ಬಳ್ಳಾರಿಯಲ್ಲಿ ಪ್ಯಾರಾಚೂಟ್ ತರಬೇತಿ ವೇಳೆ 50 ಅಡಿ ಎತ್ತರದಿಂದ ಬಿದ್ದ ಇಬ್ಬರು ಸೈನಿಕರು!

ಬಳ್ಳಾರಿಯಲ್ಲಿ ಸೈನಿಕರ ಪ್ಯಾರಾಚೂಟ್ ತರಬೇತಿ ವೇಳೆ ಅವಘಡವೊಂದು ಸಂಭವಿಸಿದೆ. ತರಬೇತಿ ವೇಳೆ 50 ಅಡಿ ಎತ್ತರದಿಂದ ಇಬ್ಬರು ಸೈನಿಕರು ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: 14-6=1.. ಗುಡ್ ಬೈ KKR – ಗ್ರೀನ್ ಸಿಗ್ನಲ್ ಸಿಕ್ರೂ ಗೆಲ್ಲೋಕಾಗ್ತಿಲ್ವಾ?
ಬಳ್ಳಾರಿ ಹೊರವಲಯದ ಪಿ.ಡಿ ಹಳ್ಳಿ ಭಾಗದಲ್ಲಿ ಈ ಘಟನೆ ನಡೆದಿದೆ. ಇಂದು ಪಿಡಿ ಹಳ್ಳಿ ಬಳಿ ಸೈನಿಕರಿಗೆ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಅವಘಡ ನಡೆದಿದೆ. ತರಬೇತಿ ನಿರತ ಸೇನಾ ಸಿಬ್ಬಂದಿ ಚಿನ್ನರಾಜ್ (25) ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಇಬ್ಬರಿಗೂ ಕಾಲಿನ ಮೂಳೆ ಮುರಿದು ಗಂಭೀರ ಗಾಯಗಾಯವಾಗಿದೆ.
ಇಂದು (ಏ.18) ಬೆಳಿಗ್ಗೆ 417 ಸೈನಿಕರಿಂದ ಪ್ಯಾರಾಚೂಟ್ ತರಬೇತಿ ನಡೆಯುತ್ತಿತ್ತು. ತರಬೇತಿ ವೇಳೆ ಪ್ಯಾರಾಚೂಟ್ ನಿಂದ ಇಬ್ಬರು ಪ್ಯಾರಾಚೂಟ್ ತರಬೇತಿ ಸೈನಿಕರು ಕೆಳಕ್ಕೆ ಬಿದ್ದಿದ್ದಾರೆ. ಆರಂಭದಲ್ಲಿ ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಐಟಿಐ ಕಾಲೇಜು ಮೈದಾನದಿಂದ ಬೆಂಗಳೂರಿಗೆ ಸೈನಿಕರನ್ನು ಏರ್ಲಿಫ್ಟ್ ಮಾಡಲಾಯಿತು. ಈ ಬಗ್ಗೆ ಸೇನೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ನೋಡಿರಿ

