RED HOT ಫಾರ್ಮ್ ನಲ್ಲಿ RCB – DCಗೆ ಹ್ಯಾಟ್ರಿಕ್ ಸೋಲು ಫಿಕ್ಸ್?
ಡೆಲ್ಲಿ ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಒಂದ್ಕಡೆ ರೆಡ್ ಹಾಟ್ ಫಾರ್ಮ್ನಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಇನ್ನೊಂದ್ಕಡೆ ಬ್ಯಾಕ್ ಟು ಬ್ಯಾಕ್ ಮ್ಯಾಚಸ್ ಸೋತಿರೋ ಡೆಲ್ಲಿ ಕ್ಯಾಪಿಟಲ್ಸ್.. ನಾಳೆ ಮಧ್ಯಾಹ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಎರಡೂ ತಂಡಗಳು ಮುಖಾಮುಖಿ ಆಗ್ತಿವೆ. ಹೋಂ ಪಿಚ್ನಲ್ಲಿ ಹ್ಯಾಟ್ರಿಕ್ ವಿಕ್ಟರಿ ಬಾರಿಸಿರೋ ಬೆಂಗಳೂರು ಈ ಮ್ಯಾಚನ್ನೂ ಗೆದ್ದು ಮತ್ತೆ ಟಾಪ್ ಆಫ್ ದಿ ಟೇಬಲ್ ಹೋಗೋಕೆ ಕಾಯ್ತಿದೆ.
ಇದನ್ನೂ ಓದಿ : ಹಾಸನದಲ್ಲಿ ಸೆರೆ ಹಿಡಿದು ಲಾರಿಗೆ ತುಂಬಿಸುವ ವೇಳೆ ಕಾಡಾನೆ ಎಸ್ಕೇಪ್ – ಆಪರೇಷನ್ ಫೆಲ್ಯೂರ್
ಚಿನ್ನಸ್ವಾಮಿ ಸ್ಟೇಡಿಯಂ ಹೇಳಿಕೇಳಿ ಬ್ಯಾಟರ್ಸ್ ಪ್ಯಾರಡೈಸ್ ಅಂತಾರೆ. ಈ ಸೀಸನ್ನ ಮೊದಲ ಎರಡು ಮ್ಯಾಚ್ಗಳಲ್ಲಿ ಇದು ಪ್ರೂವ್ ಆಗಿತ್ತು ಕೂಡ. ಎರಡೂ ಕಡೆಯ ತಂಡಗಳಿಂದ 200+ ಸ್ಕೋರ್ಸ್ ಬಂದಿತ್ತು. ಬಟ್ ಲಕ್ನೋ ವಿರುದ್ಧದ ಫೈಟಲ್ಲಿ ಬೌಲರ್ಸ್ ಡಾಮಿನೇಟ್ ಮಾಡಿದ್ರು. ಲಕ್ನೋ ತಂಡವನ್ನ ಆರ್ಸಿಬಿ 150 ಒಳಗೇ ಕಟ್ಟಿ ಹಾಕಿತ್ತು. ಌಂಡ್ ಲಕ್ನೋ ಕೂಡ ಬೆಂಗಳೂರಿನ ಐದು ವಿಕೆಟ್ಸ್ ಬೇಟೆಯಾಡಿದ್ರು. ಬಟ್ ಈಗ ಡೆಲ್ಲಿ ವಿರುದ್ಧ ಮಧ್ಯಾಹ್ನ ಮ್ಯಾಚ್ ಇರೋದ್ರಿಂದ ಹೆವಿ ಬಿಸಿಲಂತೂ ಇರುತ್ತೆ. ಪಂದ್ಯದ ವೇಳೆಗೆ 33 ಡಿಗ್ರಿ ಬಿಸಿಲಿನ ತಾಪಮಾನ ಇರುತ್ತೆ. ಸೋ ಪಿಚ್ ಹೇಗೆ ರಿಯಾಕ್ಟ್ ಮಾಡುತ್ತೆ ಅನ್ನೋದೂ ಮುಖ್ಯ ಆಗುತ್ತೆ. ಌಂಡ್ ಕಳೆದ ಐದು ಪಂದ್ಯಗಳಲ್ಲಿ ಚಿನ್ನಸ್ವಾಮಿಯಲ್ಲಿ ಪೇಸ್ ಬೌಲರ್ಗಳೇ ಡಾಮಿನೇಟ್ ಮಾಡಿರೋದು.
ಚಿನ್ನಸ್ವಾಮಿಯಲ್ಲಿ ಪೇಸ್ ಬೌಲರ್ ಗಳದ್ದೇ ಪಾರುಪತ್ಯ!
ಚಿನ್ನಸ್ವಾಮಿ ಸ್ಟೇಡಿಯಂ ಬೌಲರ್ಗಳ ಪಾಲಿಗೆ ಕಬ್ಬಿಣದ ಕಡಲೆ. ಇಲ್ಲಿನ ಆವರೇಜ್ ಸ್ಕೋರ್ 203 ಇದೆ. ಫ್ಲಾಟ್ ಡೆಕ್ ಇರೋದ್ರಿಂದ ಶಾರ್ಟ್ ಬೌಂಡರೀಸ್ ಜಾಸ್ತಿ ಸಿಗುತ್ತೆ. ಬ್ಯಾಟಿಂಗ್ ಫೇವರ್ ಜಾಸ್ತಿನೇ ಇರುತ್ತೆ. ಹೀಗಿದ್ರೂ ಈ ಮೈದಾನದಲ್ಲಿ ಪೇಸ್ ಬೌಲರ್ಗಳೇ ಡಾಮಿನೇಟ್ ಮಾಡಿರೋದು ಕ್ಲಿಯರ್ ಆಗಿ ಗೊತ್ತಾಗುತ್ತೆ. ಕಳೆದ ಐದು ಪಂದ್ಯಗಳ ಸ್ಟಾಟ್ಸ್ ನೋಡಿದಾಗ ಪೇಸ್ ಬೌಲರ್ಗಳು ಟೋಟಲ್ಲಾಗಿ 51 ವಿಕೆಟ್ಗಳನ್ನ ಬೇಟೆಯಾಡಿದ್ದಾರೆ. ಌಂಡ್ ಸ್ಪಿನ್ನರ್ಗಳಿಗೆ ಸಿಕ್ಕಿರೋದು ಕೇವಲ 12 ವಿಕೆಟ್ಸ್ ಮಾತ್ರ. ಹೀಗಾಗಿ ಡೆಲ್ಲಿ ವಿರುದ್ಧದ ಮ್ಯಾಚಲ್ಲೂ ಪೇಸ್ ಬೌಲರ್ಗಳೇ ಗೇಮ್ ಚೇಂಜರ್ಸ್ ಆಗ್ತಾರೆ. ಬೆಂಗಳೂರು ಪರ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಹಾಗೇ ಡಾಟ್ ಬಾಲ್ಸ್ ಸ್ಪೆಷಲಿಸ್ಟ್ ಜೋಶ್ ಹೇಜಲ್ವುಡ್ ಪೇಸ್ ಬೌಲಿಂಗ್ ವಿಭಾಗವನ್ನ ಲೀಡ್ ಮಾಡ್ತಾರೆ.
ಡೆಲ್ಲಿ ಬೇಟೆಗೆ ಹೀಗಿರುತ್ತಾ ಪ್ಲೇಯಿಂಗ್ 11?
ಫಿಲ್ ಸಾಲ್ಟ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ರೊಮ್ಯಾರಿಯೋ ಶೆಫರ್ಡ್
ಕೃನಾಲ್ ಪಾಂಡ್ಯ
ಸುಯಾಶ್ ಶರ್ಮಾ
ಭುವನೇಶ್ವರ್ ಕುಮಾರ್
ಜೋಶ್ ಹೇಜಲ್ ವುಡ್
ರಸಿಕ್ ಸಲಾಂ ದಾರ್
ಇಲ್ಲಿ ಕೊಹ್ಲಿಯವ್ರ ಇಲ್ನೆಸ್ ನೋಡಿಕೊಂಡು ಯಾರನ್ನ ಇಂಪ್ಯಾಪ್ಟ್ ಪ್ಲೇಯರ್ ಆಗಿ ಆಡಿಸಬೇಕು ಅನ್ನೋದನ್ನ ಡಿಸೈಡ್ ಮಾಡ್ತಾರೆ. ಲಾಸ್ಟ್ ಮ್ಯಾಚಲ್ಲಿ ಫೀವರ್, ನೀ ಇಂಜುರಿ ಇದ್ರೂ ಬ್ಯಾಟಿಂಗ್ ಮಾಡಿದ್ರು. ಚೇಸ್ ಕಿಂಗ್ ಕೊಹ್ಲಿ 1 ರನ್ನಿಂದ ಅರ್ಧಶತಕ ಮಿಸ್ ಮಾಡಿಕೊಂಡಿದ್ರು. ಹೀಗಾಗಿ ಈ ಪಂದ್ಯದಲ್ಲಿ ಎಲ್ಲರ ಕಣ್ಣು ಕೊಹ್ಲಿ ಮೇಲೆ ಇರುತ್ತೆ. ಇದು ಬೆಂಗಳೂರು ಕತೆ ಆದ್ರೆ ಅತ್ತ ಡೆಲ್ಲಿ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳೋ ಪ್ಲ್ಯಾನ್ ನಲ್ಲಿದೆ.
ಡೆಲ್ಲಿಗೆ ಗೆಲುವು ತಂದು ಕೊಡ್ತಾರಾ ಕೆಎಲ್ ರಾಹುಲ್?
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಅಂತಾ ಬಂದಾಗ ಕನ್ನಡಿಗರ ಕಣ್ಣೆಲ್ಲಾ ನಮ್ಮ ಕನ್ನಡದ ಕಂದ ಕೆಎಲ್ ರಾಹುಲ್ ಮೇಲೆ ಇರುತ್ತೆ. ಈ ಸೀಸನ್ನಲ್ಲಿ ಗುಜರಾತ್ ವಿರುದ್ಧ ಡೆಲ್ಲಿ ಪರ 92 ರನ್ಸ್ ಬಂದಿದ್ದು ಬಿಟ್ರೆ ಉಳಿದ ಮ್ಯಾಚ್ಗಳಲ್ಲಿ ಕನ್ವಿನ್ಸಿಂಗ್ ನಂಬರ್ಸ್ ಕಾಣಿಸಿಲ್ಲ. ಸೋ ಚಿನ್ನಸ್ವಾಮಿ ಹೋಂ ಗ್ರೌಂಡ್ ಆಗಿರೋದ್ರಿಂದ ಕೆಎಲ್ ಈ ಮ್ಯಾಚಲ್ಲಿ ಕಂ ಬ್ಯಾಕ್ ಮಾಡ್ತಾರಾ ಅನ್ನೋ ಕುತೂಹಲವೂ ಇರುತ್ತೆ. ಸೋ ಇಲ್ಲಿ ಕೆಎಲ್ ರಾಹುಲ್ ಫಾರ್ಮ್ಗೆ ಬರ್ಲಿ ಒಳ್ಳೆ ಸ್ಕೋರ್ ಬರಲಿ ಬಟ್ ರಿಸಲ್ಟ್ ಮಾತ್ರ ಆರ್ಸಿಬಿ ಪರವೇ ಇರಲಿ ಅಂತಾ ಕೆಲವ್ರು ವಿಶ್ ಮಾಡ್ತಿದ್ದಾರೆ. ಇನ್ನು ಸಮೀರ್ ರಿಜ್ವಿ ಡೆಲ್ಲಿ ಪರ ಬ್ಯಾಟಿಂಗ್ ಆಪತ್ಬಾಂಧವನಾಗಿ ಕಾಣಿಸ್ತಿದ್ದಾರೆ. ಹಾಗೇ ಕಿಲ್ಲರ್ ಮಿಲ್ಲರ್ ಯಾವುದೇ ಟೈಮಲ್ಲೂ ಡೇಂಜರಸ್ ಆಗ್ತಾರೆ. ಬಟ್ ಯಾಕೋ ಈ ಸೀಸನ್ನಲ್ಲಿ ನಾಯಕ ಅಕ್ಷರ್ ಪಟೇಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬರ್ತಿಲ್ಲ. ಹಾಗೇ ಪಥುಮ್ ನಿಸ್ಸಾಂಕ ಕೂಡ ಇಂಪ್ಯಾಕ್ಟ್ ಮಾಡ್ಬೇಕಿದೆ. ಉಳಿದಂತೆ ಡೆಲ್ಲಿ ಬೌಲಿಂಗ್ ಪಡೆಯಲ್ಲಿ ನಮ್ಮ ಆರ್ಸಿಬಿಯ ಮಾಜಿ ಆಟಗಾರ ಲುಂಗಿ ಎಂಗಿಡಿ ಇದ್ದಾರೆ. ಅವ್ರು ಕೂಡ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಮುಕೇಶ್, ಕುಲ್ದೀಪ್, ನಟರಾಜನ್ ನಮ್ಮ ಆರ್ಸಿಬಿ ಬ್ಯಾಟರ್ಗಳನ್ನ ಹೇಗೆ ಹ್ಯಾಂಡಲ್ ಮಾಡ್ತಾರೆ ನೋಡ್ಬೇಕಿದೆ.

ನೋಡಿರಿ

