ್ರಮ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಅಫಿಡವಿಟ್‌ನಲ್ಲಿನಲ್ಲಿರುವ ವ್ಯತ್ಯಾಸ ಮತ್ತು ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ವಿಜಯ್‌ ಮರೆಮಾಚಿರುವ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ಇದೀಗ ಹೈಕೋರ್ಟ್‌ ಆಸ್ತಿ ವಿವರಗಳಲ್ಲಿನ ಭಾರಿ ವ್ಯತ್ಯಾಸದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗಕ್ಕೆ ಸೂಚಿಸಿದೆ. ಇದು ಕೇವಲ ಆರಂಭಿಕ ಹಂತದ ವಿಚಾರಣೆಯಾಗಿದ್ದು ನ್ಯಾಯಾಲಯವು ಯಾವುದೇ ಆದೇಶವನ್ನು ಪ್ರಕಟಿಸಿಲ್ಲ. ನೋಟಿಸ್‌ಗೆ ಸಂಬಂಧಪಟ್ಟವರು ನೀಡುವ ಉತ್ತರವನ್ನು ಆಧರಿಸಿ ಮುಂದಿನ ವಿಚಾರಣೆ ನಡೆಯಲಿದೆ.

ಏನಿದು ಪ್ರಕರಣ?

ಎರಡು ಕ್ಷೇತ್ರಗಳಲ್ಲಿ ಸಲ್ಲಿಸಿರುವ ವಿಜಯ್ ಅವರ ಅಫಿಡವಿಟ್‌ಗಳಲ್ಲಿ ಅವರ ಆದಾಯದಲ್ಲಿ ಹೊಂದಾಣಿಕೆಯಿಲ್ಲ. ತಿರುಚ್ಚಿ ಸ್ಥಾನಕ್ಕೆ ವಿಜಯ್ ಸಲ್ಲಿಸಿದ ದಾಖಲೆಗಳು 220 ಕೋಟಿ ರೂ. ಆದಾಯವನ್ನು ತೋರಿಸಿದರೆ, ಪೆರಂಬೂರು ಅಫಿಡವಿಟ್‌ನಲ್ಲಿ 115 ಕೋಟಿ ರೂ.ಗಳಷ್ಟು ತೋರಿಸಿದ್ದು, 105 ಕೋಟಿ ರೂ.ಗಳ ವ್ಯತ್ಯಾಸವಿದೆ ಎಂದು ಪೆರಂಬೂರಿನ ಮತದಾರರೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.  ಈ ಹಿಂದೆ 2015-16ರ ಅವಧಿಯ ಆದಾಯ ತೆರಿಗೆ ಬಾಕಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರವರಿ 2026ರಲ್ಲಿ ಹೈಕೋರ್ಟ್ ವಜಾಗೊಳಿಸಿತ್ತು.

Shwetha M