IPL ನಡುವೆ BCCIನಲ್ಲಿ ಬಿರುಗಾಳಿ – ಸೂರ್ಯನ ಕ್ಯಾಪ್ಟನ್ಸಿಗೆ ಡೆಡ್ ಲೈನ್!
T-20Iನಲ್ಲಿ ಶ್ರೇಯಸ್ ಗೆ ಪಟ್ಟ ಫಿಕ್ಸಾ?

IPL ನಡುವೆ BCCIನಲ್ಲಿ ಬಿರುಗಾಳಿ – ಸೂರ್ಯನ ಕ್ಯಾಪ್ಟನ್ಸಿಗೆ ಡೆಡ್ ಲೈನ್!T-20Iನಲ್ಲಿ ಶ್ರೇಯಸ್ ಗೆ ಪಟ್ಟ ಫಿಕ್ಸಾ?

ಕ್ರಿಕೆಟ್ ಅಭಿಮಾನಿಗಳೆಲ್ಲಾ ಐಪಿಎಲ್ ಫೀವರ್​ನಲ್ಲಿದ್ದಾರೆ. ಡೇ ಬೈ ಡೇ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್​ಗಳು ನೋಡೋಕೆ ಸಿಗ್ತಿವೆ. ಆದ್ರೆ ಈ ಐಪಿಎಲ್​ ಗುಂಗಿನ ನಡುವೆ ಬಿಸಿಸಿಐನಲ್ಲಿ ಬಿರುಗಾಳಿಯೇ ಎದ್ದಿದೆ. ಟಿ-20ಐ ಕ್ಯಾಪ್ಟನ್ಸಿಯ ಲೆಕ್ಕಾಚಾರಗಳು ಸ್ಟಾರ್ಟ್ ಆಗಿವೆ. 2028ರ ಒಲಿಂಪಿಕ್ಸ್​ ಪಾರ್ಟಿಸಿಪೇಷನ್ ಮುನ್ನಲೆಗೆ ಬಂದಿದೆ.  ಈ ಎಲ್ಲಾ ಬೆಳವಣಿಗೆಗಳ ಕೇಂದ್ರ ಬಿಂದು ಟಿ-20ಐ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್. ಟಿ-20 ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಸೂರ್ಯನಿಗೆ ಬಿಸಿಸಿಐ ಹೊಸ ಡೆಡ್​ಲೈನ್ ನೀಡಿದೆ.

ಇದನ್ನೂ ಓದಿ : 5 ಬ್ಯಾಟರ್ಸ್.. 150+ ಸ್ಟ್ರೈಕ್ ರೇಟ್ – RCB ಬ್ಯಾಟಿಂಗ್ ಗೆ ಭಸ್ಮವಾಗುತ್ತಾ LSG?

ಕಳೆದ ಮಾರ್ಚ್​ನಲ್ಲಿ ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಈಗ ಕುತ್ತು ಬಂದಿದೆ. ಯಾಕಂದ್ರೆ ಕ್ಯಾಪ್ಟನ್ ಸ್ಥಾನದಿಂದ ಬಿಸಿಸಿಐ ಕೊಕ್ ಕೊಡೋ ಚಾನ್ಸಸ್ ಇದೆ. ಯಾವ ಬ್ಯಾಟಿಂಗ್​ ಖದರ್​ನಿಂದ ಟಿ-20 ನಾಯಕನ ಪಟ್ಟ ಸಿಕ್ಕಿತ್ತೋ ಈಗ ಅದೇ ಬ್ಯಾಟಿಂಗ್​ನಿಂದಲೇ ಸ್ಥಾನ ಕಳ್ಕೊಳ್ಳೋ ಹಂತದಲ್ಲಿದ್ದಾರೆ. ಬಿಸಿಸಿಐ ವಲಯದಲ್ಲಿ ಈ ಬಗ್ಗೆ ಸೀರಿಯಸ್ ಆಗೇ ಡಿಸ್ಕಷನ್ ಆಗ್ತಿದೆ.

ಕ್ಯಾಪ್ಟನ್ಸಿ ಗೆದ್ರೂ ಬ್ಯಾಟಿಂಗ್ ನಲ್ಲಿ ಸದ್ದು ಮಾಡದ ಸೂರ್ಯ!

ಕ್ಯಾಪ್ಟನ್ ಆಗಿ ಸೂರ್ಯಕುಮಾರ್ ಯಾದವ್ ಒಂದೇ ಒಂದು ಸರಣಿ ಸೋಲಲಿಲ್ಲ ಜೊತೆಗೆ ಭಾರತಕ್ಕೆ 3ನೇ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ರು. ಅದೇನೋ ನಿಜನೇ. ಆದ್ರೆ ಬ್ಯಾಟಿಂಗ್​ನಲ್ಲಿ ವಿನ್ನಿಂಗ್ ಪರ್ಫಾಮೆನ್ಸ್ ಬಂದಿಲ್ಲ. ಇತ್ತೀಚೆಗೆ ನಡೆದ ಟಿ-20 ವಿಶ್ವಕಪ್​ನಲ್ಲೂ ಕೂಡ. ಟಿ20 ವಿಶ್ವಕಪ್‌ನಲ್ಲಿ, ಅಮೆರಿಕ ವಿರುದ್ಧದ ಮೊದಲ ಪಂದ್ಯವನ್ನು ಹೊರತುಪಡಿಸಿದ್ರೆ ಇಡೀ ಟೂರ್ನಿಯಲ್ಲಿ ಆ ಸ್ಟ್ರಗಲ್ಸ್ ಕಾಣ್ತಿತ್ತು. ಅದ್ರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ 18 ರನ್ಸ್, ವೆಸ್ಟ್ ಇಂಡೀಸ್ ವಿರುದ್ಧ 18 ರನ್ಸ್, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ 11 ರನ್ಸ್ ಇನ್ನು ಫೈನಲ್ ಮ್ಯಾಚಲ್ಲಿ ಸೊನ್ನೆ. ಬಿಗ್ ಸ್ಟೇಜ್​ನಲ್ಲೇ ಸೂರ್ಯ ಬ್ಯಾಟಿಂಗ್​ನಲ್ಲಿ ಕೈಕೊಟ್ಟಿದ್ದಾರೆ. ಅದೂ ಅಲ್ದೇ ಐಪಿಎಲ್​ನಲ್ಲಿ ಸೂಪರ್ ಸಾಲಿಡ್ ಆಗಿ ಬ್ಯಾಟಿಂಗ್ ಮಾಡ್ತಿರೋ ಪ್ಲೇಯರ್ಸ್ ಇದ್ದಾರೆ. ಸೂರ್ಯವಂಶಿಗೂ ಟೀಂ ಇಂಡಿಯಾ ಬಾಗಿಲು ಓಪನ್ ಆಗೋ ಹೊತ್ತು. ಹೀಗಾಗಿ ಸೂರ್ಯಕುಮಾರ್ ಯಾದವ್​ಗೆ ಯುಕೆ ಪ್ರವಾಸದ ಡೆಡ್​ಲೈನ್ ನೀಡಲಾಗಿದೆ. ಬಿಸಿಸಿಐನ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.  ಐಪಿಎಲ್ ಬಳಿಕ ಭಾರತ ತಂಡವು ಐರ್ಲೆಂಡ್‌ನಲ್ಲಿ ಎರಡು ಮತ್ತು ಇಂಗ್ಲೆಂಡ್‌ನಲ್ಲಿ ಐದು ಟಿ20 ಪಂದ್ಯಗಳನ್ನು ಆಡಲಿದೆ. ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸೂರ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದ್ರೆ ಒಬ್ಬ ಬ್ಯಾಟರ್ ಆಗಿ ಅವ್ರು ತಮ್ಮ ಪರ್ಫಾಮೆನ್ಸ್​ನ ಪ್ರೂವ್ ಮಾಡಿಕೊಳ್ಳಬೇಕು.ಇಲ್ಲದೇ ಇದ್ರೆ 2028 ರವರೆಗೆ ಅವ್ರನ್ನ ಮುಂದುವರಿಸಬೇಕಾ ಅಥವಾ ಬೇಡ್ವಾ ಅನ್ನೋ ಬ್ಗಗೆ ಚರ್ಚೆ ಮಾಡಬೇಕಾಗುತ್ತೆ ಅಂತಾ ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸೋ ಅಲ್ಲಿಗೆ ಸೂರ್ಯ ಕ್ಯಾಪ್ಟನ್ಸಿ ಜೊತೆಗೆ ಬ್ಯಾಟರ್ ಆಗಿಯೂ ಅವಕಾಶ ಕಳೆದುಕೊಳ್ಳಬಹುದು. ಹಾಗೇನಾದ್ರೂ ಸೂರ್ಯನನ್ನು ಕೈಬಿಟ್ರೆ ಭಾರತ

ಕ್ಯಾಪ್ಟನ್ ರೇಸ್ ನಲ್ಲಿ ಐವರು!

ಶ್ರೇಯಸ್ ಅಯ್ಯರ್ ಮೇಲೆ ಹೆಚ್ಚಿನ ಒಲವು ಹೊಂದಿರುವ ಬಿಸಿಸಿಐ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಫಾರ್ಮ್ & ಹೆಚ್ಚಿನ ಅನುಭವ

ಐಸಿಸಿ ಟಿ-20 ವಿಶ್ವಕಪ್ ಚಾಂಪಿಯನ್ ಪ್ಲೇಯರ್ ಸಂಜು ಸ್ಯಾಮ್ಸನ್

ಟಿ-20ಐ ಫಾರ್ಮೆಟ್ ವೈಸ್ ಕ್ಯಾಪ್ಟನ್ ಆಗಿರುವ ಅಕ್ಷರ್ ಪಟೇಲ್

ಐಪಿಎಲ್ ನಲ್ಲಿ ಕ್ಲಿಕ್ ಆದ್ರೆ ಶುಭ್ ಮನ್ ಗಿಲ್ ಹೆಸರು ಕೂಡ ಪ್ರಸ್ತಾಪ

ಇಲ್ಲಿ ಆಯ್ಕೆಗಳೇನೋ ಸಾಕಷ್ಟಿದೆ. ಆದ್ರೆ ಅಳೆದು ತೂಗಿ ಹೊಸ ನಾಯಕನನ್ನ ಘೋಷಣೆ ಮಾಡ್ಬೇಕಿದೆ. ಯಾಕಂದ್ರೆ 2028ರಲ್ಲಿ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಕೂಡ ಇರೋದ್ರಿಂದ ಭಾರತವನ್ನ ಸಮರ್ಥವಾಗಿ ಮುನ್ನಡೆಸೋ ನಾಯಕ ಬೇಕಿದೆ. ಆದ್ರೆ ಕೋಚ್ ಗೌತಮ್ ಗಂಭೀರ್ ಅಂತೂ ಸೂರ್ಯಕುಮಾರ್ ಮೇಲೆಯೇ ಫಸ್ಟ್ ಪ್ರಿಯಾರಿಟಿ ಕೊಡ್ತಿದ್ದಾರೆ. ಅವ್ರನ್ನೇ ಮುಂದುವರಿಸೋಣ ಅಂತಾ ಬ್ಯಾಟ್ ಬೀಸ್ತಿದ್ದಾರೆ. ಹೀಗಾಗಿ ಬಿಸಿಸಿಐ ಯಾರ ಕಡೆ ಒಲವು ತೋರಿಸುತ್ತೆ ನೋಡ್ಬೇಕಿದೆ.

Shantha Kumari