ಸೈಕೋಪತಿ ಡೌಟ್‌ಗೆ ಮಹಿಳೆ ಸೌಂದರ್ಯವೇ ಹಾಳು! – ಮೈತುಂಬಾ ತನ್ನ ಹೆಸರು ಟ್ಯಾಟೂ ಹಾಕಿಸಿದ ಅನುಮಾನ ಪಿಶಾಚಿ!

ಸೈಕೋಪತಿ ಡೌಟ್‌ಗೆ ಮಹಿಳೆ ಸೌಂದರ್ಯವೇ ಹಾಳು! – ಮೈತುಂಬಾ ತನ್ನ ಹೆಸರು ಟ್ಯಾಟೂ ಹಾಕಿಸಿದ ಅನುಮಾನ ಪಿಶಾಚಿ!

ಪ್ರೀತಿಗೆ ಕಣ್ಣಿಲ್ಲ.. ಪ್ರೀತಿ ಕುರುಡು ಅನ್ನುತ್ತಾರೆ.  ಕೆಲವೊಮ್ಮೆ ಅತಿಯಾದ ಪ್ರೀತಿ ಹಿಂಸೆ ಅನ್ನಿಸುವುದು ಇದೆ. ತಾನು ಪ್ರೀತಿಸಿದವರು ಎಲ್ಲಿ ದೂರ ಆಗುತ್ತಾರೆ ಅನ್ನೋ ಭಯಕ್ಕೆ ತಮ್ಮ ಅರ್ಧಾಂಗಿಯನ್ನು ಕಂಟ್ರೋಲ್‌ನಲ್ಲಿಟ್ಟುಕ್ಕೊಳುವುದನ್ನ ನಾವು ಕೇಳಿದ್ದೇವೆ. ಇದೀಗ ಇಲ್ಲೊಂದು ಕಡೆ ಪ್ರೀತಿ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕೌರ್ಯ ಮೆರೆದಿದ್ದಾನೆ. ಅನುಮಾನದ ಪಿಶಾಚಿ ಮಹಿಳೆ ದೇಹದಲ್ಲಿ ಬರೊಬ್ಬರಿ 250ಕ್ಕೂ ಹೆಚ್ಚು ಟ್ಯಾಟೂ ಹಾಕಿಸಿದ್ದಾನೆ.

ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆ ಕಡೆಗೂ ಸಕ್ಸಸ್! – ಹಾಸನ ಜನರ ನಿದ್ದೆಗೆಡಿಸಿದ್ದ ನರಹಂತಕ ಸೆರೆ!

ನೆದರ್‌ಲ್ಯಾಂಡ್‌ ಮೂಲದ ಜೋಕ್‌ ಎಂಬಾಕೆ ಟಾಕ್ಸಿಕ್ ಬಾಂಧವ್ಯದಲ್ಲಿ ನಲುಗಿ ಹೋಗಿ, ಪ್ರಾಣಾಪಾಯದಿಂದ ಹೊರಬಂದಿದ್ದಾಳೆ. ಮಾಜಿ ಗಂಡನಿಂದ ತಪ್ಪಿಸಿಕೊಂಡು ಬಂದು ಹೊಸ ಜೀವನ ಶುರುಮಾಡಿದ್ದಾಳೆ.

ಏನಿದು ಘಟನೆ?

ಜೋಕ್‌ ತನ್ನ ಸಂಗಾತಿ ಜೊತೆ ಹಲವು ವರ್ಷಗಳಿಂದ ಬದುಕುತ್ತಿದ್ದಳು. ಆದ್ರೆ ಆತ ಪ್ರೀತಿ ಹೆಸರಿನಲ್ಲಿ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದ. ಯಾರೊಂದಿಗೂ ಜೋಕ್‌ ಮಾತನಾಡುವಂತಿಲ್ಲ.. ಯಾರನ್ನೂ ಮೀಟ್‌ ಮಾಡುವಂತಿಲ್ಲ.. ಎಲ್ಲೂ ಹೋಗುವಂತಿರಲಿಲ್ಲ. ಒಂದ್ವೇಳೆ ಆಕೆ ಮನೆಯಿಂದ ಆಚೆ ಹೋದ್ರೆ ಪಾಗಲ್‌ ಪ್ರೇಮಿ ಆಕೆಗೆ ನರಕ ತೋರಿಸುತ್ತಿದ್ದ. ಆಕೆಯನ್ನ ಅನುಮಾನದಿಂದ ನೋಡುತ್ತಿದ್ದ ಕ್ರೂರಿ ಪ್ರೇಮಿ ತನ್ನ ಹೆಸರನ್ನ ಜೋಕ್‌ ದೇಹದ ಮೇಲೆ ಹಚ್ಚೆ ಹಾಕಿಸಿದ್ದ. ಒಂದಲ್ಲ.. ಎರಡಲ್ಲ.. 250ಕ್ಕೂ ಹೆಚ್ಚು ಟ್ಯಾಟೂನ ಮುಖ, ಕುತ್ತಿಗೆ, ಕೈಗಳು, ಬೆನ್ನು ಸೇರಿದ ದೇಹ ತುಂಬಾ ಹಚ್ಚೆ ಹಾಕಿಸಿದ್ದ. ಕಡೆಗೊಂದು ದಿನ ಜೋಕ್‌ ಪಾಗಲ್‌ ಪ್ರೇಮಿ ಕಪಿಮುಷ್ಠಿಯಿಂದ ಹೊರ ಬಂದಿದ್ದಾಳೆ.

ದೀರ್ಘಕಾಲದವರೆಗೆ ಈ ನರಕವನ್ನು ಅನುಭವಿಸಿದ ಜೋಕ್‌  ಒಂದು ದಿನ ಧೈರ್ಯ ತಂದುಕೊಂಡು ಅವನಿಂದ ತಪ್ಪಿಸಿಕೊಂಡಳು. ನಂತರ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ತನ್ನ ಮೇಲೆ ನಡೆದ ಅನ್ಯಾಯಗಳನ್ನು ವಿವರಿಸಿದ್ದಾಳೆ. ಅಷ್ಟೇ ಅಲ್ಲ ತನ್ನ ಮೈಮೇಲೆ ಇದ್ದ ಟ್ಯಾಟೂಗಳನ್ನ ರಿಮೂವ್‌ ಮಾಡಿಸಿದ್ದಾಳೆ. ಇದೀಗ ತನ್ನ ತನ್ನ ಜೀವನದ ಕಹಿ ಘಟನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿಗೆ ತಿಳಿಸಿದ್ದಾಳೆ.

Shwetha M