ರಿಲೀಸ್ ಗೂ ಮೊದಲೇ ರಜಿನಿಕಾಂತ್ ಸಿನಿಮಾ ಇತಿಹಾಸ – ದಾಖಲೆಯ ಮೊತ್ತಕ್ಕೆ OTTಗೆ ಸೇಲ್ ಆಯ್ತು ಜೈಲರ್-2 ಸಿನಿಮಾ!

ಸೂಪರ್ ಸ್ಟಾರ್ ರಜಿನಿಕಾಂತ್ ಏನೇ ಮಾಡಿದ್ರೂ ಅದು ದಾಖಲೆಯೇ. ಈಗ ಜೈಲರ್ ಸಕ್ಸಸ್ ಬಳಿಕ ಜೈಲರ್ 2 ಸಿನಿಮಾ ಶೂಟಿಂಗ್ ನಡೀತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, 2026ರ ಆಗಸ್ಟ್ನಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ. ಮೊದಲ ಚಿತ್ರ ಸಕ್ಸಸ್ ಆಗಿರೋದ್ರಿಂದ ಸೀಕ್ವೇಲ್ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚುತ್ತಿವೆ. ಆದ್ರೆ ಈ ಸಿನಿಮಾ ರಿಲೀಸ್ ಆಗೋ ಮೊದಲೇ ದೊಡ್ಡ ದಾಖಲೆ ಬರೆದಿದೆ. ಓಟಿಟಿ ಹಕ್ಕುಗಳಲ್ಲಿ ರೆಕಾರ್ಡ್ ಮಾಡಿದೆ.
ಇದನ್ನೂ ಓದಿ : ಟಾಸ್ ಗೆದ್ದ ಡೆಲ್ಲಿಯಿಂದ ಬೌಲಿಂಗ್ ಆಯ್ಕೆ – ಮೊದಲು ಬ್ಯಾಟಿಂಗ್ ಶುರುಮಾಡಿದ RCB
ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್ನ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರ. ಜೈಲರ್ 2 ಸಿನಿಮಾ ಹಕ್ಕುಗಳನ್ನು ಖರೀದಿ ಮಾಡಲು ಸಾಕಷ್ಟು ಪೈಪೋಟಿ ಇತ್ತು. ಅಂತಿಮವಾಗಿ ಅಮೇಜಾನ್ ಪ್ರೈಮ್ ವಿಡಿಯೋ ತೆಕ್ಕೆಗೆ ಜೈಲರ್ 2 ಸಿನಿಮಾದ ಡಿಜಿಟಲ್ ಹಕ್ಕುಗಳು ಸೇಲ್ ಆಗಿವೆ. ಅದು ಕೂಡ ದಾಖಲೆ ಮೊತ್ತಕ್ಕೆ ಅನ್ನೋದು ವಿಶೇಷ. ಹೌದು, ಬರೋಬ್ಬರಿ 160 ಕೋಟಿ ರೂಪಾಯಿಗಳಿಗೆ ಜೈಲರ್ 2 ಡಿಜಿಟಲ್ ಹಕ್ಕುಗಳು ಸೇಲ್ ಆಗಿವೆ ಎಂಬ ಮಾಹಿತಿ ಹೊರಬಿದ್ದಿದೆ.
ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಒಟಿಟಿ ಡೀಲ್ ಆಗಿದ್ದು, ಈ ಹಿಂದೆ ಕಮಲ್ ಹಾಸನ್ ಅವರ ‘ಥಗ್ ಲೈಫ್’ (150 ಕೋಟಿ ರೂ.) ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಇನ್ನೂ ರಿಲೀಸ್ ದಿನಾಂಕವೇ ಘೋಷಣೆ ಆಗಿಲ್ಲ. ಆಗಲೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ರಜನಿಕಾಂತ್ ಅವರ ಸ್ಟಾರ್ ಪವರ್ ಎಂಥದ್ದು ಎಂಬುದನ್ನು ಸಾಬೀತು ಮಾಡಿದೆ. ದಕ್ಷಿಣ ಭಾರತದ ಖ್ಯಾತ ನಟರಾದ ರಮ್ಯಾ ಕೃಷ್ಣನ್, ಯೋಗಿ ಬಾಬು, ಮೋಹನ್ ಲಾಲ್, ಶಿವರಾಜ್ಕುಮಾರ್ ಅವರು ಭಾಗ 2ರಲ್ಲೂ ಮುಂದುವರಿದಿದ್ದಾರೆ. ಜೊತೆಗೆ ಈ ಬಾರಿ ಸೂರಜ್ ವೆಂಜಾರಮೂಡು, ಎಸ್ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿಜಯ್ ಸೇತುಪತಿ ಸೇರಿದಂತೆ ಮತ್ತೊಂದಿಷ್ಟು ಕಲಾವಿದರು ಸೇರ್ಪಡೆಗೊಂಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

ನೋಡಿರಿ

