ಆರ್ ಸಿಬಿ ವಿರುದ್ಧ ಮತ್ತೆ ಅಬ್ಬರಿಸ್ತಾರಾ ಕೆಎಲ್ – ಗ್ರೌಂಡ್ ನಂದು.. ಹೇಗಿತ್ತು ರಾಹುಲ್ ಕಿಚ್ಚು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಕ್ಸ್ಟ್ ಟಾರ್ಗೆಟ್ ಡೆಲ್ಲಿ ಕ್ಯಾಪಿಟಲ್ಸ್. ಶನಿವಾರ ಮಧ್ಯಾಹ್ನ ಚಿನ್ನಸ್ವಾಮಿಯಲ್ಲೇ ಈ ಪಂದ್ಯ ನಡೆಯೋದ್ರಿಂದ ಆರ್ಸಿಬಿಯೇ ಗೆಲ್ಲುವಂಥ ಫೇವರೆಟ್ ಟೀಂ. ಆದ್ರೆ ಈ ಪಂದ್ಯ ಕನ್ನಡಿಗರ ಪಾಲಿಗೆ ಬರೀ ಪಂದ್ಯ ಅಷ್ಟೇ ಆಗಿರಲ್ಲ. ಯಾಕಂದ್ರೆ ಡೆಲ್ಲಿ ತಂಡದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಕೆಎಲ್ ರಾಹುಲ್ ಇದ್ದಾರೆ. ಸೋ ಇಲ್ಲಿ ರಾಹುಲ್ಗೂ ಸಪೋರ್ಟ್ ಮಾಡ್ಬೇಕು. ಆರ್ಸಿಬಿಯನ್ನೂ ಬೆಂಬಲಿಸಬೇಕು.
ಇದನ್ನೂ ಓದಿ : RCB ಏಟಿಗೆ ಮಕಾಡೆ ಮಲಗಿದ LSG – KING ಮುಡಿಗೇರಿತು ಆರೆಂಜ್ ಕ್ಯಾಪ್
ಕರ್ನಾಟಕ ಕ್ರಿಕೆಟ್ನಲ್ಲಿ ಪ್ರಸ್ತುತ ಕಳಶದಂತಿರೋ ಕೆಎಲ್ ರಾಹುಲ್ ಕನ್ನಡಿಗರ ಹೆಮ್ಮೆ. ಹಾಗೇ ಜಗತ್ತಿಗೇ ಕಿಂಗ್ ಆಗಿದ್ರೂ ಬೆಂಗಳೂರೇ ನನ್ನ ಎರಡನೇ ಮನೆ ಎನ್ನುವ ವಿರಾಟ್ ಕೊಹ್ಲಿ. ಹೀಗೆ ಒಬ್ರು ಮನೆ ಮಗ.. ಇನ್ನೊಬ್ರು ದುತ್ತಪುತ್ರ. ಸೋ ಕನ್ನಡಿಗರಿಗೆ ಇಬ್ಬರೂ ಇಂಪಾರ್ಟೆಂಟೇ. ಆದ್ರೀಗ ಇವ್ರಿಬ್ರು ಮುಖಾಮುಖಿಯಾಗ್ತಾರೆ. ಅದೂ ಕೂಡ ಚಿನ್ನಸ್ವಾಮಿ ಮೈದಾನದಲ್ಲೇ. ಕಳೆದ ವರ್ಷವೇ ಆರ್ಸಿಬಿ ವಿರುದ್ಧ ಅಬ್ಬರಿಸಿ ಇದು ನನ್ನ ಗ್ರೌಂಡ್ ಅಂತಾ ಬ್ಯಾಟ್ ಕುಟ್ಟಿ ಹೇಳಿದ್ದ ರಾಹುಲ್ ಮೇಲೆ ಎಲ್ಲರ ಕಣ್ಣಿದೆ. ಈಗ ಈ ಪಂದ್ಯ ಆರ್ಸಿಬಿ ವರ್ಸಸ್ ಕೆಎಲ್ ರಾಹುಲ್ ಎನ್ನುವಂತೆಯೇ ಇರುತ್ತೆ.
ಚಿನ್ನಸ್ವಾಮಿ ಗ್ರೌಂಡ್ ನಂದು ಎಂದು ಅಬ್ಬರಿಸಿದ್ದ ರಾಹುಲ್!
ಕೆಎಲ್ ರಾಹುಲ್ ಆರ್ಸಿಬಿ ಪರ ಆಡ್ಬೇಕು ಅನ್ನೋದು ಕೋಟಿ ಕೋಟಿ ಕನ್ನಡಿಗರ ಆಸೆ. ಹಾಗೇ ರಾಹುಲ್ಗೂ ಕೂಡ ತವರಿನ ತಂಡದಲ್ಲಿ ಆಡ್ಬೇಕು ಅನ್ನೋ ಬಯಕೆ. ಸಾಕಷ್ಟು ಸಲ ಈ ಬಗ್ಗೆ ಹೇಳ್ಕೊಂಡಿದ್ರು ಕೂಡ. 2025ರ ಐಪಿಎಲ್ಗೂ ಮುನ್ನ ಮೆಗಾ ಹರಾಜಿನಲ್ಲಿದ್ದ ಕೆಎಲ್ ರಾಹುಲ್ರನ್ನ ಖರೀದಿ ಮಾಡುವಂತೆ ಫ್ಯಾನ್ಸ್ ಒತ್ತಡ ಜಾಸ್ತಿ ಇತ್ತು. ಆದ್ರೆ ಆರ್ಸಿಬಿ ಫ್ರಾಂಚೈಸಿ 10 ಕೋಟಿವರೆಗೆ ಬಿಡ್ ಮಾಡಿ ಆಮೇಲೆ ಸೈಲೆಂಟ್ ಆಗಿತ್ತು. ಆ ಬಳಿಕ ಡೆಲ್ಲಿ ಪಡೆ 14 ಕೋಟಿ ನೀಡಿ ಖರೀದಿ ಮಾಡಿತ್ತು. ಇದ್ರಿಂದ ರಾಹುಲ್ ಕೂಡ ಹರ್ಟ್ ಆಗಿದ್ರು. 2025ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲೇ ನಡೆದಿದ್ದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಪರ ಅಬ್ಬರಿಸಿ ಬಿಗ್ ಮೆಸೇಜ್ ಕೊಟ್ಟಿದ್ರು.
ಬೆಂಗಳೂರಿನಲ್ಲಿ ರಾಹುಲ್ ಆರ್ಭಟ!
2025ರ ಏಪ್ರಿಲ್ 10 ರಂದು ಚೆಂಗಳೂರು 20 ಓವರ್ ಗಳಲ್ಲಿ 163 ರನ್ಸ್
ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಪರ 58 ರನ್ಗಳಿಗೆ 4 ವಿಕೆಟ್ ಕಳ್ಕೊಂಡಿತ್ತು
53 ಬಾಲಲ್ಲಿ 6 ಸಿಕ್ಸರ್ 7 ಫೋರ್ ಸೇರಿ 93 ರನ್ ಗಳಿಸಿ ಅಜೇಯ
ರಾಗಿ ಉಳಿಸಿದ್ರು. 17.5 ಓವರ್ಗಳಲ್ಲೇ ಡೆಲ್ಲಿ ತಂಡವನ್ನ ಗೆಲ್ಲಿಸಿಕೊಂಡಿದ್ರು
ಗ್ರೌಂಡ್ ಮೇಲೆ ಬ್ಯಾಟ್ನಿಂದ ವೃತ್ತ ಬರೆದು ಅದೇ ಬ್ಯಾಟ್ ನಿಂದ ನೆಲವನ್ನ ಕುಟ್ಟಿ
ಎದೆ ತಟ್ಟಿಕೊಂಡು ಇದು ನನ್ನ ಮೈದಾನ ಅನ್ನೋ ರೀತಿಯಲ್ಲಿ ಸೆಲೆಬ್ರೇಟ್
ರಾಹುಲ್ ನನ್ನ ಸೆಲೆಬ್ರೇಷನ್ಗೆ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಸ್ಪೂರ್ತಿ
ನೆಲದ ಮೇಲೆ ವೃತ್ತಾಕಾರವಾಗಿ ಗೀಟು ಎಳೆದು, ಎದೆ ಮುಟ್ಟಿಕೊಂಡು ನಾನಿದ್ದೇನೆ
ಪಿಚ್ ಬಗ್ಗೆ ನನಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ ನನ್ನ ಮನೆ ನನ್ನ ಮೈದಾನ
ಆರ್ಸಿಬಿ ಪರ ಆಡ್ಬೇಕು ಅನ್ನೋ ಆಸೆಯಲ್ಲಿದ್ದ ರಾಹುಲ್ರನ್ನ ಫ್ರಾಂಚೈಸಿ ಖರೀದಿ ಮಾಡದ ಸಿಟ್ಟು ಅವ್ರಲ್ಲಿತ್ತು. ಹಾಗೇ ಅವ್ರ ಕ್ರಿಕೆಟ್ ಕರಿಯರ್ ಬಿಲ್ಡ್ ಆಗೋಕೆ ಚಿನ್ನಸ್ವಾಮಿ ಮೈದಾನದ ಪಾತ್ರ ತುಂಬಾನೇ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಆಡೋದು ರಾಹುಲ್ ಪಾಲಿಗೂ ತುಂಬಾನೇ ಸ್ಪೆಷಲ್. ಹಾಗೇ ಐಪಿಎಲ್ನಲ್ಲಿ ಬೇರೆ ಬೇರೆ ತಂಡಗಳ ಪರ ಆಡಿರೋ ರಾಹುಲ್ ಆರ್ಸಿಬಿ ವಿರುದ್ಧದ ಮ್ಯಾಚ್ಗಳಲ್ಲಿ ಅಬ್ಬರಿಸಿದ್ದಾರೆ. ಅದ್ರಲ್ಲೂ ಈ ಸ್ಕೋರ್ ಅಂತೂ ಎಕ್ಸ್ಟ್ರಾರ್ಡಿನರಿ.
ಆರ್ ಸಿಬಿ ವಿರುದ್ಧ ಅಜೇಯ 132 ರನ್ಸ್ ಕಲೆ ಹಾಕಿದ್ದ ರಾಹುಲ್!
ಇನ್ನು ಆರ್ಸಿಬಿ ವಿರುದ್ಧ ಕೆಎಲ್ ರಾಹುಲ್ ಅದ್ಭುತ ನಂಬರ್ಸ್ ಹೊಂದಿದ್ದಾರೆ. ಅದ್ರಲ್ಲೂ 2020ರಲ್ಲಿ ಅಬ್ಬರಿಸಿದ್ರು. ಕೊವಿಡ್ ಕಾರಣದಿಂದಾಗಿ 2020ರ ಟೂರ್ನಿಯನ್ನ ದುಬೈನಲ್ಲಿ ನಡೆಸಲಾಗಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ರಾಹುಲ್ ಅವತ್ತಿನ ಮ್ಯಾಚಲ್ಲಿ ಆರ್ಸಿಬಿ ವಿರುದ್ಧ ಅಜೇಯ 132 ರನ್ಸ್ ಕಲೆ ಹಾಕಿದ್ರು. 69 ಎಸೆತಗಳಲ್ಲಿ 7 ಸಿಕ್ಸರ್ ಹಾಗೇ 14 ಬೌಂಡರಿಗಳೊಂದಿಗೆ ದಾಖಲೆ ಬರೆದಿದ್ರು. ರಾಹುಲ್ ಆರ್ಭಟದಿಂದಾಗಿ ಪಂಜಾಬ್ ತಂಡ 3 ವಿಕೆಟ್ ನಷ್ಟಕ್ಕೆ 206ರನ್ಸ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಬೆಂಗಳೂರು 19 ಓವರ್ಗಳಲ್ಲಿ 109 ರನ್ ಗಳಿಸಿ ಆಲೌಟ್ ಆಗಿತ್ತು. ಇನ್ನು ಕೆಎಲ್ ರಾಹುಲ್ ಆರ್ಸಿಬಿ ವಿರುದ್ಧ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನಗಳನ್ನೇ ನೀಡಿದ್ದಾರೆ. 2014ರಿಂದ 2025ರ ಒಳಗೆ ವಿವಿಧ ಟೀಮ್ಗಳಲ್ಲಿ ಆರ್ಸಿಬಿ ವಿರುದ್ಧ 18 ಪಂದ್ಯಗಳನ್ನ ಆಡಿದ್ದಾರೆ. 17 ಇನ್ನಿಂಗ್ಸ್ಗಳಲ್ಲಿ 782 ರನ್ಗಳನ್ನ ಕಲೆ ಹಾಕಿದ್ದಾರೆ.
ಡೆಲ್ಲಿ ತಂಡಕ್ಕೆ ಬೂಸ್ಟ್ ನೀಡ್ತಾರಾ ರಾಹುಲ್?
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸ್ತಿರೋ ಕೆಎಲ್ ರಾಹುಲ್ಗೆ ಈ ಸೀಸನ್ನಲ್ಲಿ ಸ್ವಲ್ಪ ಸ್ಟ್ರಗಲ್ಸ್ ಕಾಣ್ತಿದೆ. ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧದ ಡೆಲ್ಲಿ ಮೊದಲ ಮ್ಯಾಚಲ್ಲಿ ಕೆಎಲ್ ರಾಹುಲ್ ಗೋಲ್ಡನ್ ಡಕ್ ಔಟ್ ಆಗಿದ್ರು. ಆ ನಂತ್ರ ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ 1 ರನ್ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಗುಜರಾತ್ ವಿರುದ್ಧದ ಮೂರನೇ ಮ್ಯಾಚಲ್ಲಿ ಅಬ್ಬರಿಸಿದ್ದ ರಾಹುಲ್ 52 ಬಾಲಲ್ಲಿ 11 ಫೋರ್ ಹಾಗೇ 7 ಸಿಕ್ಸರ್ ಸಹಿತ 92 ರನ್ಸ್ ಕಲೆ ಹಾಕಿದ್ರು. ಬಟ್ ಬ್ಯಾಡ್ಲಕ್ ಆ ಪಂದ್ಯವನ್ನ ಡೆಲ್ಲಿ ತಂಡ 1 ರನ್ನಿಂದ ಸೋತಿತ್ತು. ಆ ನಂತ್ರ ಚೆನ್ನೈ ವಿರುದ್ಧದ ಮ್ಯಾಚಲ್ಲಿ 18 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ರು. ಸೋ ಫಾರ್ ಗುಜರಾತ್ ವಿರುದ್ಧ ಬಿಟ್ರೆ ಉಳಿದ ಮೂರು ಪಂದ್ಯಗಳಲ್ಲಿ ರಾಹುಲ್ ಸದ್ದು ಮಾಡಿಲ್ಲ. ಹೀಗಾಗಿ ಆರ್ಸಿಬಿ ವಿರುದ್ಧದ ಮ್ಯಾಚ್ ಮೂಲಕ ಕಂ ಬ್ಯಾಕ್ ಮಾಡೋಕೆ ಕಾಯ್ತಾ ಇದ್ದಾರೆ. ಕಳೆದ ವರ್ಷ ಡೆಲ್ಲಿ ಪರ 539 ರನ್ಸ್ ಗಳಿಸಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಮತ್ತೆ ಖದರ್ ಸ್ಟಾರ್ಟ್ ಆಗುತ್ತಾ ನೋಡ್ಬೇಕು.

ನೋಡಿರಿ

