ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ಸಾರಿಗೆ ನೌಕರರ ಮುಷ್ಕರ – KSRTC ಬಸ್ ಇರುತ್ತಾ? ಇರಲ್ವಾ?

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಹಿಂಬಾಕಿ ಹಾಗೂ 2024ರ ಜನವರಿಯಿಂದ ವೇತನ ಪರಿಷ್ಕರಣೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದು, ರಾಜ್ಯದ ಬಸ್ ಸಂಚಾರದಲ್ಲಿ ಬಹುತೇಕ ಏರುಪೇರು ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಶೇಕಡಾ 7 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಆದರೆ ಶೇಕಡಾ 25 ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ. ವೇತನ ಏರಿಕೆ ಮಾಡದ ಸರಕಾರದ ವಿರುದ್ದ ಮತ್ತೊಂದು ಹಂತದ ಹೋರಾಟಕ್ಕೆ ನೌಕರರು ಸಜ್ಜಾಗಿದ್ದು, ನಾಳೆಯಿಂದ ಧರಣಿಗೆ ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ನಾಲ್ಕು ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿದೆ. ಸಾರಿಗೆ ನೌಕರರು ಭರವಸೆ ಈಡೇರಿಸುವಂತೆ ಪಟ್ಟು ಹಿಡಿದಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ.:
ಇದನ್ನೂ ಓದಿ : ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದು, ದ್ರೌಪದಿ ವಸ್ತ್ರಾಪಹರಣಕ್ಕೆ ಸಮ – ಸಿಎಂ ಯೋಗಿ
ಕರ್ತವ್ಯಕ್ಕೆ ಗೈರಾಗಿ ಸಾವಿರಾರು ನೌಕರರು ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವ ಸಾಧ್ಯತೆ ಇದೆ. ಮುಷ್ಕರಕ್ಕೆ ಮುಂದಾದ ನೌಕರರಿಗೆ ನಿಗಮಗಳು ಶಾಕ್ ಕೊಟ್ಟಿದ್ದು, ನೌಕರರ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ವಾರದ ರಜೆ, ದೀರ್ಘಾವಧಿ ರಜೆ ಹೊರತುಪಡಿಸಿ ಎಲ್ಲರೂ ಹಾಜರಾಗಬೇಕು. ಬೇಕಾಬಿಟ್ಟಿ ರಜೆ ಹಾಕಿ ಪ್ರತಿಭಟನೆಯಲ್ಲಿ ಕುಳಿತುಕೊಂಡರೆ ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದ್ದು, ಬಿಎಂಟಿಸಿ, KSRTC ಯಿಂದ ನೌಕರರಿಗೆ ಸೂಚನೆ ನೀಡಲಾಗಿದೆ.

ನೋಡಿರಿ

