ರಾಜ್ಯದ ಜನರಿಗೆ ದರ ಏರಿಕೆ ಶಾಕ್! – ವಿದ್ಯುತ್ ದರ ಏರಿಕೆ ಯೂನಿಟ್ಗೆ 56 ಪೈಸೆ ಹೆಚ್ಚಳ!

ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಶಾಕಿಂಗ್ ಸುದ್ದಿಯಿದೆ. ಇದೀಗ ವಿದ್ಯುತ್ ದರವೂ ಏರಿಕೆಯಾಗಲಿದೆ.
ಇದನ್ನೂ ಓದಿ: ಟ್ರೆಕ್ಕಿಂಗ್ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!
ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ. ಒಂದು ಯೂನಿಟ್ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್ಸಿ ಆದೇಶ ಹೊರಡಿಸಿದೆ. ನೂತನ ದರ ಮೇ ತಿಂಗಳಿನಿಂದ ಅನ್ವಯ ಆಗಲಿದೆ.
ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ನಷ್ಟದ ಭೀತಿಯಿಂದ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. 2024-25ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಮಾರಾಟದಿಂದ ಆಯೋಗವು ಸುಮಾರು 34,084 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ವಾಸ್ತವದಲ್ಲಿ 32,019 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದ್ದು, ಸುಮಾರು 2,068 ಕೋಟಿ ರೂಪಾಯಿಗಳಷ್ಟು ಬೃಹತ್ ಆದಾಯದ ಕೊರತೆಯುಂಟಾಗಿದೆ. ಈ ಆರ್ಥಿಕ ಕೊರತೆಯನ್ನು ಸರಿದೂಗಿಸಲು ಗ್ರಾಹಕರಿಂದಲೇ ಹಣ ಸಂಗ್ರಹಿಸಲು ಆಯೋಗವು ಅನುಮತಿ ನೀಡಿದೆ. ಇದರಿಂದ ಗೃಹಬಳಕೆ ಗ್ರಾಹಕರ ತಿಂಗಳ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿ ಹೊರೆ ಬೀಳಲಿದೆ. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಇದು ಮತ್ತೊಂದು ಆರ್ಥಿಕ ಒತ್ತಡವಾಗಲಿದೆ.

ನೋಡಿರಿ

