ಮೊಬೈಲ್ ಬಳಸಿದ RR ಮ್ಯಾನೇಜರ್ ರೋಮಿ ಭಿಂದರ್ಡಗೆ ದಂಡ – BCCI ಕೊಟ್ಟ ಎಚ್ಚರಿಕೆ ಏನು?

ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ವ್ಯವಸ್ಥಾಪಕ ರೋಮಿ ಭಿಂದರ್ಡ ಗೌಟ್ನಲ್ಲಿ ಕುಳಿತು ಫೋನ್ ಬಳಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಸಿಸಿಐ ಈ ಆರೋಪದ ಬಗ್ಗೆ ತನಿಖೆಗೆ ಆದೇಶ ಹೊರಡಿಸಿತ್ತು. ಇದೀಗ ತನಿಖೆ ಪೂರ್ಣವಾಗಿದ್ದು, ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ ಬಳಿಸಿದ್ದ ಭಿಂದರ್ಗೆ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಈ ಕೃತ್ಯವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ. ಅದೃಷ್ಟವೆಂಬಂತೆ ಭಿಂದರ್ ಪಕ್ಕ ಕುಳಿತು ಅವರು ಮೊಬೈಲ್ ಬಳಸುವುದನ್ನು ನೋಡುತ್ತಾ ಕುಳಿತಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಶಿಕ್ಷೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಇದನ್ನೂ ಓದಿ : ಪಂಜಾಬ್ ಪಂಚ್.. ಮುಂಬೈ ಕೋಟೆ ಛಿದ್ರ – ಸೂಪರ್ ಸ್ಟಾರ್ಸ್ ನಂಬಿ ಕೆಟ್ಟ MI
ಏಪ್ರಿಲ್ 10 ರಂದು ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಸಮಯದಲ್ಲಿ, ರೋಮಿ ಭಿಂದರ್ ಡಗೌಟ್ನಲ್ಲಿ ಕುಳಿತು ತಮ್ಮ ಫೋನ್ ಬಳಸುತ್ತಿದ್ದರು. ಐಪಿಎಲ್ ನಿಯಮದ ಪ್ರಕಾರ, ತಂಡದ ಆಟಗಾರರು ಹಾಗೂ ಸದಸ್ಯರಿಗೆ ಡ್ರೆಸ್ಸಿಂಗ್ ಕೋಣೆಗೆ ಫೋನ್ಗಳನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಆದರೆ ಡಗೌಟ್ನಲ್ಲಿ ಮೊಬೈಲ್ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಅದಕ್ಕಾಗಿಯೇ ರೋಮಿ ಭಿಂದರ್ ವಿರುದ್ಧ ತನಿಖೆ ನಡೆಸಬೇಕಾಯಿತು.
ರೋಮಿ ಭಿಂದರ್ ಡಗೌಟ್ನಲ್ಲಿ ಫೋನ್ ಬಳಸುವುದಕ್ಕೆ ಬಿಸಿಸಿಐನಿಂದ ವಿನಾಯಿತಿ ಪಡೆದಿದ್ದಾರೆ ಎಂಬುದು ತಿಳಿದುಬಂದಿದೆ. ಇದಕ್ಕೆ ಕಾರಣ ಅವರ ಆರೋಗ್ಯ. ವಾಸ್ತವವಾಗಿ, ಭಿಂದರ್ ಐಪಿಎಲ್ಗೆ ಮೊದಲು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಆರೋಗ್ಯ ಕಾರಣಗಳಿಂದಾಗಿ, ಅವರು ಆಗಾಗ್ಗೆ ತಮ್ಮ ವೈದ್ಯರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಆದಾಗ್ಯೂ ಭಿಂದರ್ ಫೋನ್ ಬಳಕೆ ಮಾಡಿದ್ದು ಐಪಿಎಲ್ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿದ್ದು, ಇದರ ಪರಿಣಾಮವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ನೋಡಿರಿ

