ಖಾಸಗಿ ಬಸ್​ & ಕಾರು ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ! –ಒಂದೇ ಕುಟುಂಬದ 6 ಮಂದಿ ಸಾವು!   

ಖಾಸಗಿ ಬಸ್​ & ಕಾರು ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ! –ಒಂದೇ ಕುಟುಂಬದ 6 ಮಂದಿ ಸಾವು!   

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ದೇವಾಪುರ ಬಳಿ ಭೀಕರ ಅಪಘಾತಕ್ಕೆ 6 ಮಂದಿ ಬಲಿಯಾಗಿದ್ದಾರೆ. ಇದೀಗ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಒಂದೇ ಕುಟುಂಬದ 6 ಮಂದಿ ವಿಧಿಯ ಆಟಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:  ಕುಡಿದು ಬಂದ ವ್ಯಕ್ತಿಗೆ ಟೆಸ್ಟ್‌ ಡ್ರೈವ್‌ ನೀಡಿದ ಕಾರು ಶೋ ರೂಂ ಸಿಬ್ಬಂದಿ! – 4 ವಾಹನ ಜಖಂ.. ವ್ಯಕ್ತಿ ಕಾಲು ಕಟ್!‌

ಯಾದಗಿರಿಯಿಂದ ರಾಯಚೂರು ಕಡೆ ಹೊರಟಿದ್ದ ಕಾರು, ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಇದೀಗ ಸಾವನ್ನಪ್ಪಿದವರ ಗುರುತು ಪತ್ತೆಯಾಗಿದೆ.

ಸಿರವಾರ ಪಟ್ಟಣ ಪಂಚಾಯತ್‌ ಸದಸ್ಯ ಕೃಷ್ಣನಾಯಕ್ (50), ಕೃಷ್ಣನಾಯಕ್ ಹೆಂಡತಿ ಅನಂತ್​​ ಕಲಾ (45), ಶರಣಪ್ಪ (36), ಶರಣಪ್ಪ ಹೆಂಡತಿ ನಿಸರ್ಗ (30), ಶರಣಪ್ಪ ಮಗು ಸಿದ್ದಾರ್ಥ್​ (3) ಮತ್ತು ಶಶಿಕಲಾ (30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪವಾಡವೆಂಬಂತೆ ಬದುಕುಳಿದಿದ್ದಾರೆ. ಅಥ್ವಿಕ (5) ಮತ್ತು ಒಂದು ವರ್ಷದ ಮಗು ಶ್ರೀನಿಧಿಗೆ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಅಪಘಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಾದಗಿರಿ ಎಸ್​​ಪಿ ಪೃಥ್ವಿಕ್ ಶಂಕರ್, ಕೃಷ್ಣನಾಯಕ್ ಅವರ ಕುಟುಂಬ ಹೊಸ ಕಾರು ಖರೀದಿಸಿದ್ದರು. ಹೊಸ ಕಾರಿಗೆ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್ ಹೋಗುವಾಗ ಘಟನೆ ನಡೆದಿದ್ದು, ಕಾರು ಓವರ್​​ಟೇಕ್​​ ಮಾಡಲು ಹೋದಾಗ ಅಪಘಾತ ಸಂಭವಿಸಿದೆ. ಕಾರು ಬಸ್​​ಗೆ ಗುದ್ದಿದ ಬಳಿಕ ಸುಮಾರು 50 ಮೀಟರ್​​ ದೂರ ಬಸ್​​ ಕಾರನ್ನು ಎಳೆದುಕೊಂಡು ಹೋಗಿದೆ. ಕಾರಿನಲ್ಲಿ ಒಂದೇ ಕುಟುಂಬದ ಎಂಟು ಜನ ಪ್ರಯಾಣಿಸುತ್ತಿದ್ದರು. ಆ ಪೈಕಿ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳಿಗೆ ಗಾಯವಾಗಿದ್ದು, ಅವರನ್ನು ಯಾದಗಿರಿ ಯಿಮ್ಸ್​​ಗೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.

Shwetha M