ಟ್ಯಾಟೂ ಬ್ಯೂಟಿಗೆ ಅರ್ಶದೀಪ್ ಬೋಲ್ಡ್.. ಡೇಟಿಂಗ್‌ ಗುಟ್ಟು.. ಫೋಟೋದಲ್ಲಿ ರಟ್ಟು! – PBKS ಮ್ಯಾಚ್‌ನಲ್ಲಿ‌ ಲವ್‌ ರಿವೀಲ್!

ಟ್ಯಾಟೂ ಬ್ಯೂಟಿಗೆ ಅರ್ಶದೀಪ್ ಬೋಲ್ಡ್.. ಡೇಟಿಂಗ್‌ ಗುಟ್ಟು.. ಫೋಟೋದಲ್ಲಿ ರಟ್ಟು! – PBKS ಮ್ಯಾಚ್‌ನಲ್ಲಿ‌ ಲವ್‌ ರಿವೀಲ್!

ಅರ್ಶದೀಪ್‌ ಸಿಂಗ್‌.. ಟೀಂ ಇಂಡಿಯಾದ ವೇಗಿ ಈಗ ಐಪಿಎಲ್‌ನಲ್ಲಿ ಆಡ್ತಿದ್ದಾರೆ. ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಆಡ್ತಿರೋ ಅರ್ಶದೀಪ್‌ ಈ ವರ್ಷದ ಟೂರ್ನಿಯಲ್ಲಿ ಯಾಕೋ ಸೌಂಡ್‌ ಮಾಡ್ತಿಲ್ಲ. ಆದ್ರೆ ಅವರ ವೈಯಕ್ತಿಕ ಜೀವನ ಮಾತ್ರ ಈಗ ಸುದ್ದಿಯಲ್ಲಿದೆ. ಒಂದು ಪೋಸ್ಟ್‌ನಿಂದಾಗಿ ಅವರ ಲವ್‌ ಮ್ಯಾಟರ್‌ ರಿವೀಲ್‌ ಆಗಿದೆ.

 ಇದನ್ನೂ ಓದಿ:  ಟ್ರೆಕ್ಕಿಂಗ್‌ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!

ಪಂಜಾಬ್ ಕಿಂಗ್ಸ್‌ ತಂಡದ ಆಟಗಾರ ಅರ್ಶದೀಪ್‌ ಸಿಂಗ್‌ ಈ ವರ್ಷದ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಬೌಲಿಂಗ್‌ ಮೂಲಕ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ ಜೋಶ್‌ ಕಳೆದುಕೊಂಡಿರುವ ಅರ್ಶದೀಪ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್. ರೀಲ್ಸ್‌, ಪೋಸ್ಟ್‌, ವ್ಲಾಗ್ಸ್‌ ಅಂತ ಬ್ಯೂಸಿ ಇದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್‌ವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪೋಸ್ಟ್‌ನಿಂದಲೇ ಗುಟ್ಟೊಂದು ರಟ್ಟಾಗಿದೆ. ಅದೇ ಲವ್‌ ಮ್ಯಾಟರ್.‌

ಹೌದು. ಐಪಿಎಲ್‌ ಆರಂಭವಾಗುತ್ತಿದ್ದಂತೆ ಅರ್ಶದೀಪ್‌ ಸಿಂಗ್‌ ಹೆಸರು ಸುಂದರಿಯ ಜೊತೆ ತಳುಕುಹಾಕಿಕೊಂಡಿದೆ. ಆ ನಟಿ ಬೇರೆ ಯಾರು ಅಲ್ಲ ಸಮ್ರೀನ್ ಕೌರ್. ಪಂಜಾಬಿ ಹಾಗೂ ಬಾಲಿವುಡ್‌ ನಟಿ ಸಮ್ರಿನ್‌ ಕೌರ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಸ್ರೆಡ್‌ ಆಗಲು ಕಾರಣ ಅರ್ಶದೀಪ್‌ ಸಿಂಗ್‌ ಸ್ನಾಪ್‌ಚಾಟ್ ನಲ್ಲಿ ಪೋಸ್ಟ್‌ ಮಾಡಿರುವ ಫೋಟೋ. ಅರ್ಶದೀಪ್ ಪೋಸ್ಟ್‌ ಮಾಡಿರುವ ಫೋಟೋದಲ್ಲಿ ಯುವತಿಯೊಬ್ಬರ ಕೈ ಹಿಡಿದುಕೊಂಡಿರುವುದು ಕಂಡುಬಂದಿದೆ. ಆದರೆ, ಆ ಚಿತ್ರದಲ್ಲಿ ಯುವತಿಯ ಮುಖ ತೋರಿಸಿಲ್ಲ.. ಈ ಫೋಟೋ ನೋಡಿದ ಫ್ಯಾನ್ಸ್‌ ಆ ಕೈ ಮತ್ತು ಅದರ ಮೇಲಿರುವ ಟ್ಯಾಟೂ ಮೂಲಕ ಯಾರು ಅನ್ನೋದನ್ನ ಪತ್ತೆ ಹಚ್ಚಿದ್ದಾರೆ. ಅರ್ಶದೀಪ್ ಸಿಂಗ್ ಹಂಚಿಕೊಂಡ ಫೋಟೋದಲ್ಲಿ ಯುವತಿಯ ಕೈ ಮೇಲಿರುವ ಟ್ಯಾಟೂ ಡಿಸೈನ್ ಸಮ್ರೀನ್ ಕೌರ್ ಅವರ ಕೈ ಮೇಲಿರುವ ಟ್ಯಾಟೂಗೆ ಹೋಲಿಕೆಯಾಗುತ್ತಿದೆ. ಹೀಗಾಗಿ ಫ್ಯಾನ್ಸ್‌ ಅರ್ಶದೀಪ್‌ ಹಂಚಿಕೊಂಡಿರುವ ಫೋಟೋದಲ್ಲಿ ಇರೋದು ಸಮ್ರಿನ್‌ ಅನ್ನೋದನ್ನ ಪತ್ತೆ ಹಚ್ಚಿದ್ದಾರೆ. ಈ ಬೆನ್ನಲ್ಲೇ ಕ್ರಿಕೆಟ್‌ ಲೋಕದಲ್ಲಿ ಮತ್ತೊಂದು ಮದುವೆ ಸುದ್ದಿ ಸದ್ಯದಲ್ಲೇ ಸಿಗಲಿದೆ ಎಂದು ಫ್ಯಾನ್ಸ್‌ ಹೇಳ್ತಿದ್ದಾರೆ.

ಇನ್ನು ಈ ಸಮ್ರೀನ್‌ ಕೌರ್‌ ಯಾರು ಅಂತ ನೋಡೋದಾದ್ರೆ, ಸಮ್ರೀನ್‌ ಜಮ್ಮು ಮತ್ತು ಕಾಶ್ಮೀರ ಮೂಲದರು. 2018ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದು, ಅಲ್ಲಿಂದಲೇ ಕೌರ್‌ ಫೇಮಸ್‌ ಆಗಿದ್ದು. ಇದಿಷ್ಟೇ ಅಲ್ಲದೇ ಸಮ್ರಿನ್‌ ಪಂಜಾಬಿ ಮತ್ತು ಹಿಂದಿ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಬಿನ್ ನೌಟಿಯಾಲ್ ಅವರ ತುಜೆ ಭೂಲ್ನಾ ತೋ ಚಾಹಾ, ಬಾದ್‌ಶಾ ಅವರ ‘ಬಾವ್ಲಾ’, ಮತ್ತು ಮಣಿಂದರ್ ಬುಟ್ಟರ್ ಅವರ ‘ಮೊಂಬತ್ತಿಯಾನ್’ ನಂತಹ ಸೂಪರ್ ಹಿಟ್ ಹಾಡುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲ ಪಂಜಾಬಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ‌

ಇನ್ನು ಸಮ್ರಿನ್ ಪಂಜಾಬ್‌ ಮ್ಯಾಚ್‌ ವೇಳೆ ಮೈದಾನದಲ್ಲೂ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ಮುಲ್ಲನ್‌ಪುರದಲ್ಲಿ ನಡೆದ ಪಂಜಾಬ್‌ ತಂಡದ ಮ್ಯಾಚ್‌ ವೇಳೆಯೂ ಕಾಣಿಸಿಕೊಂಡಿದ್ದರು. ಪಂಜಾಬ್‌ ಟೀಂನ ಜರ್ಸಿ ತೊಟ್ಟು ಮೈದಾನದಲ್ಲಿ ಫೋಟೋ ತೆಗೆಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಈ ಬೆನ್ನಲ್ಲೇ ಅರ್ಶದೀಪ್‌ ಡೇಟಿಂಗ್‌ ಮಾಡ್ತಿರೋದು ಈ ನಟಿ ಜೊತೆ ಅಂತ ಹೇಳ್ತಿದ್ದಾರೆ. ಒಟ್ಟಾರೆ ಅರ್ಶದೀಪ್‌ ಸಿಂಗ್‌ ಹಾಗೂ ಸಮ್ರಿನ್‌ ಕೌರ್‌ ಡೇಟಿಂಗ್‌ ವಿಚಾರ ಫ್ಯಾನ್ಸ್‌ಗೆ ಚರ್ಚೆ ಮಾಡಲು ಹೊಸ ಟಾಪಿಕ್‌ ಸಿಕ್ಕಂತಾಗಿದೆ. ಆದ್ರೆ ಈ ಬಗ್ಗೆ ಸಮ್ರಿನ್‌ ಕೌರ್‌ ಹಾಗೂ ಅರ್ಶದೀಪ್‌ ಸಿಂಗ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನಾದ್ರೂ ಹರಿದಾಡ್ತಿರೋ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ನೀಡ್ತಾರಾ ಅಂತ ಕಾದುನೋಡ್ಬೇಕು.

Shwetha M