GT ವಿರುದ್ಧವೂ ಸೋಲು, ಗೆಲುವಿನ ಖಾತೆ ತೆರೆಯದ KKR – ಸತತ ಐದು ಸೋಲಿನಿಂದ ಕಂಗೆಟ್ಟ ಕೋಲ್ಕತಾ

ಕಗಿಸೊ ರಬಾಡ ಮಾರಕ ಬೌಲಿಂಗ್ ಹಾಗೂ ಶುಭಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆದ್ದು ಬೀಗಿತು. ಈ ಗೆಲುವಿನ ಮೂಲಕ ಶುಭಮನ್ ಗಿಲ್ ನಾಯಕತ್ವದ ಜಿಟಿ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಮೊದಲ ಗೆಲುವಿಗಾಗಿ ಕಾಯುತ್ತಿದ್ದ ಕೆಕೆಆರ್ನ ಸೋಲಿನ ಸರದಾರನಾಗಿ ಮುಂದುವರಿದಿದೆ. ಇದು ಕೋಲ್ಕತಾಗೆ ಐದನೇ ಸೋಲಾಯಿತು.
ಶುಕ್ರವಾರ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಕೆಆರ್ ನೀಡಿದ್ದ 181 ರನ್ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ, ಶುಭಮ್ ಗಿಲ್ (86 ರನ್) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ 19.4 ಓವರ್ಗಳಿಗೆ 5 ವಿಕೆಟ್ಗಳ ನಷ್ಟಕ್ಕೆ 181 ರನ್ ಗಳಿಸಿ ಗೆದ್ದು ಬೀಗಿತು. ಇದು ಜಿಟಿ ತಂಡಕ್ಕೆ ಮೂರನೇ ಗೆಲುವಾಗಿದೆ.
ಇದನ್ನೂ ಓದಿ: RCB ಡಿಜೆಗೆ ಉರಿದುಬಿದ್ದ CSK – ದೋಸೆ, ಇಡ್ಲಿ, ಚಟ್ನಿ.. ಟ್ರೋಲ್ ಯಾಕೆ?
ಜಿಟಿ ಪರ ಬ್ಯಾಟಿಂಗ್ನಲ್ಲಿ ಗಮನ ಸೆಳೆದಿದ್ದು ನಾಯಕ ಶುಭಮನ್ ಗಿಲ್. ಅವರು ಒಂದು ತುದಿಯಲ್ಲಿ ನಿಂತು ದೀರ್ಘಾವಧಿ ಬ್ಯಾಟ್ ಮಾಡಿದರು. ಅವರು ಆಡಿದ 50 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 86 ರನ್ಗಳನ್ನು ಚಚ್ಚಿದರು. ಆ ಮೂಲಕ ಗುಜರಾತ್ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರ ಜೊತೆಗೆ ಸಾಯಿ ಸುದರ್ಶನ್ 22 ರನ್ ಹಾಗೂ ಜೋಸ್ ಬಟ್ಲರ್ 25 ರನ್ಗಳ ಕೊಡುಗೆಯನ್ನು ನೀಡಿದರು. ಕೆಕೆಆರ್ ಪರ ವರುಣ್ ಚಕ್ರವರ್ತಿ ಎರಡು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅರ್ಧಶತಕ ಬಾರಿಸಿದ ಕ್ಯಾಮೆರಾನ್ ಗ್ರೀನ್ ಅವರನ್ನು ಹೊರತುಪಡಿಸಿ ಇನ್ನುಳಿದ ಪ್ರಮುಖ ಬ್ಯಾಟ್ಸ್ಮನ್ಗಳು ವಿಫಲರಾದರು. ಇದರ ಪರಿಣಾಮ ಕೆಕೆಆರ್ 200ರ ಗಡಿ ದಾಟುವಲ್ಲಿ ವಿಫಲವಾಯಿತು ಹಾಗೂ ತನ್ನ ಪಾಲಿನ 20 ಓವರ್ಗಳಿಗೆ 180 ರನ್ಗಳಿಗೆ ಆಲ್ಔಟ್ ಆಯಿತು. ಬಳಿಕ ಎದುರಾಳಿ ಜಿಟಿ ತಂಡಕ್ಕೆ 180 ರನ್ಗಳ ಗುರಿಯನ್ನು ನೀಡಿತು

ನೋಡಿರಿ

