RCB ವಿರುದ್ಧCSK ಕಂಪ್ಲೇಂಟ್‌ – ಏನಿದು ಚಿನ್ನಸ್ವಾಮಿಯಲ್ಲಿ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ವಿವಾದ?

RCB ವಿರುದ್ಧCSK ಕಂಪ್ಲೇಂಟ್‌ – ಏನಿದು ಚಿನ್ನಸ್ವಾಮಿಯಲ್ಲಿ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ವಿವಾದ?

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆತಿಥೇಯ ತಂಡವಾದ RCB ಡಿಜೆ ವರ್ತನೆಯ ವಿರುದ್ಧ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ ಅಧಿಕೃತ ದೂರು ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿರುವ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ.  ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್​ಸಿಬಿ ನೇಮಿಸಿದ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಸಿಎಸ್‌ಕೆ ದೂರಿದೆ.

  ಏಪ್ರಿಲ್ 5ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಿಎಸ್‌ಕೆ 43 ರನ್‌ಗಳ ಅಂತರದಿಂದ ಸೋತಿತ್ತು. ಈ ವೇಳೆ ಸ್ಟೇಡಿಯಂನಲ್ಲಿ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಹಾಡನ್ನು ನಿರಂತರವಾಗಿ ಪ್ಲೇ ಮಾಡಲಾಗಿದ್ದು, ಡಿಜೆ ನೀಡಿದ ಕೆಲವು ಕಾಮೆಂಟ್‌ಗಳ ಬಗ್ಗೆ ಸಿಎಸ್‌ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಫ್ರಾಂಚೈಸಿ ಬಿಸಿಸಿಐಗೆ   ಅಧಿಕೃತವಾಗಿ ಪತ್ರ ಬರೆದು ಘಟನೆ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ಅಟ್ಯಾಕ್!‌ – ಅಯ್ಯೋ.. ವ್ಯಕ್ತಿಯ ಬಲಗೈ ಕಟ್!

ಅಂದ ಹಾಗೆ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಎಂಬ ಹಾಡನ್ನು ಗಾನ ಅಪ್ಪು ರಚಿಸಿದ್ದು, ಸಿಎಸ್‌ಕೆ–ಆರ್‌ಸಿಬಿ ಪಂದ್ಯಗಳ ವೇಳೆ ಈ ಹಾಡು ಸಾಮಾನ್ಯವಾಗಿ ಕೇಳಿಬರುತ್ತದೆ. ಈ ವಿವಾದಕ್ಕೆ ಕಾರಣವಾದ ಘಟನೆ ಎಂದರೆ, ಆರ್‌ಸಿಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್‌ ಶರ್ಮಾ ಅವರು “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಎಂದು ಹಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು. ಈ ವಿಡಿಯೊ ವೈರಲ್ ಆಗಿತ್ತು ಹಾಗೂ ಸಿಎಸ್‌ಕೆ ಅಭಿಮಾನಿಗಳು ಆರ್‌ಸಿಬಿಯನ್ನು ತೀವ್ರ ಟ್ರೋಲ್‌ ಮಾಡಿದ್ದರು.

ಇದಕ್ಕೂ ಮೊದಲು, ಚೆನ್ನೈ ಸೂಪರ್‌ ಕಿಂಗ್ಸ್‌ ಟೀಮ್‌ ಮ್ಯಾನೇಜ್‌ಮೆಂಟ್‌ ಸ್ಪಷ್ಟ ಸೂಚನೆಗಳನ್ನು ನೀಡಿದ್ದು, ಎದುರಾಳಿ ತಂಡ ಮತ್ತು ಅವರ ಅಭಿಮಾನಿಗಳ ವಿರುದ್ಧ ಯಾವುದೇ ರೀತಿಯ ಕಾಮೆಂಟ್‌ಗಳನ್ನು ಮಾಡಬಾರದು ಎಂದು ತಿಳಿಸಿತ್ತು. ಆದಾಗ್ಯೂ, ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯಗಳಲ್ಲಿ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ” ಹಾಡು ಪದೇ-ಪದೆ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವಿನ ವ್ಯಂಗ್ಯ ಮತ್ತು ಮೀಮ್ಸ್ ಸಾಮಾನ್ಯವಾಗಿದ್ದರೂ, ಸ್ಟೇಡಿಯಂನಲ್ಲಿ ಹಾಡು ಪ್ಲೇ ಮಾಡಿರುವುದು ಮತ್ತು ಡಿಜೆ ನೀಡಿದ ಕೆಲವು ಕಾಮೆಂಟ್‌ಗಳು ಉತ್ತಮವಾಗಿಲ್ಲ ಸಿಎಸ್‌ಕೆ ಅಭಿಪ್ರಾಯಪಟ್ಟಿದೆ.

Kishor KV