ಸಣ್ಣ ಪುಟ್ಟ ವಿಚಾರಕ್ಕೂ ಮಕ್ಕಳಿಗೆ ಹೊಡೆಯುತ್ತೀರಾ? – ನೀವು ಮಾಡೋ ತಪ್ಪಿನಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ!

ಸಣ್ಣ ಪುಟ್ಟ ವಿಚಾರಕ್ಕೂ ಮಕ್ಕಳಿಗೆ ಹೊಡೆಯುತ್ತೀರಾ? – ನೀವು ಮಾಡೋ ತಪ್ಪಿನಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ!

ಮನೆಯಲ್ಲಿ ಮಕ್ಕಳಿದ್ರೆ ಏನಾದ್ರೂ ಕಿತಾಪತಿ ಮಾಡುತ್ತಿರುತ್ತಾರೆ. ಓದೋದಕ್ಕಿಂತ ಹೆಚ್ಚು ಆಟದಲ್ಲೇ ಸಮಯ ಕಳೆಯುತ್ತಾರೆ. ಹೀಗಾಗಿ ತಂದೆ ತಾಯಿ ಮಕ್ಕಳಿಗೆ ಹೊಡೆಯುತ್ತಾರೆ. ನೀವು ನಿಮ್ಮ ಮಕ್ಕಳಿಗೆ ಮಾತು ಮಾತಿಗೂ ಹೊಡೆಯುತ್ತಿದ್ರೆ ಎಚ್ಚರ.. ನಿಮ್ಮ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಇದನ್ನೂ ಓದಿ: ಟ್ರೆಕ್ಕಿಂಗ್‌ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!

ಮಕ್ಕಳು ಹೇಳಿದ ಮಾತು ಕೇಳಲ್ಲ. ಎದುರುತ್ತರ ನೀಡಿದ್ರೆ, ಸುಳ್ಳು ಹೇಳಿದ್ರೆ, ತಪ್ಪೇನಾದರೂ ಮಾಡಿದ್ರೆ ಮಕ್ಕಳಿಗೆ ಬುದ್ಧಿ ಕಲಿಸಲು ಪೋಷಕರು ಅನುಸರಿಸುವ ಮಾರ್ಗವೆಂದರೆ ರಪ್ಪಂತಾ ಬಾರಿಸೋದು. ಮಕ್ಕಳಿಗೆ ಹೊಡೆದ್ರೆ ಬುದ್ಧಿ ಬರುತ್ತದೆ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ನೀವು ಬಾರಿಸಿದಷ್ಟೂ ಮಕ್ಕಳ ವರ್ತನೆ ಮತ್ತಷ್ಟು ಕೆಡುತ್ತದೆ ಹೊರತು ಒಳ್ಳೆಯದಾಗುವುದಿಲ್ಲ. ಮಕ್ಕಳು ಸರಿ ಹೋಗ್ತಾರೆ ಅಂತಾ ಹೊಡೆದ್ರೆ ಮತ್ತಷ್ಟು ತಪ್ಪು ದಾರಿ ತುಳಿತಾರೆ.

ಮಕ್ಕಳಿಗೆ ಸಣ್ಣ ಪುಟ್ಟ ವಿಚಾರಕ್ಕೂ ಬೈಯುತ್ತಾ, ಹೊಡೆಯುತ್ತಿದ್ರೆ ಅವರು ಹಠಮಾರಿಗಳಾಗುತ್ತಾರೆ. ಹೊಡೆಯುತ್ತಾರೆ ಎಂಬ ಕಾರಣಕ್ಕೆ ಸುಳ್ಳಿನ ಕೋಟೆಯನ್ನೇ ಕಟ್ಟುತ್ತಾರೆ. ಹಾಗಾದರೆ ಮಕ್ಕಳನ್ನು ಸರಿದಾರಿಗೆ ಹೇಗೆ ತರೋದು ಅಂತಾ ನಿಮ್ಮಲ್ಲಿ ಪ್ರಶ್ನೆ ಮೂಡೋದು ಸಹಜ. ಅದನ್ನೂ ಹೇಳ್ತಿನಿ.. ಮಕ್ಕಳು ತಪ್ಪು ಮಾಡಿದಾಗ ಕೋಪ ಬರೋದು ಸಹಜ, ಆದರೆ ನಿಮ್ಮ ಕೋಪವನ್ನು ಕಂಟ್ರೋಲ್ ಮಾಡಿ ಅವರ ತಪ್ಪುಗಳನ್ನು ಮನವರಿಕೆ ಮಾಡಿ. ಹಾಗಂತ ಆಗಾಗ ಸಲಹೆ ಕೊಡಬೇಡಿ, ಅದೂ ಅವರಿಗೆ ಕಿರಿಕಿರಿ ಅನಿಸಬಹುದು. ಹೇಳಬೇಕಾದ ವಿಷಯವನ್ನು ಕಟ್ಟುನಿಟ್ಟಾಗಿ ದೃಢವಾಗಿ ಹೇಳಿ. ನಿಮ್ಮ ಧ್ವನಿಯಲ್ಲೇ ಅರ್ಥ ಮಾಡಿಕೊಳ್ತಾರೆ. ಎಲ್ಲವನ್ನೂ ನಿಮ್ಮ ದೃಷ್ಟಿಕೋನದಿಂದಲೇ ನೋಡುವ ಬದಲು ಮಗುವಿನ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಿ. ಹೊಡೆದು ಬುದ್ಧಿವೇಳುವ ಬದಲು ಮಕ್ಕಳಿಗೆ ಪುಸಲಾಯಿಸಿ ತಿಳಿ ಹೇಳಿದರೆ ಮಕ್ಕಳು ಬೇಗನೆ ಅರ್ಥ ಮಾಡಿಕೊಳ್ತಾರೆ.

Shwetha M