ಕಸದ ದುರ್ವಾಸನೆಯಿಂದಲೇ ಬರುತ್ತೆ ಈ ಆರೋಗ್ಯ ಸಮಸ್ಯೆ! – ಮನೆ ಬಳಿ ಕಸದ ರಾಶಿ ಇದ್ರೆ ಎಚ್ಚರ!

ಕಸ ಹೆಕ್ಕುವವರಿಗಿಂತ ಕಸ ಎಸೆಯುವವರೇ ಹೆಚ್ಚಾಗಿದ್ದಾರೆ. ಕಸದ ರಾಶಿ ಬಿದ್ದಿದೆ ಅನ್ನೋ ಚಿಂತೆ ಒಂದು ಕಡೆಯಾದ್ರೆ, ಅದರ ದುರ್ವಾಸನೆ ಇನ್ನೂ ಹಿಂದೆ. ನಿಮ್ಮ ಸುತ್ತಮುತ್ತ ಕಸದ ದುರ್ವಾಸನೆ ಬರ್ತಿದ್ರೆ ಎಚ್ಚರ.. ಇದ್ರಿಂದಲೇ ನಿಮ್ಮ ಆರೋಗ್ಯ ಹಾಳಾಗಬಹುದು.
ಇದನ್ನೂ ಓದಿ: ಜಾನು ಬಲೆಯಲ್ಲಿ ಜಯಂತ್ ವಿಲ ವಿಲ.. ಜಾಹ್ನವಿ ಸೇಡು ಸೈಕೋಪತಿ ಸುಸ್ತು! -ಚಿನ್ನುಮರಿ ತಿರುಗೇಟಿಗೆ ಬದಲಾದ ಜಯಂತ್!
ಮನೆ ಸುತ್ತಮುತ್ತ ಕಸದ ರಾಶಿ ಇದ್ದರೆ ಅದರಿಂದಾಗುವ ತೊಂದರೆ ಅಷ್ಟಿಷ್ಟಲ್ಲ. ಒಂದ್ಕಡೆ ಕೀಟಗಳ ಉಪಟಳ ಶುರುವಾದ್ರೆ, ಮತ್ತೊಂದ್ಕಡೆ ಅದರ ದುರ್ವಾಸನೆ. ಮೂಗು ಮುಚ್ಚಿಕೊಂಡಿರುವಂತಹ ಪರಿಸ್ಥಿತಿ ಎದುರಾಗುತ್ತವೆ. ಆದ್ರೆ ಕಸದ ದುರ್ವಾಸನೆಯು ನಿಮ್ಮ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀಳಲಿದೆ. ನಿಮ್ಮ ಪ್ರದೇಶದ ಸುತ್ತಮುತ್ತ ಹಾಗೂ ನಿಮ್ಮ ಮನೆಯ ಸುತ್ತ ಕಸದ ರಾಶಿ ಇದ್ದರೆ ಅದರಿಂದ ಬರುವ ದುರ್ವಾಸನೆಯನ್ನೂ ನೀವು ತೆಗೆದುಕೊಂಡರೇ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ವಾಸನೆ ನಿಮ್ಮ ಶ್ವಾಸಕೋಶದ ಮೇಲೆ ಸಮಸ್ಯೆ ಎದುರಾಗಲಿದೆ.
ತಜ್ಞರ ಪ್ರಕಾರ, ಕೊಳೆಯುತ್ತಿರುವ ಕಸದಿಂದ ಅಮೋನಿಯಾ, ಹೈಡ್ರೋಜನ್ ಸಲ್ಫೈಡ್ ಮತ್ತು ಮೀಥೇನ್ನಂತಹ ಅನಿಲಗಳು ಬಿಡುಗಡೆಯಾಗುತ್ತವೆ. ಇವು ವಾತಾವರಣದೊಂದಿಗೆ ಬೆರೆತು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಬಹುದು. ಇದು ಶ್ವಾಸಕೋಶದ ಊತ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬಂದರೂ, ನಂತರ ಅವು ಗಂಭೀರವಾಗಬಹುದು. ಅಲ್ಲದೆ, ಈಗಾಗಲೇ ಆಸ್ತಮಾ ಅಥವಾ ಸೈನಸ್ ಸಮಸ್ಯೆಗಳನ್ನು ಹೊಂದಿರುವವರು ಇನ್ನೂ ಕೆಟ್ಟ ಸ್ಥಿತಿಯನ್ನು ಹೊಂದಿರಬಹುದು.
ಸಾಂಕ್ರಾಮಿಕ ರೋಗಗಳ ಅಪಾಯ
ಕಸದಿಂದ ದುರ್ವಾಸನೆ ಬರುವ ಕಡೆ ನೊಣಗಳು, ಸೊಳ್ಳೆಗಳು, ಇಲಿಗಳು ಮತ್ತು ಜಿರಳೆಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಕೀಟಗಳು ಅಡುಗೆಮನೆಗೆ ತಲುಪಿದರೆ, ಅವು ಕಸದಿಂದ ನಿಮ್ಮ ಆಹಾರಕ್ಕೆ ಸೂಕ್ಷ್ಮಜೀವಿಗಳನ್ನು ಸಾಗಿಸಬಹುದು. ಇದು ಕಾಲರಾ, ಟೈಫಾಯಿಡ್ ಡೆಂಗ್ಯೂ, ಮಲೇರಿಯಾ ಮತ್ತು ಅತಿಸಾರದಂತಹ ರೋಗಗಳನ್ನು ಹರಡುತ್ತದೆ.
ಚರ್ಮ ಮತ್ತು ಕಣ್ಣಿನ ರೋಗಗಳು
ತ್ಯಾಜ್ಯ ಕೊಳೆಯುತ್ತಿದ್ದಂತೆ, ಸೂಕ್ಷ್ಮ ಕಣಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ. ಈ ಕಣಗಳು ಚರ್ಮದ ಸಂಪರ್ಕಕ್ಕೆ ಬಂದರೆ, ಅವು ತುರಿಕೆ ಅಥವಾ ದದ್ದುಗಳಿಗೆ ಕಾರಣವಾಗಬಹುದು. ಅವು ಕಣ್ಣಿನ ಕಿರಿಕಿರಿ ಮತ್ತು ಕೆಂಪು ಬಣ್ಣಕ್ಕೂ ಕಾರಣವಾಗಬಹುದು.
ನಿರಂತರ ತಲೆನೋವು ಮತ್ತು ವಾಕರಿಕೆ
ಕಸದ ಬಲವಾದ ವಾಸನೆಯು ನಿರಂತರ ತಲೆನೋವು, ತಲೆತಿರುಗುವಿಕೆ, ಅಸ್ವಸ್ಥ ಭಾವನೆ, ಮತ್ತು ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಅಶುದ್ಧ ಪರಿಸರ ಮತ್ತು ನಿರಂತರ ಕೆಟ್ಟ ವಾಸನೆಯು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಅಂತಹ ವಾತಾವರಣದಲ್ಲಿ ದೀರ್ಘಕಾಲ ಇದ್ದರೆ ಇದು ಹೆಚ್ಚಿದ ಕಿರಿಕಿರಿ, ಕಳಪೆ ನಿದ್ರೆ ಮತ್ತು ಖಿನ್ನತೆಗೆ ಕಾರಣವಾಗಬಹುದು.
ಕಸದಿಂದ ಮುಕ್ತಿ ಸಿಗಲು ನೀವು ಆದಷ್ಟು ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳುವುದು ಬಹಳ ಉತ್ತಮ, ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡುವುದು. ಕಸದ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಕಸವನ್ನು ಮನೆಯ ಹತ್ತಿರ ಸುರಿಯದೆ, ಪೌರಕಾರ್ಮಿಕರಿಗೆ ನೀಡುವುದು ಈ ರೀತಿ ಮಾಡಿದ್ದರೇ ನಿಮ್ಮ ಸುತ್ತಮುತ್ತ ಸ್ವಚ್ಚವಾಗಿರುವುದಲ್ಲದೇ ಆರೋಗ್ಯವೂ ಉತ್ತಮವಾಗಿರುತ್ತದೆ.

ನೋಡಿರಿ

