ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರೇ ದಯವಿಟ್ಟು ಗಮನಿಸಿ – ಬೇಸಿಗೆ ರಜೆ ಪ್ರಯುಕ್ತ ದರ್ಶನದ ರೂಲ್ಸ್ ಚೇಂಜ್

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರೇ ದಯವಿಟ್ಟು ಗಮನಿಸಿ – ಬೇಸಿಗೆ ರಜೆ ಪ್ರಯುಕ್ತ ದರ್ಶನದ ರೂಲ್ಸ್ ಚೇಂಜ್

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ದರ್ಶನ ನೀತಿಯಲ್ಲಿ ಬದಲಾವಣೆ ತರಲಾಗುತ್ತಿದೆ.ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶ್ರೀವಾರಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಪೋಷಕರು ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ದರ್ಶನ ನೀತಿಯಲ್ಲಿ ಬದಲಾವಣೆ ತರಲಾಗುತ್ತಿದೆ.

ಸ್ತುತ ಜಾರಿಯಲ್ಲಿರುವ ಸ್ಲಾಟೆಡ್ ಸರ್ವ ದರ್ಶನ (SSD) ಟೋಕನ್‌ಗಳ ಮೂಲಕ ದರ್ಶನ ಪಡೆಯಲು ಭಕ್ತರು ಸುಮಾರು 23 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು, ಮೇ 1 ರಿಂದ ಎಸ್‌ಎಸ್‌ಡಿ ಟೋಕನ್‌ಗಳು ಹಾಗೂ ವಿಐಪಿ ಬ್ರೇಕ್ ದರ್ಶನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಟಿಟಿಡಿ ಯೋಜಿಸುತ್ತಿದೆ. ಇದರಿಂದಾಗಿ ಸಾಮಾನ್ಯ ಭಕ್ತರು 8 ರಿಂದ 12 ಗಂಟೆಗಳ ಒಳಗೆ ದರ್ಶನ ಪಡೆಯಲು ಸಾಧ್ಯವಾಗಲಿದೆ.

ಇದನ್ನೂ ಓದಿ: ಟ್ರೆಕ್ಕಿಂಗ್‌ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!

ಸಾಮಾನ್ಯವಾಗಿ ಪ್ರತಿದಿನ ವಿಐಪಿ ಬ್ರೇಕ್ ದರ್ಶನಗಳಿಗಾಗಿಯೇ 2 ರಿಂದ 3 ಗಂಟೆಗಳ ಸಮಯ ವ್ಯಯವಾಗುತ್ತಿದೆ. ಒಂದು ವೇಳೆ ಈ ವಿಐಪಿ ದರ್ಶನಗಳನ್ನು ರದ್ದುಗೊಳಿಸಿದರೆ, ಆ ಸಮಯದಲ್ಲಿ ಹೆಚ್ಚುವರಿಯಾಗಿ 15 ಸಾವಿರ ಸಾಮಾನ್ಯ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಅನುಸರಿಸುವ ‘ಏಕ ಮಾದರಿ ದರ್ಶನ’ ವ್ಯವಸ್ಥೆಯನ್ನು ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.

ಕಳೆದ ಮೂರು ವರ್ಷಗಳ ಅಂಕಿಅಂಶಗಳ ಪ್ರಕಾರ, ಬೇಸಿಗೆಯ ಪ್ರತಿ ತಿಂಗಳು ಸುಮಾರು 23 ಲಕ್ಷ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಈ ಭಾರೀ ದಟ್ಟಣೆಯನ್ನು ನಿರ್ವಹಿಸಲು ಟಿಟಿಡಿ ಈ ಕೆಳಗಿನ ಕ್ರಮಗಳನ್ನು ಪರಿಗಣಿಸುತ್ತಿದೆ. ವಿವಿಧ ವರ್ಗದ ದರ್ಶನಗಳನ್ನು ಬದಿಗಿಟ್ಟು ಎಲ್ಲರಿಗೂ ಒಂದೇ ಮಾದರಿಯ ದರ್ಶನ ವ್ಯವಸ್ಥೆ ಕಲ್ಪಿಸುವುದು. ವಿಐಪಿ ಪ್ರೋಟೋಕಾಲ್ ದರ್ಶನಗಳನ್ನು ಕಡಿತಗೊಳಿಸುವ ಮೂಲಕ ದರ್ಶನದ ವೇಗವನ್ನು ಹೆಚ್ಚಿಸುವುದು. ಹೊಸ ನೀತಿಯಿಂದ ದಿನಕ್ಕೆ ಸರಿಸುಮಾರು 80 ಸಾವಿರ ಜನರಿಗೆ ಸುಲಭವಾಗಿ ದರ್ಶನ ಒದಗಿಸಬಹುದು ಎಂದು ಅಂದಾಜಿಸಲಾಗಿದೆ.

Kishor KV