ಇರಾನ್‌ಗೆ ಶಾಕ್‌ ಕೊಟ್ಟ ಅಮೆರಿಕ! – ಹಡಗು ವಶಕ್ಕೆ ಪಡೆದ US ನೌಕಾ ಪಡೆ!

ಇರಾನ್‌ಗೆ ಶಾಕ್‌ ಕೊಟ್ಟ ಅಮೆರಿಕ! – ಹಡಗು ವಶಕ್ಕೆ ಪಡೆದ US ನೌಕಾ ಪಡೆ!

ಮಧ್ಯಪ್ರಾಚ್ಯ ಸಂಘರ್ಷ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಕದನ ವಿರಾಮ ಕೊನೆಗೊಂಡಿದ್ದು, ಅಮೆರಿಕ ಹಾರ್ಮುಜ್ ಜಲಸಂಧಿ ಮೇಲೆ ಹಿಡಿತ ಸಾಧಿಸಿಕೊಂಡಿದೆ. ಇದೀಗ ಅಮೆರಿಕ ವಿಧಿಸಿರುವ ದಿಗ್ಬಂಧನ ಮುರಿಯಲೆತ್ನಿಸಿದ ಇರಾನ್ ಹಡಗನ್ನು ಅಮೆರಿಕದ ನೌಕಾಪಡೆಯ ಯುಎಸ್ಎಸ್ ಸ್ಪ್ರೂನ್ಸ್ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಒಲೆ ಮೇಲೆ ಇಟ್ಟಿದ್ದ ಹಾಲು ಉಕ್ಕಿದ್ದಕ್ಕೆ ಸಿಟ್ಟು! – ಹೆಂಡತಿ ಮೇಲಿನ ಕೋಪಕ್ಕೆ ಪ್ರಾಣ ಕಳೆದುಕೊಂಡ ಪತಿರಾಯ!

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಎರಡು ವಾರಗಳ ಹಿಂದೆ ಕದನ ವಿರಾಮ ಮಾತುಕತೆಗೆ ಸಿದ್ಧಗೊಂಡಿತ್ತು. ಇದಕ್ಕಾಗಿ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸಿದ್ಧಗೊಂಡರೂ ಮಾತುಕತೆಗಳು ಯಾವುದೇ ಫಲ ನೀಡಲಿಲ್ಲ. ಇದರ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಬಂದರುಗಳಿಗೆ ದಿಗ್ಬಂಧನವನ್ನು ವಿಧಿಸಲು ಆದೇಶಿಸಿದ್ದರು. ಇದೀಗ ಅಮೆರಿಕ ವಿಧಿಸಿರುವ ದಿಗ್ಬಂಧನ ಮುರಿಯಲೆತ್ನಿಸಿದ ಇರಾನ್ ಹಡಗನ್ನು ಅಮೆರಿಕದ ನೌಕಾಪಡೆಯ ಯುಎಸ್ಎಸ್ ಸ್ಪ್ರೂನ್ಸ್ ವಶಕ್ಕೆ ಪಡೆದಿದೆ.

ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ಮಾಡಿದ್ದಾರೆ. ಇರಾನ್ ಧ್ವಜ ಹೊತ್ತ ಟೌಸ್ಕಾ ಎಂದು ಗುರುತಿಸಲಾದ ಹಡಗನ್ನು ಒಮಾನ್ ಕೊಲ್ಲಿಯಲ್ಲಿ ಅಮೆರಿಕದ ನೌಕಾಪಡೆಯು ವಶಕ್ಕೆ ಪಡೆದಿದೆ. ಈ ಹಡಗು ಹೊರ್ಮುಜ್ ಜಲ ಮಾರ್ಗದಲ್ಲಿ ಅಮೆರಿಕ ವಿಧಿಸಿದ್ದ ದಿಗ್ಬಂಧನ ಮುರಿಯಲು ಯತ್ನಿಸಿತ್ತು ಎಂದು ತಿಳಿಸಿದ್ದಾರೆ.

ಇರಾನ್ ಧ್ವಜ ಹೊತ್ತ ಟೌಸ್ಕಾ ಎಂಬ ಸರಕು ಹಡಗು ನಮ್ಮ ನೌಕಾ ದಿಗ್ಬಂಧನವನ್ನು ದಾಟಲು ಪ್ರಯತ್ನಿಸಿತು. ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ. ಹಡಗು ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದರಿಂದ ಯುಎಸ್ ನೌಕಾಪಡೆಗೆ ಸಿಕ್ಕಿದೆ. ಇದೀಗ ಅಮೆರಿಕದ ನೌಕಾಪಡೆ ಆ ಹಡಗನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ನೋಡುತ್ತಿದ್ದೇವೆ/ ಅಕ್ರಮ ಚಟುವಟಿಕೆ ಕಾರಣಕ್ಕಾಗಿ ಈ ಹಡಗನ್ನು ಅಮೆರಿಕ ಸಂಪೂರ್ಣವಾಗಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.

ಓಮನ್ ಕೊಲ್ಲಿಯಲ್ಲಿ ಇರಾನ್ ಧ್ವಜ ಹೊತ್ತ ಹಡಗನ್ನು ವಶಕ್ಕೆ ತೆಗೆದುಕೊಂಡಿರುವ ಕುರಿತು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ನ ಅರೆ-ಅಧಿಕೃತ ಮೆಹರ್ ಸುದ್ದಿ ಸಂಸ್ಥೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ನೌಕಾ ಘಟಕವು ಇರಾನಿನ ಹಡಗಿನ ಮೇಲಿನ ದಾಳಿಯನ್ನು ತಡೆದಿದೆ. ಸ್ಥಳದಲ್ಲಿ ಅದು ಉಪಸ್ಥಿತವಾಗಿದ್ದು, ತಕ್ಷಣ ಪ್ರತಿಕ್ರಿಯಿಸಿದ್ದರಿಂದ ಯುಎಸ್ ಪಡೆಗಳು ಹಿಂದೆ ಸರಿಯಬೇಕಾಯಿತು ಎಂದು ತಿಳಿಸಿದೆ.

ಇನ್ನು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಯುಎಸ್ ಸೆಂಟ್ರಲ್ ಕಮಾಂಡ್, ಯುಎಸ್ ನೌಕಾಪಡೆಯ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನಿನ ಬಂದರಿಗೆ ಪ್ರವೇಶಿಸದಂತೆ ಒಂದು ಹಡಗನ್ನು ತಡೆಯಲಾಗಿದೆ ಎಂದು ಹೇಳಿದೆ.

ಎರಡು ವಾರಗಳ ಕದನ ವಿರಾಮ ಮುಕ್ತಾಯಗೊಳ್ಳುವ ಮೊದಲು ಇರಾನ್‌ನೊಂದಿಗೆ ಮತ್ತೆ ಮಾತುಕತೆ ನಡೆಸಲು ಯುಎಸ್ ತಂಡ ಇಸ್ಲಾಮಾಬಾದ್ ಗೆ ತೆರಳಲಿದೆ. ಈ ತಂಡದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿಶೇಷ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಕಳುಹಿಸಲಿದ್ದಾರೆ ಎನ್ನಲಾಗಿದೆ.

ಮಾತುಕತೆಗಳು ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿರುವ ಟ್ರಂಪ್, ಈ ಬಾರಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ನಡೆಯುವ ಎರಡನೇ ಸುತ್ತಿನ ಮಾತುಕತೆಯಲ್ಲಿ ಟೆಹರಾನ್ ಭಾಗಿಯಾಗುವುದಿಲ್ಲ ಎಂದು ಹೇಳಿದೆ. ಇದಕ್ಕಾಗಿ ಅದು ಅತಿಯಾದ ಬೇಡಿಕೆಗಳು, ಅವಾಸ್ತವಿಕ ನಿರೀಕ್ಷೆಗಳು, ನಿಲುವಿನಲ್ಲಿ ನಿರಂತರ ಬದಲಾವಣೆಗಳು, ಇರಾನ್ ಬಂದರುಗಳ ಮೇಲೆ ಯುಎಸ್ ನೌಕಾ ದಿಗ್ಬಂಧನದ ಕಾರಣವನ್ನು ನೀಡಿದೆ.

ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷವು ಎಂಟನೇ ವಾರಕ್ಕೆ ಕಾಲಿಟ್ಟಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಗಳಿಗೆ ಅಡ್ಡಿಯಾಗಿದೆ. ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ತೈಲ ಬೆಲೆಗಳು ನಿರಂತರ ಹೆಚ್ಚಳವಾಗುತ್ತಿದೆ. ಏಪ್ರಿಲ್ 22ರಂದು ಕದನ ವಿರಾಮದ ಗಡುವು ಮುಗಿಯಲಿರುವುದರಿಂದ ಎರಡೂ ಪಕ್ಷದವರ ಮೇಲೂ ಒತ್ತಡ ಹೆಚ್ಚಾಗಿದೆ. ಶೀಘ್ರದಲ್ಲೇ ಒಪ್ಪಂದ ನಡೆಯದೇ ಇದ್ದರೆ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕ ಹೆಚ್ಚಾಗಿದೆ.

Shwetha M