ನಿಮ್ಮ ಮಕ್ಕಳು ಹೆಚ್ಚು ಹೊತ್ತು ವಿಡಿಯೋ ಗೇಮ್ ಆಡುತ್ತಾರಾ? ಎಚ್ಚರ.. ಹಾರ್ಟ್ ಪ್ರಾಬ್ಲಂ ಬರಬಹುದು!

ನಿಮ್ಮ ಮಕ್ಕಳು ಲೆಕ್ಕಕ್ಕಿಂತ ಹೆಚ್ಚು ವಿಡಿಯೋ ಗೇಮ್ಸ್ ಆಡುತ್ತೀರಾ? ಹಾಗಾದ್ರೆ ಎಚ್ಚರ ವಹಿಸಿ. ವಿಡಿಯೋ ಗೇಮ್‌ಗಳಲ್ಲಿ ಆಟ ಆಡೋದ್ರಿಂದ ಮಕ್ಕಳ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಇದನ್ನೂ ಓದಿ: ಆಫ್ರಿಕಾದಿಂದ ಸಿಲಿಕಾನ್ ಸಿಟಿಗೆ ಹೊಸ ಅತಿಥಿಗಳ ಎಂಟ್ರಿ! – ಬನ್ನೇರುಘಟ್ಟ ಮೃಗಾಲಯಕ್ಕೆ ಗಂಡು, ಹೆಣ್ಣು ಚೀತಾ
ಹಾರ್ಟ್ ರಿದಮ್ ಸೊಸೈಟಿ ಪ್ರಕಟಿಸುವ ಹಾರ್ಟ್ ರಿದಮ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವಿಡಿಯೋ ಗೇಮ್ಸ್ ಆಡುವ ಮಕ್ಕಳಲ್ಲಿ ಕಾರ್ಡಿಯಾಕ್ ಆರ್ಹೆತ್ಮಿಯಾ ಹೆಚ್ಚಾಗುವ ಸಾದ್ಯತೆ ಇದೆ. ಈ ವಿಷಯವನ್ನು ಹಿಂದೆ ಗುರುತಿಸಲಾಗಿರಲಿಲ್ಲ. ವಿಡಿಯೋ ಗೇಮ್ಗಳನ್ನು ಆಡುವಾಗ ಪ್ರಜ್ಞೆ ಕಳೆದುಕೊಳ್ಳುವುದು ಅಪರೂಪ. ಆದರೆ ಇದರಲ್ಲಿ ಒಂದು ಪ್ಯಾಟರ್ನ್ ಅನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
ವಿಡಿಯೋ ಗೇಮ್ಸ್ ಕೆಲವು ಮಕ್ಕಳಲ್ಲಿ ಏರುಪೇರಾದ ಎದೆಬಡಿತಕ್ಕೆ ಕಾರಣ ಆಗಬಹಹುದು. ಇದು ಗಂಭೀರ ಆರೋಗ್ಯ ಸಮಸ್ಯೆ ಆಗಿದೆ. ಇದನ್ನು ಸರಿಯಾದ ಸಮಯದಲ್ಲಿ ಗುರುತಿಸದೇ ಹೋದರೆ ಪ್ರಾಣಕ್ಕೂ ಅಪಾಯವಿದೆ. ವಿಡಿಯೋ ಗೇಮಿಂಗ್ ಮಾಡುವಾಗ ಹಠಾತ್ತನೆ ಪ್ರಜ್ಞೆಯನ್ನು ಕಳೆದುಕೊಳ್ಳುವ ಮಕ್ಕಳನ್ನು ಹೃದಯ ತಜ್ಞರಿಂದ ಪರೀಕ್ಷೆಗೆ ಒಳಪಡಿಸಬೇಕು. ಇದು ಗಂಭೀರ ಹೃದಯ ಸಂಬಂಧಿ ಸಮಸ್ಯೆಯ ಮೊದಲ ಚಿಹ್ನೆಯಾಗಿರಬಹುದು ಎಂದು ತಜ್ಷರು ಎಚ್ಚರಿಸಿದ್ದಾರೆ.

ನೋಡಿರಿ

