ವಿಜಯನಗರ ಗತವೈಭವಕ್ಕೆ ಕೌಂಟ್ ಡೌನ್ – ಹಂಪಿ ಉತ್ಸವದಲ್ಲಿ ಈ ಸಲ ಏನೆಲ್ಲಾ ವಿಶೇಷತೆ..!?

ವಿಜಯನಗರ ಗತವೈಭವಕ್ಕೆ ಕೌಂಟ್ ಡೌನ್ – ಹಂಪಿ ಉತ್ಸವದಲ್ಲಿ ಈ ಸಲ ಏನೆಲ್ಲಾ ವಿಶೇಷತೆ..!?

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮೂರು ದಿನಗಳ ಸಂಭ್ರಮಕ್ಕೆ ಇವತ್ತು ಸಂಜೆ ಸಿಎಂ ಚಾಲನೆ ನೀಡಲಿದ್ದಾರೆ. ಲಕ್ಷಾಂತರ ಜನ ಗತಕಾಲದ ಕ್ಷಣವನ್ನ ಕಣ್ತುಂಬಿಕೊಳ್ಳೋಕೆ ಕಾತರದಿಂದ ಕಾಯ್ತಿದ್ದಾರೆ.

ಇಂದಿನಿಂದ ಮೂರು ದಿನಗಳ ಹಂಪಿ ಉತ್ಸವ ನಡೆಯಲಿದೆ. ಸಂಜೆ 5.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಹಂಪಿ ಉತ್ಸವ ಕಾರ್ಯಕ್ರಮ ಹಿನ್ನೆಲೆ ಹಂಪಿಯ ಎಲ್ಲಾ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿದೆ.

ಇದನ್ನೂ ಓದಿ : 4 ಅಂತಸ್ತಿನ ಕಟ್ಟಡ ಕುಸಿತ – ಬಾಲಕನನ್ನು ರಕ್ಷಿಸಿದ್ದೇ ಕಾರ್ಟೂನ್!

ಉತ್ಸವದ ಪ್ರಧಾನ ಕಾರ್ಯಕ್ರಮ ನಡೆಯುವ ಗಾಯತ್ರಿ ಪೀಠದ ಮುಖ್ಯವೇದಿಕೆಯನ್ನ ಹೇಮಕೂಟ ಪರ್ವತದ ಮಾದರಿಯಲ್ಲಿ ನಿರ್ಮಿಸಲಾಗಿದೆ. 110 ಅಡಿ ಉದ್ದ, 80 ಅಡಿ ಅಗಲದ ವೇದಿಕೆಯನ್ನ ಫೈಬರ್​ನಿಂದ ರೆಡಿ ಮಾಡಲಾಗಿದೆ. ಹಾಗೇ ಹಂಪಿವಿರೂಪಾಕ್ಷ ದೇವಸ್ಥಾನ, ಎದುರು ಬಸವಣ್ಣ ಮಂಟಪ ಹಾಗೂ ಕಾಳುಗಣಪ ಸ್ಮಾರಕದ ಬಳಿ ಇರತೆ ಮೂರು ವೇದಿಕೆಗಳನ್ನ ನಿರ್ಮಿಸಲಾಗಿದೆ. ಏಕಕಾಲಕ್ಕೆ 55 ಸಾವಿರ ಜನ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೈಲೆಟ್ ಆಗಲಿವೆ. ಹೊರರಾಜ್ಯ, ರಾಜ್ಯ ಸೇರಿದಂತೆ ಸುಮಾರು 270 ಕಲಾತಂಡಗಳ 6 ಸಾವಿರ ಕಲಾವಿದರು ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಾಗೇ ಸ್ಯಾಂಡಲ್​ವುಡ್, ಬಾಲಿವುಡ್ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನ ನಡೆಸಿಕೊಡಲಿದ್ದಾರೆ.

ಮೂರು ದಿನಗಳ ವೈಭವೋಪೇತ ಉತ್ಸವದಲ್ಲಿ 8ರಿಂದ 9 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ  ಪೊಲೀಸ್ ಭದ್ರಕೋಟೆ ನಿರ್ಮಿಸಲಾಗಿದೆ. 7 ಡಿವೈಎಸ್​ಪಿ, 33 ಇನ್ಸ್​ಪೆಕ್ಟರ್ಸ್, 70 ಸಬ್ ಇನ್ಸ್​ಪೆಕ್ಟರ್ಸ್, 191 ಎಎಸ್​ಐ, 1074 ಕಾನ್ಸ್​ಟೇಬಲ್ಸ್​, 600 ಗೃಹರಕ್ಷಕ ದಳದ ಸಿಬ್ಬಂದಿ, 4 ಕೆಎಸ್​ಆರ್​ಪಿ, 1 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. 113 ಮಹಿಳಾ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

suddiyaana