ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ IPL ಟಿಕೆಟ್‌ ಸೇಲ್!‌ – ದಂಧೆಯ ಮಾಸ್ಟರ್ ಮೈಂಡ್ KSCA ಸದಸ್ಯ!

ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ IPL ಟಿಕೆಟ್‌ ಸೇಲ್!‌ – ದಂಧೆಯ ಮಾಸ್ಟರ್ ಮೈಂಡ್ KSCA ಸದಸ್ಯ!

IPL ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕಳೆದ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್‌ ವಿಚಾರ ಬಯಲಾಗಿದೆ. ಬೆಂಗಳೂರಿನಲ್ಲಿ ಕೆಎಸ್​​ಸಿಎ ಸದಸ್ಯನೇ ಐಪಿಎಲ್ ಟಿಕೆಟ್ ಬ್ಲಾಕ್ ದಂಧೆ ನಡೆಸುತ್ತಿದ್ದ ಅನ್ನೋದು ರಿವೀಲ್‌ ಆಗಿದೆ. ಇದೀಗ ಕೆಎಸ್‌ಸಿಎ ಸದಸ್ಯ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.‌

ಇದನ್ನೂ ಓದಿ: ಆರ್ ಸಿಬಿ ವಿರುದ್ಧ ಮತ್ತೆ ಅಬ್ಬರಿಸ್ತಾರಾ ಕೆಎಲ್ – ಗ್ರೌಂಡ್ ನಂದು.. ಹೇಗಿತ್ತು ರಾಹುಲ್ ಕಿಚ್ಚು?

ಕಾಳ ಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ದಂಧೆ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಮೂಲಕ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ಕೆಎಸ್​​ಸಿಎ ಸದಸ್ಯನೇ ಮುಂದಾಗಿದ್ದಾನೆ ಅನ್ನೋದು ಬಯಲಾಗಿದೆ. ಈ ಬೆನ್ನಲ್ಲೇ  ಬ್ಲಾಕ್‌ನಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂನ ಲಕ್ಷ್ಮಿ ಕ್ಯಾಟರ್ಸ್ ಕ್ಯಾಪ್ಟನ್ ಚಂದ್ರಶೇಖರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಚಂದ್ರಶೇಖರ್‌ ವಿಚಾರಣೆ ವೇಳೆ, KSCA ಸದಸ್ಯ ಗಣೇಶ್ ಹರಿಕೇಶ್ ಜೊತೆ ಸೇರಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರೋದಾಗಿ ಹೇಳಿದ್ದಾನೆ. ಎರಡು ಖಾಸಗಿ ಕಂಪನಿಗಳಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದು ಚಂದ್ರಶೇಖರ್ ಮೂಲಕ ಹೆಚ್ಚಿನ ಬೆಲೆಗೆ ಗಣೇಶ್‌ ಹರಿಕೇಶ್ ಮಾರಾಟ ಮಾಡಿಸುತ್ತಿದ್ದ‌ ಎನ್ನಲಾಗಿದೆ.

ಮೊದಲ ಮ್ಯಾಚ್‌ನಲ್ಲಿ ಆರೋಪಿಗಳು 81 ಟಿಕೆಟ್ ಬ್ಲಾಕ್‌ನಲ್ಲಿ ಮಾರಾಟ ಮಾಡಿದ್ದರು. LSG v/s RCB ಮ್ಯಾಚ್‌ಗೆ ಸುಮಾರು 100 ಟಿಕೆಟ್ ಮಾರಾಟಕ್ಕೆ ಸಿದ್ಧವಾಗಿದ್ದ ಚಂದ್ರಶೇಖರ್‌ನನ್ನು ಸ್ಟಿಂಗ್ ಮಾಡಿ ಬಂಧಿಸಲಾಗಿದೆ. ಸಿಸಿಬಿಯಲ್ಲಿ ಚಂದ್ರಶೇಖರ್, ಗಣೇಶ್ ಹರಿಕೇಶ್ ಹಾಗೂ ಎರಡು ಖಾಸಗಿ ಕಂಪನಿ ಮೇಲೆ FIR ದಾಖಲಾಗಿದೆ. ಚಂದ್ರಶೇಖರ್‌ನನ್ನು ಬಂಧಿಸಿದ್ದು, ಗಣೇಶ್‌ಗಾಗಿ ಹುಡುಕಾಟ ನಡೆದಿದೆ.

Shwetha M