T-20Iನಲ್ಲಿ ಸೂರ್ಯ ಮುಳುಗೋ ಟೈಂ – 4ನೇ ಸ್ಲಾಟ್.. ಶ್ರೇಯಸ್ ಗೆ ಪಟ್ಟಾಭಿಷೇಕ
ಸೂರ್ಯವಂಶಿ ಬಂದ್ರೆ ಯಾರಿಗೆ ಗೇಟ್ ಪಾಸ್?

T-20Iನಲ್ಲಿ ಸೂರ್ಯ ಮುಳುಗೋ ಟೈಂ – 4ನೇ ಸ್ಲಾಟ್.. ಶ್ರೇಯಸ್ ಗೆ ಪಟ್ಟಾಭಿಷೇಕಸೂರ್ಯವಂಶಿ ಬಂದ್ರೆ ಯಾರಿಗೆ ಗೇಟ್ ಪಾಸ್?

ಐಪಿಎಲ್​ನ ಹೈವೋಲ್ಟೇಜ್ ಮ್ಯಾಚ್​ಗಳ ನಡುವೆ ಟಿ-20ಐ ಕ್ಯಾಪ್ಟನ್ಸಿ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ನಾಯಕನ ಸ್ಥಾನದಿಂದ ಸೂರ್ಯಕುಮಾರ್ ಯಾದವ್​ಗೆ ಗೇಟ್​ಪಾಸ್ ಕೊಡೋದು ಆಲ್ಮೋಸ್ಟ್ ಪಕ್ಕಾ ಆಗಿದೆ. ಬಿಸಿಸಿಐ ವಯಲದಲ್ಲಿ ಈ ಬಗ್ಗೆ ದೊಡ್ಡಮಟ್ಟದ ಸರ್ಜರಿ ಆಗ್ತಿದ್ದು ಮುಂದಿನ ನಾಯಕ ಯಾರು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ಇದನ್ನೂ ಓದಿ : ಕೋಲ್ಕತ್ತಾ ಪ್ಲೇ ಆಫ್ ಕನಸು ಭಗ್ನ!? – RR ವಿರುದ್ಧ ಕೊಚ್ಚಿ ಹೋಗುತ್ತಾ KKR?

2024- 2026.. ಬ್ಯಾಕ್ ಟು ಬ್ಯಾಕ್ ಟಿ20ಐ ವಿಶ್ವಕಪ್ ಚಾಂಪಿಯನ್ಸ್.. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಟ್ರೋಫಿ ಗೆದ್ದ ಭಾರತ ಈ ವರ್ಷ ಸೂರ್ಯಕುಮಾರ್ ನಾಯಕತ್ವದಲ್ಲಿ ಮತ್ತೆ ಕಪ್ ಎತ್ತಿ ಹಿಡಿದಿದೆ. ಈಗ ಮುಂದಿನ ವಿಶ್ವಕಪ್​ಗೆ ಹೊಸ ಕ್ಯಾಪ್ಟನ್​ನಡಿ ಹೋಗೋದು ಬಹುತೇಕ ಪಕ್ಕಾ ಆಗಿದೆ. ಅಂದ್ರೆ ಈಗ ಭಾರತ ಟಿ-20ಐ ತಂಡದ ನಾಯಕತ್ವ ಬದಲಾಗೋ ಟೈಂ ಬಂದಂತಿದೆ. ಸೂರ್ಯ ಮುಳುಗೋ ಹೊತ್ತಾಗಿದ್ದು ನಾಯಕನಾಗಿ ಶ್ರೇಯಸ್ ಅಯ್ಯರ್ ಉದಯವಾಗೋ ಸಮಯ ಹತ್ತಿರವಾಗಿದೆ.

ಭಾರತ ಟಿ-20ಐ ತಂಡಕ್ಕೆ ಶ್ರೇಯಸ್ ಅಯ್ಯರ್ ಮುಂದಿನ ಕ್ಯಾಪ್ಟನ್?

ಭಾರತ ತಂಡದಲ್ಲಿ ಸದ್ಯ ಸಾಕಷ್ಟು ಟ್ಯಾಲೆಂಟೆಡ್ ಪ್ಲೇಯರ್ಸ್ ಇದ್ದಾರೆ. ಐಪಿಎಲ್​ನಲ್ಲಿ ಸಾಕಷ್ಟು ಯಂಗ್ ಪ್ಲೇಯರ್ಸ್ ಅಬ್ಬರಿಸ್ತಿದ್ದಾರೆ. ಆದ್ರೆ ಭಾರತದ ಪರ ಪ್ರದರ್ಶನ ನೀಡಲು ಎಲ್ಲರಿಗೂ ಸಾಧ್ಯವಿಲ್ಲ. ಸ್ಟಾರ್ ಆಟಗಾರರಿಗೆ ಮಾತ್ರವಲ್ಲದೆ ದೇಶೀಯ ಮತ್ತು ಐಪಿಎಲ್‌ ನಲ್ಲಿ ಸದ್ದು ಮಾಡುವಂಥ ಪ್ಲೇಯರ್​ಗಳಿಗೆ ಅವಕಾಶ ನೀಡೋದೇ ಬಿಸಿಸಿಐಗೆ ಇರೋ ಅತಿದೊಡ್ಡ ಸವಾಲು. ಹೀಗಾಗಿ ಬಿಸಿಸಿಐ ಹೊಸ ಪ್ಲ್ಯಾನ್ ಮಾಡಿದೆ. ಅಂದ್ರೆ ಅಟ್​ ಎ ಟೈಂ ಎರಡು ಟಿ-20ಐ ತಂಡಗಳನ್ನ ಫಾರ್ಮ್ ಮಾಡೋ ಪ್ಲ್ಯಾನ್​ನಲ್ಲಿದೆ. ಕನಿಷ್ಠ 30 ರಿಂದ 35 ಆಟಗಾರರ ಪಟ್ಟಿಯನ್ನು ರೆಡಿ ಮಾಡಿ ಒಂದೇ ಟೈಮಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ಕೆಲಸಕ್ಕೆ ಮುಂದಾಗಿದೆ. ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳಲ್ಲಿ ಎರಡು ಟಿ20 ಭಾರತ ತಂಡಗಳು ಕಣಕ್ಕೀಳಿಯಲಿವೆ. ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ ನಾಯಕತ್ವದ ವಿಷಯದಲ್ಲೂ ಮುಂದಿದ್ದಾರೆ. ಅಯ್ಯರ್‌ಗೆ ತಂಡವನ್ನು ಹಸ್ತಾಂತರಿಸಲು ವೇದಿಕೆ ಸಿದ್ಧವಾಗ್ತಿದೆ. ಅಲ್ದೇ ಸೂರ್ಯಕುಮಾರ್ ಯಾದವ್ ಬದಲಿಗೆ ಬೇರೆ ಯಾರಾದರೂ ಎರಡನೇ ತಂಡದ ಕ್ಯಾಪ್ಟನ್ ಆಗಬಹುದು.

ಬಿಸಿಸಿಐ ಅಧಿಕಾರಿಯಿಂದಲೇ ಹೊರಬಿತ್ತು ಸತ್ಯ!

ಅಷ್ಟಕ್ಕೂ ಇಲ್ಲಿ ಒಂದೇ ಟೈಮಲ್ಲಿ ಎರಡು ತಂಡಗಳ ರಚನೆ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳು ಬಹುತೇಕ ಒಂದೇ ಸಮಯದಲ್ಲಿ ಬರುತ್ತಿವೆ. ಅದಕ್ಕಾಗಿಯೇ ನಾವು ಎರಡೂ ತಂಡಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದೇವೆ. ಅದಕ್ಕಾಗಿ 30 ರಿಂದ 35 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.  ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಈ ಪಟ್ಟಿಯಿಂದ ಆಯ್ಕೆಯಾಗುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರಿಗೆ ಇದು ಒಂದು ಅವಕಾಶವಾಗಿದೆ. ಎರಡೂ ತಂಡಗಳನ್ನು ಬಲಿಷ್ಠಗೊಳಿಸುವ ಗುರಿಯೊಂದಿಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದಿದ್ದಾರೆ. ಸೋ ಅಲ್ಲಿಗೆ ಐಪಿಎಲ್​ ಶೈನಿಂಗ್ ಸ್ಟಾರ್ಸ್ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲೂ ಆಡ್ಬೋದಾಗಿದೆ.

ಐಪಿಎಲ್ ನಲ್ಲೂ ಸದ್ದು ಮಾಡದಿದ್ರೆ ಸೂರ್ಯನಿಗೆ ಸಿಗುತ್ತೆ ಗೇಟ್ ಪಾಸ್!

ಇನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ತಂಡ ವಿಶ್ವಕಪ್ ಗೆದ್ದಿದೆ ನಿಜ. ಆದ್ರೆ ಸೂರ್ಯಕುಮಾರ್ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇದೆ. ಐಪಿಎಲ್​ನಲ್ಲೂ ಸದ್ದು ಮಾಡ್ತಿಲ್ಲ. ಇದೇ ಈಗ  ಫಾರ್ಮ್ ಬಿಸಿಸಿಐ ಆಯ್ಕೆಗಾರರಿಗೆ ತಲೆನೋವಾಗಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಆಡ್ತಿಲ್ಲ. ಸೋ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಟ್ಯಾಲೆಂಟೆಡ್ ಪ್ಲೇಯರ್​ಗೆ ಕ್ಯಾಪ್ಟನ್ಸಿ ನೀಡಲಿ ಮ್ಯಾನೇಜ್‌ಮೆಂಟ್  ಪ್ಲ್ಯಾನ್ ಮಾಡಿದೆ. ಈ ಲಿಸ್ಟ್​ನಲ್ಲಿ ಇರೋದೇ ಶ್ರೇಯಸ್ ಅಯ್ಯರ್. ಶ್ರೇಯಸ್ ಅಯ್ಯರ್ ಕೊನೆಯ ಬಾರಿಗೆ 2023ರಲ್ಲಿ ಟಿ20 ಪಂದ್ಯವನ್ನು ಆಡಿದ್ದರು. ಆದ್ರೆ ಐಪಿಎಲ್​ನಲ್ಲಿ ಅದ್ಭುತವಾಗಿ ಆಡ್ತಿದ್ದಾರೆ. 2024ರಲ್ಲಿ ನಾಯಕನಾಗಿ ಕೆಕೆಆರ್ ಚಾಂಪಿಯನ್ ಮಾಡಿದ್ರು. 2025ರಲ್ಲಿ ಪಂಜಾಬ್​ ತಂಡವನ್ನ ಫೈನಲ್​ಗೆ ಮುನ್ನಡೆಸಿದ್ರು. 2026ರಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋತೇ ಇಲ್ಲ. ಅನ್ ಬೀಟನ್ ಟೀಂ ಆಗಿ ಆಡ್ತಿದ್ದಾರೆ. ಸೋ ಅವ್ರ ಪರ್ಫಾಮೆನ್ಸ್ ಮತ್ತು ಕ್ಯಾಪ್ಟನ್ಸಿ ಡಿಸಿಷನ್ಸ್ ಕೂಡ ಚೆನ್ನಾಗಿರೋದ್ರಿಂದ ಶ್ರೇಯಸ್​ ಮುಂದಿನ ಸಾರಥಿಯಾಗೋಕೆ ಸರ್ವಸಮರ್ಥರೂ ಆಗಿದ್ದಾರೆ. ಸದ್ಯ ಶ್ರೇಯಸ್ ಜೊತೆ ಸೂರ್ಯವಂಶಿ ಹೆಸರೂ ಚರ್ಚೆಯಲ್ಲಿದೆ.

ವೈಭವ್ ಸೂರ್ಯವಂಶಿಗಾಗಿ ಯಾರು ಜಾಗ ಖಾಲಿ ಮಾಡ್ತಾರೆ?

ಇನ್ನು ಐಪಿಎಲ್ ಆದ್ಮೇಲೆ ಯಂಗ್ ಸ್ಟಾರ್ ವೈಭವ್ ಸೂರ್ಯವಂಶಿ ಕೂಡ ಟೀಂ ಇಂಡಿಯಾಗೆ ಕಾಲಿಡೋದು ಬಹುತೇಕ ಪಕ್ಕಾ ಆಗಿದೆ. ಆದ್ರೆ ಸೂರ್ಯವಂಶಿಗಾಗಿ ಯಾರು ಸ್ಥಾನ ಬಿಟ್ಟುಕೊಡ್ತಾರೆ ಅನ್ನೋ ಚರ್ಚೆಯೂ ಇದೆ. ಅದೂ ಅಲ್ದೇ ತಿಲಕ್ ವರ್ಮಾ ಕಡೆಯಿಂದ ಬಿಗ್ ಇನ್ನಿಂಗ್ಸ್ ಏನೂ ಬರ್ತಿಲ್ಲ. ಸೋ ತಿಲಕ್​ರನ್ನೇ ಹೊರಗಿಟ್ಟು ಸೂರ್ಯವಂಶಿಗೆ ಎಂಟ್ರಿ ಕೊಡಬಹುದು. ಹಾಗೇ ಬ್ಯಾಟಿಂಗ್ ಆರ್ಡರ್​ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಹೀಗೆ ಒಂದ್ಕಡೆ ಐಪಿಎಲ್​ ಅಖಾಡ ರಂಗೇರ್ತಿದ್ರೆ ಅತ್ತ ಬಿಸಿಸಿಐ ಬಿಗ್ ಪ್ಲ್ಯಾನ್​ಗಳನ್ನೇ ಮಾಡಿಕೊಂಡಿದೆ. ವಿಶ್ವಕ್ರಿಕೆಟ್ ಆಳೋಕೆ ಬಲಿಷ್ಠ ಪಡೆಯನ್ನೇ ಕಟ್ಟುತ್ತಿದೆ.

Shantha Kumari