ಕೋಲ್ಕತ್ತಾ ಪ್ಲೇ ಆಫ್ ಕನಸು ಭಗ್ನ!? – RR ವಿರುದ್ಧ ಕೊಚ್ಚಿ ಹೋಗುತ್ತಾ KKR?
ಶ್ರೇಯಸ್ Vs ಪಂತ್.. ಗೆಲುವು ಯಾರಿಗೆ?

ಕೋಲ್ಕತ್ತಾ ಪ್ಲೇ ಆಫ್ ಕನಸು ಭಗ್ನ!? –  RR ವಿರುದ್ಧ ಕೊಚ್ಚಿ ಹೋಗುತ್ತಾ KKR?ಶ್ರೇಯಸ್ Vs ಪಂತ್.. ಗೆಲುವು ಯಾರಿಗೆ?

ಇವತ್ತು ಪಾಯಿಂಟ್ಸ್‌ ಟೇಬಲ್‌ನಲ್ಲಿ ಟಾಪ್‌ನಲ್ಲಿರೋ ಪಂಜಾಬ್ ಮತ್ತು ರಾಜಸ್ತಾನ್‌ ರಾಯಲ್ಸ್‌  ಪಾಯಿಂಟ್ಸ್‌ ಟೇಬಲ್‌ನಲ್ಲಿ ಲಾಸ್ಟ್‌ನಲ್ಲಿ ಕೆಕೆಆರ್ ಮತ್ತು ಲಕ್ನೋ ವಿರುದ್ಧ ಮುಗಿ ಬೀಳುವುದ್ದಕ್ಕೆ ಕಾಯ್ತಾ ಇವೆ..ಯಾಕಂದ್ರೆ ಒಂದ್ಕಡೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಕೆಕೆಆರ್‌ ಮತ್ತು ಪಂತ್‌ ಪಡೆಗೆ ಇದೆೆ. ಇರೋ ಸ್ಥಾನವನ್ನ ಉಳಿಸಿಕೊಂಡು ಗೆಲುವಿನ ಓಟ ಮುಂದವರಿಸಿಕೊಂಡು ಹೋಗುವ ಜವಾಬ್ದಾರಿ  ರಾಜಸ್ಥಾನ್ ರಾಯಲ್ಸ್ ಮತ್ತು PBKSಗೆ ಇದೆ. ಹಾಗಿದ್ರೆ ಇವತ್ತಿನ ಎರಡು ಪಂದ್ಯದಲ್ಲಿ ಯಾವ ಟೀಂ ಗೆಲ್ಲುತ್ತೆ? ಪಿಚ್ ರಿಪೋರ್ಟ್‌ ಏನ್ ಹೇಳುತ್ತೆ? ಪಾಯಿಂಟ್ಸ್‌ನಲ್ಲಿ ಟಾಪ್‌ನಲ್ಲಿರೋ ಟೀಂಗಳ ಗೆಲುವಿನ ಓಟಕ್ಕೆ ಬ್ರೇಕ್ ಬೀಳುತ್ತಾ ಅನ್ನೋದ್ದನ್ನ ನೋಡೋಣ.

 KKR VS RR ಗೆಲುವು ಯಾರಿಗೆ?

ಇವತ್ತು ಮೊದಲ ಪಂದ್ಯ 3.30ಕ್ಕೆ ನಡೆಯಲಿದೆ. ಇದು ಸ್ಟ್ರಾಂಗ್ Vs ವೀಕ್ ಕಾಳಗ ಆಗಲಿದೆ.  RR ತಂಡ ಬಹಳ ಸ್ಟ್ರಾಂಗ್ ಆಗಿದೆ. ಇವರು 5 ಮ್ಯಾಚ್‌ಗಳಲ್ಲಿ 4 ಗೆಲುವುಗಳೊಂದಿಗೆ 8 ಪಾಯಿಂಟ್ಸ್ ಹೊಂದಿದ್ದಾರೆ.  ಆರ್‌ಆರ್‌ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಖತ್ ಸ್ಟ್ರಾಂಗ್ ಇದೆ. ಕಳೆದ ಪಂದ್ಯದಲ್ಲಿ ಅಂದ್ರೆ SRH ವಿರುದ್ಧ ಒಂದು ಸೋಲು ಬಿಟ್ರೆ, ಮತ್ತೆಲ್ಲಾ ಪಂದ್ಯದಲ್ಲಿ ರಾಜಸ್ಥಾನ್ ಸೂಪರ್ ಡೂಪರ್ ಪ್ರದರ್ಶನ ನೀಡಿದೆ.  ಟಾಪ್ ಆರ್ಡರ್ ಸೂಪರ್ ಆಗಿದೆ, ಯಶಸ್ವಿ ಜೈಸ್ವಾಲ್  ಮತ್ತು ವೈಭವ್ ಸೂರ್ಯವಂಶಿ ಜೋಡಿ ಬಹಳ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ.  ರಿಯಾನ್ ಪರಾಗ್, ಹೆಟ್ಮೈಯರ್, ಜುರೆಲ್ ಮಿಡಲ್ ಆರ್ಡರ್‌ನಲ್ಲಿ ಬ್ಯಾಟಿಂಗ್ ಡೆಪ್ತ್ ಚೆನ್ನಾಗಿದೆ. ಬೌಲಿಂಗ್‌ನಲ್ಲಿ ಆರ್ಚರ್, ಬಿಷ್ಣೋಯ್, ಸಂದೀಪ್ ಶರ್ಮಾ, ಬರ್ಗರ್ ಸಖತ್ ಆಗಿದೆ..

 ಬ್ಯಾಟಿಂಗ್ ಬೌಲಿಂಗ್‌ನಲ್ಲೂ ಕೆಕೆಆರ್ ವೀಕ್‌

ಇನ್ನೂ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಕೆಕೆಆರ್ ಸಖತ್ ವೀಕ್‌ ಆಗಿದೆ. ಈ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್‌ ಹೀನಾಯ ಪ್ರದರ್ಶನ ನೀಡಿದೆ. —.ಕೆಕೆಆರ್ ಇಲ್ಲಿ ತನಕ್ಕೆ 6 ಪಂದ್ಯ ಆಡಿದ್ದು ಒಂದೇ ಒಂದು ಮ್ಯಾಚ್ ಗೆದ್ದಿಲ್ಲ. 6 ಪಂದ್ಯದದಲ್ಲಿ ಒಂದು ಪಂದ್ಯ ಪಂಜಾಬ್ ವಿರುದ್ಧ ಮಳೆಯಿಂದ ರದ್ದಾದ ಕಾರಣ ಕೇವಲ ಒಂದು ಪಾಯಿಂಟ್ಸ್‌ ಮಾತ್ರ ಕೆಕೆಆರ್ ಪಡೆದಿದೆ. ಇಂದಿನ ಪಂದ್ಯದಲ್ಲೂ ಆರ್‌ಆರ್‌ ವಿರುದ್ಧ ಕೆಕೆಆರ್ ಗೆಲ್ಲುವುದು ಬಹುತೇಕ ಡೌಟ್‌..  ಪಾಯಿಂಟ್ಸ್ ಟೇಬನ್‌ಲ್ಲಿ ಕೊನೆಯಲ್ಲಿರೋ ಕೆಕೆಆರ್‌ ಪ್ಲೇ ಆಫ್‌ ತಲುಪುದ್ದಕ್ಕೆ ಮ್ಯಾಜಿಕ್ ಮಾಡಬೇಕಷ್ಟೇ.. ಅಜಿಂಕ್ಯ ರಹಾನೆ   ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್   ತಂಡವು ಐಪಿಎಲ್  ಈ ಸೀಸನ್‌ನಲ್ಲಿ  ಕಳಪೆ ಪ್ರದರ್ಶನ ನೀಡಿದ್ದು, ಇಂದಿನ ಪಂದ್ಯದಲ್ಲಿ ಆರ್‌ಆರ್‌ ವಿರುದ್ಧ ಗೆಲ್ಲುತ್ತಾ ಸೋಲುತ್ತಾ ಅನ್ನೋ ಕುತೂಹಲ ಹೆಚ್ಚಿದೆ..

 ಕಿಂಗ್ಸ್ Vs ಲಕ್ನೋ ಫೈಟ್.. ಗೆಲುವು ಯಾರಿಗೆ?

ಇನ್ನು ಇಂದಿನ ಎರಡನೇ ಪಂದ್ಯ ನ್ಯೂ ಚಂಡೀಗಢ್‌ನಲ್ಲಿ ನಡೆಯಲಿದ್ದು,  ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್‌ ನಡುವೆ ರೋಚಕ ಕಾದಾಟ ನಡೆಯಲಿದೆ. ಪಂಜಾಬ್ ಕಿಂಗ್ಸ್ ಆಡಿರೋ ಎಲ್ಲಾ ಪಂದ್ಯವನ್ನೂ ಗೆದ್ದು ಪಾಯಿಂಟ್ಸ್ ಟೇಬಲ್‌ ಟಾಪ್‌ನಲ್ಲಿದೆ. ಮಳೆಯಿಂದ ಒಂದು ಪಂದ್ಯ ರದ್ದಾಗಿದ್ದು ಬಿಟ್ರೆ, ಉಳಿದ ಎಲ್ಲಾ ಪಂದ್ಯ ಗೆದ್ದಿದೆ. ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಮಿಂಚಿನ ಆಟವನ್ನ ಪಂಜಾಬ್ ಆಡುತ್ತಿದೆ. ಕಿಂಗ್ಸ್ ಅವರ   ಬ್ಯಾಟಿಂಗ್ ಆಗ್ರೆಸಿವ್ ಆಗಿದ್ರೆ ಬೌಲಿಂಗ್ ಎಫೆಕ್ಟೀವ್ ಆಗಿದೆ.

ಇನ್ನು ಈ ಸೀಸನಲ್ಲೂ ಲಕ್ನೋ ನಾಯಕ ರಿಷಭ್ ಪಂತ್ ಫೆಲ್ಯೂರ್ ಆಗಿದ್ದಾರೆ. ತಂಡ ಗೆಲ್ಲಿಸೋಕೆೆ ಕೊಡುಗೆ ನೀಡಬೇಕಿದ್ದ ಪಂತ್‌, ರನ್‌ಗಳಿಸೋಕೆ ಹೆಣಗಾಡುತ್ತಿದ್ದಾರೆ. ಎಲ್‌ಎಸ್‌ಜಿ ಆಡಿರೋ 5 ಪಂದ್ಯದಲ್ಲಿ ಕೇವಲ ಎರಡು ಪಂದ್ಯವನ್ನ ಮಾತ್ರ ಗೆದ್ದಿದೆ. ಇದು LSG ಮಾಲೀಕರಾದ ಸಂಜೀವ್ ಗೋಯೆಂಕಾ ಅವರ ಸಿಟ್ಟಿಗೆ ಕಾರಣವಾಗಿದೆ.. ಪವರ್‌ಪ್ಲೇ ಮತ್ತು ಟಾಪ್ ಆರ್ಡರ್ ಅಸ್ಥಿರತೆ ಸೋಲಿಗೆ ಕಾರಣ ಎನ್ನಬಹುದು. ಪವರ್‌ಪ್ಲೇನಲ್ಲಿ ಆಗಾಗ್ಗೆ ವಿಕೆಟ್ ಕಳೆದುಕೊಳ್ಳುವುದು ಲಕ್ನೋಗೆ ಶಾಪವಾಗಿದೆ.  ಮಿಚೆಲ್ ಮಾರ್ಷ್, ಐಡನ್ , ನಿಕೋಲಸ್ ಪೂರನ್, ರಿಷಭ್ ಪಂತ್ ಇತ್ಯಾದಿ ಸ್ಟಾರ್ ಬ್ಯಾಟರ್‌ಗಳಿದ್ದರೂ ದೀರ್ಘ ಪಾರ್ಟ್ನರ್‌ಶಿಪ್ ಕೊರತೆ ಎದ್ದು ಕಾಣುತ್ತಿದೆ. ಪೂರನ್ ಈ ಸೀಸನ್‌ನಲ್ಲಿ ಇನ್ನೂ ದೊಡ್ಡ ಇಂಪ್ಯಾಕ್ಟ್ ಮಾಡಿಲ್ಲ. ಇಂದಿನ ಪಂದ್ಯದಲ್ಲಿ ಪಂಜಾಬ್‌ಗೆ ಲಕ್ನೋ ಬಿಗ್ ಫೈಟ್ ನೀಡಿದ್ರೂ ಕೂಡ ಪಂಜಾಬ್‌ ಗೆಲ್ಲೋ ಸಾಧ್ಯತೆ ಹೆಚ್ಚಿದೆ.

Kishor KV