KING ಬಿಚ್ಚಿಟ್ಟ ರಹಸ್ಯವೇನು? – ಚಿನ್ನಸ್ವಾಮಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನನಾ?
DC & GT ಚೆಂಡಾಡ್ತಾರಾ RCB?

KING ಬಿಚ್ಚಿಟ್ಟ ರಹಸ್ಯವೇನು? – ಚಿನ್ನಸ್ವಾಮಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನನಾ?DC & GT ಚೆಂಡಾಡ್ತಾರಾ RCB?

5 ಮ್ಯಾಚ್.. 4 ಗೆಲುವು.. 1 ಸೋಲು.. 8 ಅಂಕ.. ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನ.. ಕಿಂಗ್ ತಲೆ ಮೇಲೆ ಆರೆಂಜ್ ಕಿರೀಟ.. ಇನ್ನೇನು ಬೇಕು ಆರ್​ಸಿಬಿ ಫ್ಯಾನ್ಸ್ ಸೆಲೆಬ್ರೇಟ್ ಮಾಡೋಕೆ. ಹೋಂ ಪಿಚ್​ನಲ್ಲಿ ಡಾಮಿನೇಟ್ ಮಾಡ್ತಾ ಅವೇ ಪಿಚ್​ನಲ್ಲೂ ಗೆದ್ದು ಬೀಗ್ತಿರೋ ಬೆಂಗಳೂರು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ಈಗ ಇದೇ ಮೈದಾನದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮ್ಯಾಚ್ ಆಡೋಕೆ ಸಿದ್ಧವಾಗಿದೆ.

ಇದನ್ನೂ ಓದಿ : ಸೋಲೋದನ್ನೇ HABIT ಮಾಡ್ಕೊಂಡ KKR – ಅಯ್ಯರ್ ಜೊತೆ ಅದೃಷ್ಟವನ್ನೂ ಬಿಟ್ರಾ?

ಡಿಫೆಂಡಿಂಗ್ ಚಾಂಪಿಯನ್ಸ್ ಬೆಂಗಳೂರು ತಂಡ ಈ ಸೀಸನ್​ನಲ್ಲೂ ಅಂಥಾದ್ದೇ ಪರ್ಫಾಮೆನ್ಸ್ ನೀಡ್ತಿದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಒಂದು ಬ್ಯಾಡ್ ಡೇ ಬಿಟ್ರೆ ಉಳಿದೆಲ್ಲಾ ಪಂದ್ಯಗಳಲ್ಲೂ ಗೆದ್ದಿದ್ದಾರೆ. ಌಂಡ್ ಗೆದ್ದಿರೋ ಮ್ಯಾಚ್​ಗಳೆಲ್ಲಾ ಒನ್ ಸೈಡೆಡ್ ವಿಕ್ಟರಿಗಳೇ. ಚೇಸಿಂಗ್ ಅಂತಾ ಬಂದಾಗ್ಲೂ ಅಥವಾ ಡಿಫೆನ್ಸ್ ಮಾಡಿಕೊಂಡಾಗ್ಲೂ ಎದುರಾಗಳಿಗಳನ್ನ ಫೈಟ್ ಕೊಡೋಕೂ ಬಿಟ್ಟಿಲ್ಲ. ಟಾಪ್ ಟು ಬಾಟಮ್ ಕಂಪ್ಲೀಟ್ ಫುಲ್ಲಿ ಪ್ಯಾಜೇಜ್ಡ್​ ಟೀಂ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಸೋ ಈಗ ಡೆಲ್ಲಿ ಮತ್ತು ಗುಜರಾತ್ ಬೇಟೆಗೆ ರೆಡಿಯಾಗ್ತಿದ್ದಾರೆ.

ಚಿನ್ನಸ್ವಾಮಿಯಲ್ಲಿ ಔಟ್ ಆಫ್ ಔಟ್ ಗೆ ಬೇಕು 2 ವಿಕ್ಟರಿ!

19ನೇ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನ ಈ ಮೈದಾನದಲ್ಲಿ ಆರ್​ಸಿಬಿ ಪಂದ್ಯಗಳನ್ನ ಆಡೋದೇ ಡೌಟಿತ್ತು. ಹೀಗಾಗಿ ರಾಯ್ಪುರವನ್ನ ನಮ್ಮ ಎರಡನೇ ತವರು ಮೈದಾನ ಅಂತಾ ಬೆಂಗಳೂರು ಫ್ರಾಂಚೈಸಿ ಘೋಷಣೆ ಮಾಡ್ಕೊಂಡಿತ್ತು. ಲಾಸ್ಟ್ ಮೂಮೆಂಟ್​ನಲ್ಲಿ ಚಿನ್ನಸ್ವಾಮಿಯಲ್ಲಿ ಮ್ಯಾಚಸ್ ಆಡ್ಸೋಕೆ ಅನುಮತಿ ಸಿಕ್ಕಿದ್ರಿಂದ ಬೆಂಗಳೂರಲ್ಲಿ 5 ಮ್ಯಾಚ್ ಹಾಗೇ ರಾಯ್ಪುರದಲ್ಲಿ 2 ಪಂದ್ಯಗಳನ್ನ ತವರಿನ ಪಂದ್ಯಗಳಾಗಿ ಆಡೋಕೆ ಡಿಸೈಡ್ ಮಾಡಿದ್ರು. ಅದ್ರಂತೆ ಈಗ ಬೆಂಗಳೂರಲ್ಲಿ 3 ಮ್ಯಾಚಸ್ ಕಂಪ್ಲೀಟ್ ಆಗಿವೆ. ಈ ಪಿಚ್​ನಲ್ಲಿ ಉಳಿದಿರೋದೇ 2 ಮ್ಯಾಚ್. ಏಪ್ರಿಲ್ 18 ಅಂದ್ರೆ ಇದೇ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಗೇ ಏಪ್ರಿಲ್ 24ರಂದು ಗುಜರಾತ್ ವಿರುದ್ಧ ಆರ್​ಸಿಬಿ ಪಂದ್ಯಗಳನ್ನ ಆಡಲಿದೆ. ಈ ಸೀಸನ್​ನಲ್ಲಿ ಆಲ್ರೆಡಿ ಬೆಂಗಳೂರಲ್ಲಿ 3 ಪಂದ್ಯ ಆಡಿದ್ದು ಮೂರರಲ್ಲೂ ಗೆದ್ದಿದ್ದಾರೆ. ಸೋ ಉಳಿದಿರೋ 2 ಪಂದ್ಯಗಳನ್ನೂ ಗೆಲ್ಲೋ ಟಾರ್ಗೆಟ್​ನಲ್ಲಿದ್ದಾರೆ. ಐದಕ್ಕೆ ಐದೂ ಪಂದ್ಯಗಳನ್ನ ಇಲ್ಲಿ ಗೆದ್ಕೊಂಡ್ರೆ ಅವೇ ಪಿಚ್​ನಲ್ಲಿ ರಿಸಲ್ಟ್ ವೇರಿಯೇಷನ್ಸ್ ಆದ್ರೂ ಮ್ಯಾಚ್ ಮಾಡೋಕೆ ಸಾದ್ಯ ಆಗುತ್ತೆ. ಸೋ ಈಗ ನೆಕ್ಸ್​ಟ್ ಬರೋ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್.

ಡೆಲ್ಲಿ ಬೇಟೆಗೆ ಸಿದ್ಧವಾಗಿದೆ ಬೆಂಗಳೂರು!

ಶನಿವಾರ ಮಧ್ಯಾಹ್ನ 3.30ಕ್ಕೆ ಡೆಲ್ಲಿ ವಿರುದ್ಧ ಬೆಂಗಳೂರು 6ನೇ ಪಂದ್ಯ

ಪ್ರಸ್ತುತ ಸೀಸನ್ ನಲ್ಲಿ ಡಿಸಿ 4 ಪಂದ್ಯ ಆಡಿದ್ದು 2 ಗೆಲುವು 2 ಸೋಲು

ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರೋ ಡೆಲ್ಲಿ ಕ್ಯಾಪಿಟಲ್ಸ್

ಸಮೀರ್ ರಿಜ್ವಿ ಹೈ ಸ್ಕೋರರ್ (166) ಲುಂಗಿ ಎಂಗಿಡಿ 5 ವಿಕೆಟ್ಸ್

ನಾಲ್ಕೂ ಪಂದ್ಯಗಳಲ್ಲೂ ಚೇಸ್ ಮಾಡಿ 2 ರಲ್ಲಿ ಗೆಲುವು 2 ಸೋಲು

33 ಒಟ್ಟು ಪಂದ್ಯ, ಬೆಂಗಳೂರು 19 ಸಲ ವಿನ್, ಡಿಸಿ 12 ಗೆಲುವು, 2 ಡ್ರಾ

ಚಿನ್ನಸ್ವಾಮಿಯಲ್ಲಿ 13 ಪಂದ್ಯ, ಆರ್‌ ಸಿಬಿ 8, ಡಿಸಿ 4 ಗೆಲುವು, 1 ಡ್ರಾ

ಈ ಸ್ಟಾಟ್ಸ್ ನೋಡಿದಾಗ್ಲೇ ಗೊತ್ತಾಗುತ್ತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬೆಂಗಳೂರು ಟೀಂ ಡಾಮಿನೇಟ್ ಮಾಡಿದೆ ಅನ್ನೋದು. ರನ್ಸ್, ವಿಕೆಟ್ಸ್ ಅಂತಾ ಬಂದಾಗ್ಲೂ ಈ ಸೀಸನ್​ನಲ್ಲಿ ಬೆಂಗಳೂರು ನಂಬರ್ 1 ಸ್ಥಾನದಲ್ಲಿದೆ. ಹೀಗಾಗಿ ಈ ಮ್ಯಾಚಲ್ಲಿ ಬೆಂಗಳೂರೇ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ. ಆದ್ರೆ ಕಳೇದ ವರ್ಷ ಬೆಂಗಳೂರಲ್ಲಿ ನಡೆದಿದ್ದ ಆರ್​ಸಿಬಿ ವರ್ಸಸ್ ಡಿಸಿ ಮ್ಯಾಚಲ್ಲಿ ಡೆಲ್ಲಿ ಪಡೆ ಬೆಂಗಳೂರನ್ನ ಸೋಲಿಸಿತ್ತು. ಹೀಗಾಗಿ ಈ ವರ್ಷವೂ ಅದೇ ರಿಸಲ್ಟ್ ಎದುರು ನೋಡ್ತಾ ಇರ್ತಾರೆ. ಹಾಗೇ ಬ್ಯಾಕ್ ಟು ಬ್ಯಾಕ್ 2 ಪಂದ್ಯ ಸೋತಿರೋದ್ರಿಂದ ಗೆಲುವಿನ ಮೂಲಕ ಕಂ ಬ್ಯಾಕ್​ಗೆ ಕಾಯ್ತಾ ಇರ್ತಾರೆ.

ಗುಜರಾತ್ ಗೂ ಕಾದಿದ್ಯಾ ಗುನ್ನಾ?

ಏಪ್ರಿಲ್ 24ಕ್ಕೆ ಗುಜರಾತ್ ವಿರುದ್ಧ ಪಂದ್ಯ, ಸಂಜೆ 7.30ಕ್ಕೆ ಆರಂಭ

ಈ ಸೀಸನ್ ನಲ್ಲಿ ಈವರೆಗೆ 4 ಮ್ಯಾಚ್ ಆಡಿ 2ರಲ್ಲಿ ಗೆಲುವು, 2 ಸೋಲು

ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್

ಜೋಸ್ ಬಟ್ಲರ್ ಹೈ ಸ್ಕೋರರ್ (176), ಪ್ರಸಿದ್ಧ್ ಕೃಷ್ಣ 10 ವಿಕೆಟ್

ಆರ್ ಸಿಬಿ ಪಂದ್ಯಕ್ಕೂ ಮುನ್ನ ಕೆಕೆಆರ್ & ಎಂಐ ವಿರುದ್ಧ ಪಂದ್ಯ

ಟೋಟಲ್ 6 ಪಂದ್ಯಗಳಲ್ಲಿ ಮುಖಾಮುಖಿ, ತಲಾ 3 ಪಂದ್ಯಗಳಲ್ಲಿ ಗೆಲುವು

ಕಳೆದ ವರ್ಷ ಬೆಂಗಳೂರಲ್ಲಿ ಆರ್ ಸಿಬಿ ತಂಡವನ್ನ ಸೋಲಿಸಿದ್ದ ಜಿಟಿ

ಇಲ್ಲಿ ಐಪಿಎಲ್ ಜರ್ನಿ ಅಂತಾ ನೋಡಿದಾಗ ಇಬ್ರೂ ಈಕ್ವಲ್ ಫೈಟ್ ಕೊಟ್ಟುಕೊಂಡೇ ಬಂದಿದ್ದಾರೆ. ಈ ಮ್ಯಾಚ್ ಕೂಡ ತುಂಬಾನೇ ಫೈಟ್ ಇರುತ್ತೆ. ಸೋ ಅಲ್ಲಿಗೆ ಬೆಂಗಳೂರು ತಂಡಕ್ಕೆ ಡೆಲ್ಲಿ ಮತ್ತು ಗುಜರಾತ್ ಪಂದ್ಯಗಳು ಜಸ್ಟ್ ಫೈಟ್ ಅಲ್ಲ ಇಟ್ಸ್ ರಿವೇಂಜ್ ಫೈಟ್. ಯಾಕಂದ್ರೆ ಕಳೆದ ವರ್ಷ ಈ ಎರಡೂ ತಂಡಗಳು ಬೆಂಗಳೂರಿನಲ್ಲೇ ಆರ್​ಸಿಬಿ ತಂಡವನ್ನ ಸೋಲಿಸಿದ್ವು. ಈಗ ಇದೇ ಮೈದಾನದಲ್ಲೇ ಅವ್ರನ್ನೇ ಸೋಲಿಸಿ ಸೇಡು ತೀರಿಸಿಕೊಳ್ಬೇಕಿದೆ. ಲಕ್ನೋ ವಿರುದ್ಧದ ಮ್ಯಾಚಲ್ಲಿ ಕಿಂಗ್ ಕೊಹ್ಲಿ ಹೇಳಿರೋ ಮಾತು ಕೇಳಿದ್ರೇನೆ ಈ ಪಂದ್ಯಗಳನ್ನೂ ನಾವೇ ಗೆಲ್ಲೋದು ಅನ್ಸುತ್ತೆ. ಎದುರಾಳಿ ಪಡೆಯಿಂದ ಹೇಗೆ ಗೆಲುವನ್ನ ಕಿತ್ತುಕೊಳ್ಬೇಕು ಅನ್ನೋ ಬಗ್ಗೆ ಡಿಸ್ಕಷನ್ಸ್ ಆಗಿರುತ್ತೆ. ಹೀಗಾಗೇ ಲಕ್ನೋ ವಿರುದ್ಧದ ಮ್ಯಾಚಲ್ಲಿ ಪವರ್ ಪ್ಲೇನಲ್ಲೇ ಅಗ್ರೆಸ್ಸಿವ್ ಇಂಟೆಂಟ್ ತೋರಿಸೋ ಬಗ್ಗೆ ನಿರ್ಧಾರ ಆಗಿತ್ತು. ಎಲ್ಲಾ ಪಂದ್ಯಗಳಲ್ಲೂ ಇದೇ ಥರ ಪ್ಲ್ಯಾನ್ ಮಾಡಿಕೊಂಡೇ ಬರ್ತೀವಿ ಅನ್ನೋ ಮೂಲಕ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟಿಸಿದ್ದಾರೆ. ಇನ್ನಿ ಪರ್ಫಾಮೆನ್ಸ್ ವೈಸ್​ನಲ್ಲೂ ಕೂಡ ಕಿಂಗ್ ಕೊಹ್ಲಿ ಐದು ಪಂದ್ಯಗಳಲ್ಲಿ 57.00 ಸರಾಸರಿ ಮತ್ತು 158.33 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 228 ರನ್ ಗಳಿಸಿದ್ದಾರೆ.

Shantha Kumari