ಬೆಳಗಾವಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ – ಗಂಡ ಅರೆಸ್ಟ್, ಇಬ್ಬರು ಮಕ್ಕಳು ಅನಾಥ

ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ನಾವಿ (28) ಮೃತ ಗೃಹಿಣಿಯಾಗಿದ್ದು, ಮನೆಯ ಕಿಟಕಿಯ ಗ್ರಿಲ್ಗೆ ವೇಲ್ ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯ ಪತಿ ಸಂತೋಷ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕೆಕೆಆರ್ ವಿರುದ್ಧ RR ಸೋಲುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವೈಭವ್ ಸೂರ್ಯವಂಶಿ – ವಿಡಿಯೋ ವೈರಲ್
2021ರಲ್ಲಿ ಶ್ರೀನಿಧಿ ಮತ್ತು ಸಂತೋಷ್ ವಿವಾಹ ನಡೆದಿತ್ತು. ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇದ್ದು, ಇದಕ್ಕೆ ಸಾಕ್ಷಿ ಎಂಬಂತೆ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಇತ್ತೀಚೆಗೆ ಕೌಟುಂಬಿಕ ಕಲಹ ಆರಂಭವಾಗಿದ್ದು, ತವರು ಮನೆಯವರೊಂದಿಗೆ ಮಾತಾಡದಂತೆ ಪತಿ ಸಂತೋಷ ಶ್ರೀನಿಧಿ ಬಳಿಯಿದ್ದ ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಸೋಲಿಲ್ಲದ ಸರದಾರ PBKS – ಪಂಜಾಬ್ ಲಕ್ಕಿ ಚಾರ್ಮ್ ಶ್ರೇಯಸ್
ಶ್ರೀನಿಧಿ ಆತ್ಮಹತ್ಯೆ ಸಂಬಂಧ ಆಕೆಯ ಗಂಡ, ಅತ್ತೆ, ಮತ್ತು ಇನ್ನಿಬ್ಬರು ಸಂಬಂಧಿಕರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ಆಕೆಯದ್ದು ಆತ್ಮಹತ್ಯೆ ಅಲ್ಲ. ಬದಲಾಗಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ನೋಡಿರಿ

