ಚೆನ್ನೈ ಸೂಪರ್ ಕಿಂಗ್ಸ್ಗೆ ಬಿಗ್ ಶಾಕ್ – ಆಯುಷ್ ಮ್ಹಾತ್ರೆ ಟೀಂನಿಂದ ಔಟ್?

ಸಿಎಸ್ಕೆಗೆ ಸಾಲು ಸಾಲು ಸವಾಲು ಎದುರಾಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸೋಲು-ಗೆಲುವುಗಳ ಲೆಕ್ಕಾಚಾರದೊಂದಿಗೆ ಸಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಯುವ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಅವರು ಸ್ನಾಯು ಸೆಳೆತ ಗಾಯದ ಸಮಸ್ಯೆಯಿಂದಾಗಿ ಸುಮಾರು ಮೂರು ವಾರಗಳ ಕಾಲ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 18 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ವೇಳೆ ಆಯುಷ್ ಮ್ಹಾತ್ರೆ ಗಾಯಗೊಂಡಿದ್ದರು. ಐದನೇ ಓವರ್ನಲ್ಲಿ ಎರಡನೇ ರನ್ಗಾಗಿ ಓಡುತ್ತಿದ್ದಾಗ ಅವರ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾಯಿತು. ಈ ನೋವಿನ ನಡುವೆ ಬ್ಯಾಟ್ ಬೀಸಿದ ಆಯುಷ್ 30 ರನ್ಗಳಿಸಿ ಔಟಾಗಿದ್ದರು. ಇದೀಗ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ಈ ವರದಿಯಲ್ಲಿ ಗಾಯವು ಗಂಭೀರವಾಗಿ ಎಂಬುದು ತಿಳಿದು ಬಂದಿದೆ. ಹೀಗಾಗಿ ಆಯುಷ್ ಮ್ಹಾತ್ರೆಗೆ ಮೂರು ವಾರಗಳ ವಿಶ್ರಾಂತಿ ನೀಡಲು ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೆಕೆಆರ್ ವಿರುದ್ಧ RR ಸೋಲುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವೈಭವ್ ಸೂರ್ಯವಂಶಿ – ವಿಡಿಯೋ ವೈರಲ್
ಈ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ ಅದ್ಭುತ ಲಯದಲ್ಲಿದ್ದರು. ಆಡಿರುವ 6 ಪಂದ್ಯಗಳಲ್ಲಿ 177ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ 201 ರನ್ ಗಳಿಸಿದ್ದರು. ಇದೀಗ ಉತ್ತಮ ಫಾರ್ಮ್ನಲ್ಲಿರುವ ಆಟಗಾರನೇ ಗಾಯಗೊಂಡು ಹೊರ ನಡೆಯುತ್ತಿರುವುದು ಸಿಎಸ್ಕೆ ಪಾಲಿಗೆ ಹಿನ್ನಡೆಯಾಗಲಿದೆ. ಆಯುಷ್ ಮ್ಹಾತ್ರೆ ಅವರ ಅಲಭ್ಯತೆಯಲ್ಲಿ ತಂಡವು ಉರ್ವಿಲ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉರ್ವಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ವೇಗಿಗಳಾದ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಈಗಾಗಲೇ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಕೂಡ ಫಿಟ್ನೆಸ್ ಸಮಸ್ಯೆಗೀಡಾಗಿದ್ದಾರೆ.

ನೋಡಿರಿ

